
ಸುಂಟಿಕೊಪ್ಪ ಮೇ 11 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ಆವರಣದಲ್ಲಿ ಧ್ವಜಾರೋಹಣ ಹಾಗೂ ಅಡಂಬರ ದಿವ್ಯ ಬಲಿಪೂಜೆ ನೆರವೇರಿಸುವ ಮೂಲಕ ಮೈಸೂರು ಧರ್ಮಕ್ಷೇತ್ರದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯಾದ ರೇ.ಫಾ. ಎಡ್ವರ್ಡ್ ವಿಲಿಯಂ ಸಲ್ಡಾನಾ ಹಾಗೂ ಮಡಿಕೇರಿ ವಲಯ ದರ್ಮಗುರುಗಳು ಮತ್ತು ಸಂತ ಮೈಕಲರ ದೇವಾಲಯದ ಧರ್ಮಗುರುಗಳಾದ ಜಾರ್ಜ್ ದೀಪಕ್, ಬೆಂಗಳೂರಿನ ಧರ್ಮಗುರುಗಳು ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೇ.ಫಾ.ವಿಜಯಕುಮಾರ್ ಚಾಲನೆ ನೀಡಿದರು. ಬಲಿಪೂಜೆ ಹಾಗೂ ಆರಾಧನೆಯನ್ನು ಕೆ.ಆರ್.ಪೇಟೆಯ ಬಾಲ ಯೇಸುವಿನ ದೇವಾಲಯದ ಧರ್ಮಗುರುಗಾಳದ ಟಿ.ಪೌಲೂಸ್ ಅವರುಗಳು ನೆರವೇರಿಸಿದರು. ಮಕ್ಕಳಿಗೆ ನೂತನ ಪರಮ ಪ್ರಸಾದ ಸಂಸ್ಕಾರ ಮತ್ತು ಅಡಂಬರ ದಿವ್ಯ ಬಲಿಪೂಜೆಯನ್ನು ಏಕಾರ್ಡ್ ಎಸ್ಟೇಟ್ ಸಹಾಯಕ ಧರ್ಮಗುರುಗಾಳದ ಚಾಲ್ರ್ಸ್ ಪೆರಿಯನಾಗಮ್ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೇ.ಫಾ.ವಿಜಯಕುಮಾರ್ ಆಡಂಬರ ದಿವ್ಯ ಬಲಿಪೂಜೆ ಪ್ರಭೋದನೆ ಮತ್ತು ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಸಂಸ್ಕಾರ ವಿತರಿಸಿದರು. ಸಂತ ಅಂತೋಣಿ ದೇವಾಲಯದ ಧರ್ಮಗುರುಗಳು ಹಾಗೂ ಕ್ರೈಸ್ತ ಭಕ್ತಾಧಿಗಳು ಕನ್ನಡ ವೃತ್ತದಲ್ಲಿ ಮೈಸೂರು ಧರ್ಮಕ್ಷೇತ್ರದ ಮೈಸೂರು ಧರ್ಮಕ್ಷೇತ್ರ ಧರ್ಮಾಧ್ಯಕ್ಷರಾದ ಡಾ. ಎಸ್.ಜೆ.ಫ್ರಾನ್ಸಿಸ್ ಸೆರಾವೋ ಅವರನ್ನು ಕನ್ನಡ ವೃತ್ತದಲ್ಲಿ ಭವ್ಯ ಸ್ವಾಗತಕೋರಿ ಬರಮಾಡಿಕೊಳ್ಳಲಾಯಿತು. ಮೈಸೂರು ಧರ್ಮಕ್ಷೇತ್ರದ ಮೈಸೂರು ಧರ್ಮಕ್ಷೇತ್ರ ಧರ್ಮಾಧ್ಯಕ್ಷರಾದ ಡಾ. ಎಸ್.ಜೆ.ಫ್ರಾನ್ಸಿಸ್ ಸೆರಾವೋ ಹಬ್ಬದ ಅಡಂಬರ ಗಾಯನ ದಿವ್ಯ ಬಲಿಪೂಜೆಯನ್ನು ಮಡಿಕೇರಿ ವಲಯದ ಶೇಷ್ಠ ಗುರುಗಳಾದ ಫಾಧರ್ ಜಾರ್ಜ್ ದೀಪಕ್, ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ವಲಯದ ಶ್ರೇಷ್ಠ ಧರ್ಮ ಗುರುಗಳಾದ ಜೇಮ್ಸ್ ಡೋಮಿನಿಕ್ ನೇರವೇರಿಸಿದರು. ಮೈಸೂರು ಧರ್ಮಕ್ಷೇತ್ರದ ವಿವಿಧ ಧರ್ಮ ಕೇಂದ್ರಗಳಿಂದ ಸುಮಾರು 25 ಮಿಕ್ಕಿ ದೇವಾಲಯಗಳಿಂದ ಆಗಮಿಸಿದ್ದ ಧರ್ಮಗುರುಗಳು ಒಗ್ಗೂಡಿ ಆಡಂಬರ ಬಲಿಪೂಜೆಯನ್ನು ನೇರವೇರಿಸಿದರು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಾಲಕಗಳಿಂದ ಅಲಂಕಾರಿಸಲಾಗಿತ್ತು. ಹಟ್ಟಿಹೊಳೆ ದೇವಾಲಯದ ಧರ್ಮಗರುಗಳಾದ ಗಿಲ್ಬರ್ಟ್ ಡಿಸಿಲ್ವ, ಕೂಡಿಗೆ ಚಾಲ್ಸ್ ನರೋನ, ಪೌಲ್ ಹೇರ್ಸ, ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ರೇ. ಪಾ. ಅವಿನಾಶ್, ರಾಯಲ್ ಕ್ರಾಸ್ತಾ, ಹ್ಯಾರಿಟೇರಿ, ಆರ್ಜಿ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಎನ್.ಟಿ.ಜೋಸೆಫ್, ಆಮ್ಮತಿ ಸಂತ ಅಂತೋಣಿ ದೇವಾಲಯದ ಮದಲೈಮುತು,ಪುಷ್ಪಗೀರಿ ಬಾಲ ಯೇಸು ದೇವಾಲಯದ ಮರಿಯನ್ ಕ್ಸೇವಿಯರ್,ರೇ.ಪಾ.ಚಾಲ್ಸ್ ಹಾಗೂ ಸಂತ ಅಂತೋಣಿ ದೇವಾಲಯದ ಫಾಧರ್ ವಿಜಯಕುಮಾರ್ ಮತ್ತಿತರರು ಇದ್ದರು. ಸಂತ ಕ್ಲಾರ ಕನ್ಯಾಸ್ತ್ರಿ ಮಠದ ಕನ್ಯಾಸ್ತ್ರೀಯರು, ಕುಶಾಲನಗರ, ಹೊಸಕೋಟೆ, ಸೋಮವಾರಪೇಟೆ ಸೇರಿದಂತೆ ವಿವಿಧ ಭಾಗಗಳಿಂದ ಕನ್ಯಾಸ್ತ್ರಿಯರು ದೇವಾಲಯದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.









