
ಸುಂಟಿಕೊಪ್ಪ ಮೇ 20 NEWS DESK : ಸುಂಟಿಕೊಪ್ಪದಲ್ಲಿ ಕೊಡಗು ಜಿಲ್ಲಾ 17ನೇ ಸಾಹಿತ್ಯ ಸಮ್ಮೇಳನವು ಮೇ 29 ಮತ್ತು 30 ರಂದು ನಡೆಸಲು ಈಗಾಗಲೇ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಹಲವು ವೈಶಿಷ್ಟತೆಯನ್ನು ಹೊಂದಿರುವ ತವರೂರಾದ ಸುಂಟಿಕೊಪ್ಪ ತನ್ನದೆಯಾದ ಇತಿಹಾಸವನ್ನು ಇರಿಸಿಕೊಂಡಿದೆ. ಸುಂಟಿಕೊಪ್ಪ ಪಟ್ಟಣದ ಹೃದಯ ಭಾಗದಲ್ಲಿರುವ ವೃತ್ತವೊಂದಕ್ಕೆ ಕನ್ನಡ ವೃತ್ತ ಎಂದು ಪದನಾಮ ಮಾಡಲಾಗಿದ್ದು, ವೃತ್ತದಲ್ಲಿ ನಮ್ಮ ಸುಂಟಿಕೊಪ್ಪ ಬಳಗದವರು ಕನ್ನಡದ ಅಕ್ಷರ ಮಾಲೆಯನ್ನು ಅಳವಡಿಸಿದ್ದಾರೆ. ಇದರಿಂದ ಈ ವೃತ್ತದ ಮೆರಗನ್ನು ಇನ್ನಷ್ಟು ಹೆಚ್ಚಿಸಿದೆ. ಈ ಕನ್ನಡ ವೃತ್ತಕ್ಕೆ 4 ದಶಕಗಳ ಇತಿಹಾಸವಿದ್ದು ಕಳೆದ 32 ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಟನೆಗಳು ಸೇರಿ ಅದ್ಧೂರಿಯಾಗಿ ಆಚರಿಸುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ತಾತ್ಕಲಿಕ ಕಚೇರಿಯನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡದಲ್ಲಿ ತೆರೆಯುವ ಮೂಲಕ ಕಾರ್ಯಪ್ರವೃತವಾಗಿದೆ. ಸಮ್ಮೇಳದ ಆಶೋತ್ತರಗಳನ್ನು ಪ್ರತಿಬಿಂಬಿಸುವ ಲಾಂಛನವನ್ನು ಕನ್ನಡ ಸಾಹಿತ್ಯ ಸಂಸ್ಥಾಪನ ದಿನದಂದು ಅನಾವರಣಗೊಳಿಸಲಾಗಿದೆ ಸಮ್ಮೇಳನದ ನೆನಪುಗಳನ್ನು ಚಿರಸ್ಥಾಯಿ ಆಗಿಸಲು ವಿಶೇಷ ಸಂದರ್ಶನಗಳು ಲೇಖನಗಳು ಮತ್ತು ಚಿತ್ರ ಸಂಪುಟದೊಂದಿಗೆ ಸ್ಮರಣ ಸಂಚಿಕೆಯೊಂದನ್ನು ಹೊರ ತರಲಾಗುವುದು. ಈಗಾಗಲೇ ಜಿಲ್ಲಾ ಕಸಾಪ, ಹೋಬಳಿ ಕಸಾಪ ಸಾಕಷ್ಟು ಪೂರ್ವಬಾವಿ ಸಭೆಗಳನ್ನು ನಡೆಸಿದ್ದು ಮಡಿಕೇರಿ ವಿಧಾಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್‍ಗೌಡ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಇದ್ದಾರೆ. ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಎ.ಲೋಕೇಶ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಾಗತ ಸಮಿತಿಯ ಗೌರವಧ್ಯಕ್ಷರುಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರುಗಳು ಇದ್ದಾರೆ. ಸಮ್ಮೇಳನವನ್ನು ಯಶಸ್ವಿಗೊಳಿಸಲು ವಿವಿಧ ಉಪಸಮಿತಿಗಳನ್ನು ರಚಿಸಿಕೊಳ್ಳಲಾಗಿದ್ದು ಅವೆಲ್ಲಾವೂ ತಮ್ಮ ವ್ಯಾಪ್ತಿಯ ಕಾರ್ಯನಿರ್ವಹಣೆಯಲ್ಲಿ ತೊಡಗಿವೆ ವಿಶೇಷವಾಗಿ ಹಣಕಾಸು ಸಮಿತಿಯಲ್ಲಿ ಅರ್ಥಿಕ ಸಂಪೂನ್ಮೂಲ ಕ್ರೂಡೀಕರಣ ಮೆರವಣಿಗೆ, ಸ್ಮರಣ ಸಂಚಿಕೆ, ಆಹಾರ ಮತ್ತು ಅಲಂಕಾರ, ಸಾಂಸ್ಕøತಿಕ ಹಾಗೂ ದ್ವಾರ ಸಮಿತಿಗಳನ್ನು ರಚಿಸಲಾಗಿದೆ. 17ನೇ ಸಮ್ಮೇಳನದ ಹಿನ್ನಲೆಯಲ್ಲಿ ಸುಂಟಿಕೊಪ್ಪ ವ್ಯಾಪ್ತಿಯ ಪ್ರತಿಷ್ಠಿತ ಕುಟುಂಬಗಳು ಹಾಗೂ ಗಣ್ಯರ ಹೆಸರಿನಲ್ಲಿ 17 ಮಹಾದ್ವಾರಗಳನ್ನು ನಿರ್ಮಿಸಲಾಗುತ್ತದೆ. ಸಮ್ಮೇಳನ ನಡೆಯುವ ಸಭಾಂಗಣ ಮತ್ತು ಮುಖ್ಯ ವೇದಿಕೆಗೆ ಕನ್ನಡ ನಾಡು ನುಡಿಗೆ ಗಣನೀಯ ಸೇವೆ ಮಾಡಿದವರ ಹೆಸರನ್ನು ಇಡಲಾಗುವುದೆಂದು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾಹಿತಿ ನೀಡಿದರು. ನಾಡಿನ ಅಭಿವೃದ್ಧಿ ಸಾಹಿತಿಕ ವಿಚಾರಗಳು ನಿತ್ಯ ಜೀವನದ ಸಮಸ್ಯೆಗಳ ಬಗ್ಗೆ ಬೆಳಕು ಚೆಲುವ ವಿಚಾರಗೋಷ್ಠಿ ಮನಸ್ಸಿಗೆ ಮುಂದಾನೀಡುವ ಕವಿಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮಗಳು ಕನ್ನಡ ಗೀತಾಗಾಯನ ಕಾರ್ಯಕ್ರಮಗಳು ಆಕರ್ಷಿಸಲ್ಲಿವೆ. ಸಮ್ಮೇಳನದಲ್ಲಿ 17 ಮಂದಿ ಜಿಲ್ಲೆಯ ಸಾಧಕರನ್ನು ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಸನ್ಮಾನಿಸಲಾಗುವುದು. ಸುಂಟಿಕೊಪ್ಪದಲ್ಲಿ ಪುಟ್ಬಾಲ್ ಮಾತ್ರವಲ್ಲದೆ ಹಾಕಿ, ಬಾಸ್ಕೆಟ್‍ಬಾಲ್, ಹ್ಯಾಂಡ್‍ಬಾಲ್, ಸೆಸ್ಟೋಬಾಲ್ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧಕರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ.
ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಗೌರವಿಸುವ ಕಾಆರ್ಯಕ್ರಮವು ನಡೆಯಲಿದೆ ವಿವಿಧ ಕ್ಷೇತ್ರಗಳಲ್ಲಿ ಬಾಲ ಪ್ರತಿಭೆಗಳಾಗಿ ಸಾಧನೆ ಮಾಡಿದ ಮಕ್ಕಳನ್ನು ಕೂಡ ಗೌರವಿಸಲಾಗುತ್ತದೆ ಎಂದು ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸಮ್ಮೇಳನದ ಮಹಾಪ್ರಧಾನ ಕಾರ್ಯದರ್ಶಿ ಪಿ.ಎಫ್.ಸಬಾಸ್ಟಿನ್ ಮಾಹಿತಿ ನೀಡಿದ್ದಾರೆ. ಸರಕಾರದ ನಿಗಧಿತ ಅನುದಾನದ ಜೋತೆಗೆ ಶಾಸಕರುಗಳ ಪ್ರಯತ್ನವು ಸೇರಿ ಜಿಲ್ಲೆಯ ಕನ್ನಡಾಭಿಮಾನಿಗಳು ದಾನಿಗಳು ಸಾಹಿತ್ಯಾಸ್ತಕರು ತಮ್ಮೂರಿನಲ್ಲಿ ನಡೆಯುವ ಕನ್ನಡ ಹಬ್ಬಕ್ಕೆ ತನು ಮನ ಧನಗಳನ್ನು ನೀಡಿ ಅಭೂತಪೂರ್ವ ಯಶಸ್ವಿಗೆ ಕಾರಣಿಭೂತರಾಗುವ ಖಚಿತ ಭರವಸೆಯೊಂದಿಗೆ ಹೋಬಳಿ ಕಸಾಪ ಹಾಗೂ ಉಪಸಮಿತಿಗಳು ಕಾರ್ಯಪ್ರವೃತವಾಗಿದೆ ಎಂದು ಸ್ವಾಗತ ಸಮಿತಿಯ ಉಪಾಧ್ಯಕ್ಷರು ಹಾಗೂ ಹಣಕಾಸು ಸಮಿತಿಯ ಅಧ್ಯಕ್ಷರಾಗಿರುವ ದೃಢವಾಗಿ ನುಡಿದರು. ವಿಶೇಷವೆಂದರೇ ತಮ್ಮ ಬರವಣಿಗೆಯ ಆರಂಭದ ದಿನಗಳಲ್ಲೇ ಕೇಂದ್ರ ಸಾಹಿತ್ಯ ಆಕಾಡಮಿ ಯುವ ಪುರಸ್ಕಾರಕ್ಕೆ ಪಾತ್ರರಾದ ಸುಂಟಿಕೊಪ್ಪದವರೇ ಆದ ಅಬ್ಧುಲ್‍ರಶೀದ್ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಈಗಾಗಲೇ ಜಿಲ್ಲಾ ಕಸಾಪ ಕುಶಾಲನಗರ ತಾಲೂಕು ಕಸಾಪ ಮತ್ತು ಸುಂಟಿಕೊಪ್ಪ ಹೋಬಳಿ ಕಸಾಪದ ವತಿಯಿಂದ ಸಮ್ಮೇಳನದ ಸ್ವಾಗತ ಸಮಿತಿಯು ಅಬ್ಧುಲ್ ರಶೀದ್ ಅವರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದೆ. ಮೂಲತಃ ಸುಂಟಿಕೊಪ್ಪದವರಾದ ಅಬ್ಧುಲ್ ರಶೀದ್ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿ ಪದವಿಪೂರ್ವ ಶಿಕ್ಷಣವನ್ನು ಮಾದಾಪುರದ ಡಿ.ಚೆನ್ನಮ್ಮ ಕಾಲೇಜಿನಲ್ಲಿ ಪಡೆದರು. ಆಕಾಶವಾಣಿ ಉದ್ಘೋಷಕರಾಗಿ ಸೇರಿದ ಅಬ್ಧುಲ್ ರಶೀದ್ ರವರು ಇತಿಹಾಸವನ್ನು ನಿರ್ಮಿಸಿ ಈಗ ನಿವೃತ್ತ ಜೀವನದಲ್ಲಿದ್ದಾರೆ. ಅಬ್ಧುಲ್ ರಶೀದ್ ಮಡಿಕೇರಿ ಆಕಾಶವಾಣಿಯಲ್ಲಿದ್ದಾಗ ಅಂದಿನ ನಿರ್ದೇಶಕರಾಗಿದ್ದ ಇಂದಿರಾ ಯೇಸು ಪ್ರಿಯಗಜರಾಜ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಹಳ್ಳಿ ರೇಡಿಯೋ ಮತ್ತು ಕಾವೇರಿ ಎಕ್ಸ್‍ಪ್ರೆಸ್ ಇಂದಿಗೂ ಜನಮನದಲ್ಲಿ ಹಸಿರಾಗಿವೆ. ಆನೇಕ ಸಾಮಜಿಕ ಸಮಸ್ಯೆಗಳು, ಮೂಲಭೂತ ಸೌಕರ್ಯಗಳು ಹಾಗೂ ಇತರ ವಿಷಯಗಳ ಕುರಿತು ಅವರು ಚರ್ಚೆ ಹುಟ್ಟುಹಾಕಿದಲ್ಲದೆ ಅವುಗಳಿಗೆಲ್ಲಾ ತಾರ್ಕಿಕ ಅಂತ್ಯವನ್ನು ನೀಡಿದ ಕೀರ್ತಿ ಅಬ್ಧುಲ್ ರಶೀದ್ ಅವರಿಗಿದೆ.









