
ಮಡಿಕೇರಿ ಏ.17 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.17 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಓಡಿಯಂಡ ಮತ್ತು ಅಮ್ಮುಣಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡಕ್ಕೆ 9 ವಿಕೆಟ್‍ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಮ್ಮುಣಿಚಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಗಳಿಸಿತು. ಓಡಿಯಂಡ ಕೇವಲ 1.5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 43 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು. ಕೊಚ್ಚೇರ ಮತ್ತು ಚೆಯ್ಯಂಡ (ಬಲಂಬೇರಿ) ನಡುವಿನ ಪಂದ್ಯದಲ್ಲಿ ಕೊಚ್ಚೇರ 13 ರನ್ ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಚ್ಚೇರ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 75 ರನ್ ಗಳನ್ನು ಸೇರಿಸಿತು. ಚೆಯ್ಯಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ಪಾಲಚಂಡ ಮತ್ತು ಐಚೋಡಿಯಂಡ ನಡುವಿನ ಪಂದ್ಯದಲ್ಲಿ ಐಚೋಡಿಯಂಡ ತಂಡಕ್ಕೆ 10 ವಿಕೆಟ್ ಗಳ ಗೆಲುವು ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಲಚಂಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 73 ರನ್ ಗಳನ್ನು ಗಳಿಸಿತು. ಐಚೋಡಿಯಂಡ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 77 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು. ಚೆರುವಾಳಂಡ (ಪಾಲೂರು) ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ ಚೆಕ್ಕೇರ ತಂಡ 10 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆರುವಾಳಂಡ 6 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 42 ರನ್ ಗಳನ್ನು ಸೇರಿಸಿತು. ಚೆಕ್ಕೇರ ಯಾವುದೇ 6 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 45 ರನ್ ಗಳನ್ನು ಗಳಿಸಿ ಗೆಲುವು ಕಂಡಿತು. ಬೊಳಕಾರಂಡ ಮತ್ತು ಅಡ್ಡೇಂಗಡ ನಡುವಿನ ಪಂದ್ಯದಲ್ಲಿ ಬೊಳಕಾರಂಡ ತಂಡಕ್ಕೆ 9 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಡ್ಡೇಂಗಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 51 ರನ್ ಗಳನ್ನು ಸೇರಿಸಿತು. ಬೊಳಕಾರಂಡ 6 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 52 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು.
ಆಲೆಮಾಡ ಮತ್ತು ಚಾಮೇರ ನಡುವಿನ ಹಣಾಹಣಿಯಲ್ಲಿ ಚಾಮೇರ 9 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಲೆಮಾಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 63 ರನ್ ಗಳನ್ನು ಗಳಿಸಿತು. ಚಾಮೇರ 4.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 66 ರನ್ ಗಳನ್ನು ಸೇರಿಸಿ ಗೆಲುವು ಸಾಧಿಸಿತು. ಕರ್ತಮಾಡ ಮತ್ತು ಮೋಟನಾಳಿರ ನಡುವಿನ ಪಂದ್ಯದಲ್ಲಿ ಮೋಟನಾಳಿರ 15 ರನ್ ಗಳಿಂದ ಜಯ ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೋಟನಾಳಿರ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 69 ರನ್ ಗಳನ್ನು ಸೇರಿಸಿತು. ಕರ್ತಮಾಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಗಳಿಸಿ ಸೋಲು ಕಂಡಿತು. *ಮೈದಾನ 2* ಚಂಗುಲಂಡ ಮತ್ತು ಪೊನ್ನಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೆÇನ್ನಚಂಡ 10 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚಂಗುಲಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 67 ರನ್ ಗಳನ್ನು ಗಳಿಸಿತು. ಪೊನ್ನಚಂಡ 5.1 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 71 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.
ಮೀದೇರಿರ ಮತ್ತು ಕೋಳುಮಾಡಂಡ (ಅರ್ವತ್ತೊಕ್ಲು) ನಡುವಿನ ಪಂದ್ಯದಲ್ಲಿ ಕೋಳುಮಾಡಂಡ ತಂಡಕ್ಕೆ 9 ವಿಕೆಟ್‍ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೀದೇರಿರ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 39 ರನ್ ಗಳನ್ನು ಸೇರಿಸಿತು. ಕೋಳುಮಾಡಂಡ 3.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 40 ರನ್ ಗಳನ್ನು ಗಳಿಸಿ ವಿಜಯ ಸಾಧಿಸಿತು. ಮಂಡಿರ (ನೆಲಜಿ) ಮತ್ತು ಚೊಟ್ಟಂಗಡ ನಡುವಿನ ಪಂದ್ಯದಲ್ಲಿ ಚೊಟ್ಟಂಗಡ 10 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಂಡಿರ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 34 ರನ್ ಗಳನ್ನು ಗಳಿಸಿತು. ಚೊಟ್ಟಂಗಡ 2.1 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 38 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು. ಕೊಟ್ರಮಾಡ ಮತ್ತು ಮಚ್ಚಮಾಡ ನಡುವಿನ ಪಂದ್ಯದಲ್ಲಿ ಮಚ್ಚಮಾಡ 61 ರನ್ ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಚ್ಚಮಾಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭರ್ಜರಿ 121 ರನ್ ಗಳನ್ನು ಸೇರಿಸಿತು. ಕೊಟ್ರಮಾಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 60 ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
ಓಡಿಯಂಡ ಮತ್ತು ಕೊಚ್ಚೇರ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡಕ್ಕೆ 9 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಚ್ಚೇರ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 42 ರನ್ ಗಳನ್ನು ಗಳಿಸಿತು. ಓಡಿಯಂಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 46 ರನ್ ಗಳನ್ನು ಸೇರಿಸಿ ಗೆಲುವು ಸಾಧಿಸಿತು.








