Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಕ್ಕೆ ಆಗ್ರಹ : ಸಿಎನ್‌ಸಿಯಿಂದ 48 ಗಂಟೆಗಳ ಅಹೋರಾತ್ರಿ ಸತ್ಯಾಗ್ರಹ*
  • *ಗೋಣಿಮರೂರು ಗ್ರಾಮದಲ್ಲಿ ಬಂಡಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನೆ* 
  • *ಕೋರಗಲ್ಲು ಬಸವೇಶ್ವರ ಸ್ವಾಮಿ ವಿಗ್ರಹ ಪುನರ್  ಪ್ರತಿಷ್ಠಾಪನೆ* 
  • *ಬಸ್ ಚಾಲಕ ಹೃದಯಾಘಾತದಿಂದ ಸಾವು : ಪ್ರಯಾಣಿಕರು ಅಪಾಯದಿಂದ ಪಾರು*
  • *ಹೊದ್ದೂರು : ಗ್ರಾಮೀಣ ಮಕ್ಕಳಿಗೆ ಅರಿವು ಬೇಸಿಗೆ ಶಿಬಿರ*
  • *ಹುಲಿ ದಾಳಿಗೆ ಹಸು ಬಲಿ*
  • *ಡೊನೇಷನ್ ಹಾವಳಿ ವಿರೋಧಿಸಿ ವಿರಾಜಪೇಟೆಯಲ್ಲಿ ಎಸ್‍ಎಫ್‍ಐ ಪ್ರತಿಭಟನೆ*
  • *ವಿರಾಜಪೇಟೆ : ಮೇ 26 ರಂದು ನುಡಿ ಉತ್ಸವದ ರಾಷ್ಟ್ರಮಟ್ಟದ ವಿಚಾರ ಸಂಕಿರಣ*
  • *ಕೊಡಗು : ಅನಧಿಕೃತ ಹೋಂ-ಸ್ಟೇಗಳ ವಿರುದ್ಧ ಕಠಿಣ ಕ್ರಮ : ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಎಚ್ಚರಿಕೆ*
  • *ಮೇ 10ರ ವರೆಗೆ ಸಂತ ಅಂತೋಣಿ ದೇವಾಲಯದ ವಾರ್ಷಿಕ ಮಹೋತ್ಸವ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಸಂತೋತ್ಸವ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಸಂತೋತ್ಸವ*

ಮೇ 7, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಗೋಣಿಕೊಪ್ಪ ಮೇ 7 NEWS DESK : ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಅವಭೃತ ಸ್ನಾನ, ಭಗಂಡೇಶ್ವರ ದೇವಸ್ಥಾನದಲ್ಲಿ ದೇವಿಯ ವಸಂತೋತ್ಸವದೂಂದಿಗೆ ತಾವೂರು ಮಹಿಷಾಸುರ ಮರ್ದಿನಿ ದೇವಿಯ ವಾರ್ಷಿಕ ಉತ್ಸವ ನೆರವೇರಿತು. 8 ದಿನಗಳು ನಡೆದ ಉತ್ಸವದಲ್ಲಿ ಅಂದಿ ಬೆಳಕು, ಮನೆಯಿಂದ ಭಂಡಾರತರುವುದು, ದೇವಿಬಲಿ ಉತ್ಸವ, ದೇವರ ದರ್ಶನ, ನೃತ್ಯಬಲಿ, ವಸಂತೋತ್ಸವ, ನೆರಪಿನ ಉತ್ಸವ, ಭಂಡಾರಕಾಣಿಕೆ, ಪ್ರಸಾದ ವಿತರಣೆ, ದೇವರ ಹರಕೆ ಸೇವೆಗಳು, ಅಂಬುಕಾಯಿ, ಎತ್ತು ಪೊರಾಟ, ಬೇಡುಕೋಲ, ಹರಕೆ ಸೇವೆಗಳು, ಶಯನೋತ್ಸವ, ಶುದ್ಧ ಕಲಸ, ಕಲಶಾಭಿಷೇಕ, ಮಂತ್ರಾಕ್ಷತೆ, ನಡೆಯಿತು. ಸಾವಿರಾರು ವರ್ಷಗಳ ಹಿಂದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ರೈತಾಪಿ ಕುಟುಂಕ್ಕೆ ಬೆಳಕಿನ ಆಕಾರದ ಶಕ್ತಿಯೊಂದು ಗೋಚರಿಸಿದೆ. ಅ ಬೆಳಕನ್ನು ಹಿಂಬಾಲಿಸಿ ಹೋದಾಗ ಮಣ್ಣಿನಲ್ಲಿ ಹುದು ಹೋಗಿದ್ದದೇವಿಯ ಮೂರ್ತಿ ವಿಗ್ರಹಒಂದು ಕಾಣಿಸುತ್ತದೆ. ವಿಶೇಷವಾಗಿ ವಿಗ್ರಹದ ಪಾದದ ಅಡಿಯಲ್ಲಿ ಮಹಿಷಾಸುರ ಸಂಹಾರದದೃಶ್ಯವೂ ಅಡಗಿರುತ್ತದೆ. ಹೀಗಾಗಿ ಈ ವಿಗ್ರಹಕ್ಕೆ ಮಹಿಷಾಸುರ ಮರ್ದಿನಿ ಎಂಬ ಹೆಸರನ್ನ ನೀಡಿ, ವಿಗ್ರಹ ಸಿಕ್ಕಿದ ಸ್ಥಳದಲ್ಲಿ 4 ಮರದ ಕಂಬಗಳನ್ನು ನೆಟ್ಟು ಸೊಪ್ಪಿನಚಪರವಾಗಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗೆ ಈ ಸ್ಥಳದಲ್ಲಿ ದೇವಿಯ ಪೂಜೆ ಮುಂದುವರೆದು ಹುಲ್ಲಿನ ಹಾಸಿನ ಗರ್ಭಗುಡಿ ನಿರ್ಮಾಣವಾಗುತ್ತದೆ. ನಂತರದಲ್ಲಿ ಈ ಭಾಗದ ಸಮಾಂತನಾಗಿದ್ದ ಕರ್ಣಬಾಹು ಎಂಬುವನು ಮಣ್ಣಿನ ಗೋಡೆಗಳಿಂದ ದೇವಸ್ಥಾನವನ್ನು ನಿರ್ಮಿಸಿ ಗ್ರಾಮಸ್ಥರ ಆರಾಧನೆಗೆ ವ್ಯವಸ್ಥೆರೂಪಿಸುತ್ತಾನೆ ಎಂಬುವುದು ಇಲ್ಲಿನ ಜನರು ದೇವಸ್ಥಾನದ ವಿಚಾರವಾಗಿ ತಿಳಿಸುವ ಮಾಹಿತಿಯಾಗಿದೆ. ಕ್ಷೇತ್ರದಲ್ಲಿ ಭಂಗಡೇಶ್ವರ ಮತ್ತು ಕಾವೇರಿ ಮಾತೆದೇವರ ಆರಾಧನೆ ಇದ್ದರೂ, ಮಣ್ಣಿನಲ್ಲಿ ಉದ್ಭವಿಸಿದ ಆ ದೇವಿಯ ಮೂರ್ತಿಯನ್ನೇ ಗ್ರಾಮ ದೇವತೆಯಾಗಿ ಪೂಜಿಸಿ ಇಷ್ಟಾರ್ಥ ಸಿದ್ದಿಗಳನ್ನು ಪಡೆದುಕೊಂಡು ಬದುಕಿನಲ್ಲಿ ನೆಮ್ಮದಿ ಕಂಡುಕೊಂಡಿರುವುದು ತಾವೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಭಕ್ತಿ ಆರಾಧನೆಯಾಗಿದೆ. ಇಂತಹ ಧಾರ್ಮಿಕ ಇತಿಹಾಸವುಳ್ಳ ಭಾಗಮಂಡಲ ತಾವೂರು ಗ್ರಾಮದ ಮಹಿಷಾಸುರ ಮರ್ದಿನಿ ದೇವಿಯ ವಾರ್ಷಿಕ ಪೂಜೆಯಲ್ಲಿ ಮದುವೆಯಾದ ಹೆಣ್ಣು ಮಕ್ಕಳು ತವರೂರಿನ ದೇವರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿ ಭಾಗವಾಹಿಸುತ್ತಾರೆ. ಗಂಡನ ಮನೆಯಲ್ಲಿ ಎದುರಾದ ಅನಾರೋಗ್ಯಇನ್ನಿತರ ಸಮಸ್ಯೆಗಳಿಗೆ ಹರಕೆಒಪ್ಪಿಸುವವಾಡಿಕೆ ಈಗ್ರಾಮದೇವರ ಮೇಲಿನ ಶಕ್ತಿಯನ್ನು ತಿಳಿಸುತ್ತದೆ. ಊರಿನಲ್ಲಿ ಮತ್ತುಕೊಟ್ಟ ಹೆಣ್ಣು ಮಕ್ಕಳ ಮನೆಯಲ್ಲಿ ಹಬ್ಬದಂದು ಸಾತ್ವಿಕಆಹಾರ ಪದಾರ್ಥಕಡುಂಬುಟ್ಟು, ತರಕಾರಿ ಪಲಹಾರ ಸೇವಿಸುವ ವಾಡಿಕೆಯು ಇದೆ. ಹಬ್ಬವನ್ನು 12 ಮನೆತನಗಳಾದ ಅಮೆ, ಬಾರಿಕೆ, ಕೂಡಕಂಡಿ, ಹೊಸಗದ್ದೆ, ಕುದುಕುಳಿ, ಕುರಂಜಿ, ಚೆದುಕಾರು, ಕೋಳಿಬೈಲು, ಕಾವೇರಿ ಮನೆ, ಐಯ್ಯಣೀರ, ಗೌಡುಧಾರೆ ಕುಟುಂಬಗಳು ಹಬ್ಬವನ್ನು ನಡೆಸಿಕೊಟ್ಟರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೋಳಿಬೈಲು ಸಿ.ವೆಂಕಟೇಶ್, ಉಪಾಧ್ಯಕ್ಷ ಅಯ್ಯಣೀರ ಎ.ದಿನೇಶ್, ಕಾರ್ಯದರ್ಶಿ ಬಾರಿಕೆ ಎ.ತೀರ್ಥಕುಮಾರ್, ತಕ್ಕ ಮುಖ್ಯಸ್ಥ ಕುರುಂಜಿ ಸಿ.ದೇವಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದುಕುಳಿ ಸಿ.ಅಶ್ವತ್, ಖಜಾಂಚಿ ಹೊಸಗದ್ದೆ ಸಿ. ವೆಂಕಟರಮಣ, ತಾವೂರು ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಅಮೆ ಬಾಲಕೃಷ್ಣ, ದೇವಸ್ಥಾನದ ಆಡಳಿತ ಮಂಡಳಿ ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರು ಇದ್ದರು. ಉತ್ಸಹದಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದರು. ಗ್ರಾಮೀಣ ಭಾಗಗಳಲ್ಲಿ ದೇವಸ್ಥಾನಗಳಿರುವುದರಿಂದ ಅಲ್ಲಿನ ವಾತಾವರಣ ಶಾಂತಿಯುತವಾಗಿ ಇರಲು ಸಾಧ್ಯವಾಗುತ್ತದೆ. ಊರಿನವರು ಒಂದೆಡೆ ಸೇರಲು ಸಹ ಅನುಕೂಲವಾಗುತ್ತದೆ. ಧಾರ್ಮಿಕತೆಯನ್ನು ಎತ್ತಿ ಹಿಡಿಯಲು ದೇವಾಲಯಗಳ ನಿರ್ಮಾಣ ಉತ್ತಮ. ಮಹಿಷಾಸುರ ಮರ್ದಿನಿ ದೇವರ ಶಕ್ತಿ ಬಹಳ ವಿಶೇಷವಾಗಿದೆ. ಆ ಶಕ್ತಿ ಭಕ್ತಿಯಿಂದ ಮಾತ್ರ ಒಲಿಯುತ್ತದೆ. ಆ ನಿಟ್ಟಿನಲ್ಲಿ ದೇವಾಲಯದ ಪೂಜಾ ಕಾರ್ಯಗಳು ಭಕ್ತಿಯಿಂದ ಆರಾಧನೆ ಆಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗುಜರಾತ್‍ರಾಜ್ಯ ಸಭಾ ಸದಸ್ಯ ಕೇಸರಿದೇವ್ ಸಿನ್ಹ್ ಝಾಲಾ ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಕ್ಕೆ ಆಗ್ರಹ : ಸಿಎನ್‌ಸಿಯಿಂದ 48 ಗಂಟೆಗಳ ಅಹೋರಾತ್ರಿ ಸತ್ಯಾಗ್ರಹ*

ಮೇ 8, 2026

*ಗೋಣಿಮರೂರು ಗ್ರಾಮದಲ್ಲಿ ಬಂಡಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನೆ* 

ಮೇ 8, 2026

*ಕೋರಗಲ್ಲು ಬಸವೇಶ್ವರ ಸ್ವಾಮಿ ವಿಗ್ರಹ ಪುನರ್  ಪ್ರತಿಷ್ಠಾಪನೆ* 

ಮೇ 8, 2026

*ಗೋಣಿಮರೂರು ಗ್ರಾಮದಲ್ಲಿ ಬಂಡಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನೆ* 

ಮೇ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ NEWS DESK ಮೇ 8 : : ತಾಲ್ಲೂಕಿನ  ಗೋಣಿಮರೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಗ್ರಾಮದೇವತೆ ಬಂಡಿಯಮ್ಮ ದೇವರ…

*ಕೋರಗಲ್ಲು ಬಸವೇಶ್ವರ ಸ್ವಾಮಿ ವಿಗ್ರಹ ಪುನರ್  ಪ್ರತಿಷ್ಠಾಪನೆ* 

ಮೇ 8, 2026

*ಬಸ್ ಚಾಲಕ ಹೃದಯಾಘಾತದಿಂದ ಸಾವು : ಪ್ರಯಾಣಿಕರು ಅಪಾಯದಿಂದ ಪಾರು*

ಮೇ 8, 2026

*ಹೊದ್ದೂರು : ಗ್ರಾಮೀಣ ಮಕ್ಕಳಿಗೆ ಅರಿವು ಬೇಸಿಗೆ ಶಿಬಿರ*

ಮೇ 7, 2026

*ಹುಲಿ ದಾಳಿಗೆ ಹಸು ಬಲಿ*

ಮೇ 7, 2026

*ಡೊನೇಷನ್ ಹಾವಳಿ ವಿರೋಧಿಸಿ ವಿರಾಜಪೇಟೆಯಲ್ಲಿ ಎಸ್‍ಎಫ್‍ಐ ಪ್ರತಿಭಟನೆ*

ಮೇ 7, 2026

*ವಿರಾಜಪೇಟೆ : ಮೇ 26 ರಂದು ನುಡಿ ಉತ್ಸವದ ರಾಷ್ಟ್ರಮಟ್ಟದ ವಿಚಾರ ಸಂಕಿರಣ*

ಮೇ 7, 2026

*ಕೊಡಗು : ಅನಧಿಕೃತ ಹೋಂ-ಸ್ಟೇಗಳ ವಿರುದ್ಧ ಕಠಿಣ ಕ್ರಮ : ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಎಚ್ಚರಿಕೆ*

ಮೇ 7, 2026

*ಮೇ 10ರ ವರೆಗೆ ಸಂತ ಅಂತೋಣಿ ದೇವಾಲಯದ ವಾರ್ಷಿಕ ಮಹೋತ್ಸವ*

ಮೇ 7, 2026

*ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಚಿ.ನಾ.ಸೋಮೇಶ್ ಅವರಿಗೆ ಸನ್ಮಾನ*

ಮೇ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.