

ಮಡಿಕೇರಿ,ಮೇ 15 NEWS DESK : ಮಡಿಕೇರಿಯಲ್ಲಿರುವ ಕೊಡವ ಹೆರಿಟೇಜ್ ಕೇಂದ್ರವನ್ನು ಮಡಿಕೇರಿ ಕೊಡವ ಸಮಾಜಕ್ಕೆ ಹಸ್ತಾಂತರಿಸುವ ಕುರಿತು ಮಡಿಕೇರಿ ಕ್ಷೇತ್ರದ ಡಾ.ಮಂತ್‍ರ್ ಗೌಡ ಅವರ ನೇತೃತ್ವದಲ್ಲಿ ಚರ್ಚೆ ನಡೆಸಲಾಯಿತು. ನಗರದ ಸುದರ್ಶನ್ ಅತಿಥಿ ಗೃಹದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಸಕರೊಂದಿಗೆ ಚರ್ಚಿಸಿ, ಕೊಡವ ಹೆರಿಟೇಜ್ ಕೇಂದ್ರದ ಕಟ್ಟಡ ಕಾಮಗಾರಿ ಶೇ.90ರಷ್ಟು ಮುಕ್ತಾಯವಾಗಿದ್ದು, ಒಳಾಂಗಣ ಕಾಮಗಾರಿಗಳು ಬಾಕಿ ಇವೆ. ಇದನ್ನು ಕೊಡವ ಸಂಸ್ಕøತಿಯ ಮ್ಯೂಸಿಯಂ ಮಾದರಿಯಲ್ಲಿ ಅನುಷ್ಟಾನ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕೊಡವ ಹೆರಿಟೇಜ್ ಕೇಂದ್ರದ ನಿರ್ವಹಣೆ, ಮೇಲ್ವಿಚಾರಣೆಗಾಗಿ ಕೇಂದ್ರವನ್ನು ಕೊಡವ ಸಮಾಜಕ್ಕೆ ಹಸ್ತಾಂತರಿಸಿದರೆ ಸುಲಭವಾಗುತ್ತದೆ ಎಂದು ಶಾಸಕರ ಗಮನ ಸೆಳೆದರು. ಬಳಿಕ ಶಾಸಕ ಡಾ.ಮಂತರ್ ಗೌಡ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಮಡಿಕೇರಿ ಕೊಡವ ಸಮಾಜ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ನಿರ್ವಹಿಸುವ ವಿಶ್ವಾಸವಿದೆ. ಕೊಡವ ಹೆರಿಟೇಜ್ ಕೇಂದ್ರದ ಜವಾಬ್ದಾರಿಯನ್ನು ಕೊಡವ ಸಮಾಜಕ್ಕೆ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಹಾಜರಿದ್ದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರಿಗೆ ಈ ಕುರಿತು ಕ್ರಮವಹಿಸುವಂತೆ ಸೂಚಿಸಿದರು. ಶಾಸಕ ಡಾ. ಮಂತರ್ ಗೌಡ ಅವರ ಆಡಳಿತ 3 ವರ್ಷ ಪೂರೈಸಿದ ಹಿನ್ನೆಲೆ ಹಾಗೂ ಕೊಡವ ಸಮಾಜಕ್ಕೆ ಸಂಪೂರ್ಣ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಮಡಿಕೇರಿ ಕೊಡವ ಸಮಾಜದ ವತಿಯಿಂದ ಒಡಿ ಕತ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕೊಡವ ಸಮಾಜ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಮಾಜಿ ಎಂಎಲ್‍ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ನಂದಿನೆರವಂಡ ರವಿ ಬಸಪ್ಪ, ಮೂವೆರ ಜಯರಾಂ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಪುತ್ತರಿರ ಕರುಣ್ ಕಾಳಯ್ಯ, ಮಂಡಿರ ಸದಾ ಮುದ್ದಪ್ಪ, ಕನ್ನಂಡ ಕವಿತಾ ಬೊಳ್ಳಪ್ಪ, ಪೆಮ್ಮುಡಿಯಂಡ ಉತ್ತಪ್ಪ, ಪುಲ್ಲೇರ ವಸಂತ, ಪಾಲೆಯಂಡ ರೂಪಾ, ಕೂಪದಿರ ಜೂನ ವಿಜಯ್, ಶಾಂತೆಯಂಡ ಶ್ವೇತಾ ಕಾರ್ಯಪ್ಪ ಉಪಸ್ಥಿತರಿದ್ದರು.








