
ಮಡಿಕೇರಿ ಮೇ 20 NEWS DESK : 7ನೇ ಆವೃತ್ತಿಯ ಚೆನ್ನಯ್ಯನಕೋಟೆ ಪ್ರೀಮಿಯರ್ ಲೀಗ್’ ನ ಚಾಂಪಿಯನ್ಸ್ ಪಟ್ಟವನ್ನು ಸ್ಮ್ಯಾಶ್ ಟೀಂ ತನ್ನದಾಗಿಸಿಕೊಂಡರೆ ಫಾಲ್ಕನ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕಳೆದ ಮೂರು ದಿನಗಳಿಂದ ಇಲ್ಲಿನ ಸರಕಾರಿ ಶಾಲಾ ಮೈದಾನದಲ್ಲಿ ಸುಮಾರು ಎಂಟು ತಂಡಗಳ ನಡುವೆ ನಡೆದ ಈ ಪಂದ್ಯಾವಳಿಯಲ್ಲಿ ಟೀಂ ಸ್ಮ್ಯಾಶ್, ಟೀಂ ಫಾಲ್ಕನ್, ಸಹರಾ ಹಾಗೂ ಸಾಗರ್ ತಂಡ ಲೀಗ್ ಹಂತದಲ್ಲಿ ಉತ್ತಮ ಅಂಕ ಪಡೆದು ಕ್ವಾಲಿಫೈಯರ್ ಸುತ್ತಿಗೆ ಅರ್ಹತೆ ಪಡೆದವು. ಕ್ವಾಲಿಫೈಯರ್ ನಲ್ಲಿ ಗೆಲುವು ಸಾಧಿಸಿದ ಟೀಂ ಸ್ಮ್ಯಾಶ್ ಹಾಗೂ ಟೀಂ ಫಾಲ್ಕನ್ ನಡುವೆ ನಡೆದ ಫೈನಲ್ಸ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಫಾಲ್ಕನ್ಸ್ ನಿಗದಿತ 4ಓವರ್ ಗಳಲ್ಲಿ ಪ್ರಮುಖ 8 ವಿಕೆಟ್ ಕಳೆದುಕೊಂಡು 23ರನ್ನುಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಟೀಂ ಸ್ಮ್ಯಾಶ್ 3.3 ಓವರ್ ನಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು 27 ರನ್ನುಗಳ ಕಲೆ ಹಾಕುವ ಭರ್ಜರಿ ಜಯ ಸಾಧಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. 15 ಬಾಲಿಗೆ 23 ರನ್ ಬಾರಿಸುವ ಮೂಲಕ ಸ್ಮ್ಯಾಶ್ ತಂಡಕ್ಕೆ ಆಸರೆಯಾದ ಅನೀಶ್ ಫೈನಲ್ಸ್ ನ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ವಿಜೇತ ತಂಡಕ್ಕೆ 27 ಸಾವಿರ ನಗದು ಹಾಗೂ ಆಕರ್ಷಕ ಟ್ರೋಪಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 17 ಸಾವಿರ ನಗದು ಹಾಗೂ ಆಕರ್ಷಕ ಟ್ರೋಪಿ ನೀಡಿದರೆ. ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಪಿ ನೀಡಲಾಯಿತು. :: ವೈಯಕ್ತಿಕ ಪ್ರಶಸ್ತಿಗಳು : ಫಾಲ್ಕನ್ಸ್ ತಂಡದ ಪ್ರವೀಣ್ ಸರಣಿ ಶ್ರೇಷ್ಠ, ಸ್ಪೀಡ್ ಬಾಯ್ಸ್ ತಂಡದ ಚಿಕ್ಕಣ್ಣ (ಕಿತ್ತಳೆ ಕ್ಯಾಪ್) ಅತ್ಯುತ್ತಮ ಬ್ಯಾಟ್ಸ್‌ಮನ್, ಫಾಲ್ಕನ್ಸ್ ತಂಡದ ಅಭಿಜಿತ್ (ನೇರಳೆ ಕ್ಯಾಪ್) ಬೆಸ್ಟ್ ಬೌಲರ್, ಬೆಸ್ಟ್ ಫೀಲ್ಡರ್ ರಿಕ್ಷಿ, ಸಾಗರ್ ಫ್ರೆಂಡ್ಸ್ ತಂಡದ ಭಾವೆ”ಲೆಜೆಂಡ್ ಪ್ಲೇಯರ್,
“ಯುವ ಆಟಗಾರ ಪ್ರಶಸ್ತಿ ಸಫ್ವಾನ್ ಪಾಚುಗೆ ನೀಡಿದರೆ ಆಲ್ ರೌಂಡರ್ ಪ್ರಶಸ್ತಿಯನ್ನು ಪುನಿತ್ ಬೆಸ್ಟ್ ವಿಕೆಟ್ ಕೀಪರ್ ಪ್ರಶಸ್ತಿ ಅಚ್ಚು ಹಾಗೂ ಫಿರೋಜ್ ಬೆಸ್ಟ್ ಕ್ಯಾಚರ್ ಪ್ರಶಸ್ತಿ ಪಡೆದುಕೊಂಡರು. ಪ್ರಥಮ ಕ್ವಾಲಿಫೈಯರ್ ನ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಅನೀಶ್ ಪಡೆದರೆ ಎಲಿಮಿನೇಟರ್ ಪಂದ್ಯದ ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ಮದನ್ ಪಡೆದರು. ದ್ವಿತೀಯ ಕ್ವಾಲಿಫೈಯರ್ ನಲ್ಲಿ ಆಶಿಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. : ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ ಸಹಕಾರಿ : ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಲು ಹಾಗೂ ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟಗಳು ಸಹಕಾರಿ ಎಂದು ಮಾಜಿ ಜಿಲ್ಲಾಪಂಚಾಯತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದರು. ಚೆನ್ನಯ್ಯನಕೋಟೆ ಸರಕಾರಿ ಶಾಲಾ ಮೈದಾನದಲ್ಲಿ ನಡೆದ ಚನ್ನಯ್ಯನಕೋಟೆ ಪ್ರೀಮಿಯರ್ ಲೀಗಿನ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಮಾತನಾಡಿದರು
ಸಹರಾ ಯುವಕ ಸಂಘದ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಗ್ರಾಮೀಣ ಮಟ್ಟದಲ್ಲಿ ಕ್ರೀಡಾಂಗಣಗಳ ನಿರ್ಮಾಣ, ಉತ್ತಮ ತರಬೇತುದಾರರ ನೇಮಕ ಹಾಗೂ ಸೂಕ್ತ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಗ್ರಾಮೀಣ ಕ್ರೀಡಾ ರಂಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಇದೆ ಸಂದರ್ಭ ಒತ್ತಾಯಿಸಿದರು. ಹಿಂದೂ ಮಲಯಾಳಿ ಸಂಘದ ಪ್ರಶಾಂತ್, ಅರುಣ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ವಿಜು, ಉದ್ಯಮಿ ಸಮೀರ್, ಸಹರಾ ಯುವಕ ಸಂಘದ ಅಧ್ಯಕ್ಷ ರದೀಶ್ ದೀಶ್, ಸಮಾಜ ಸೇವಕ ನಿಯಾಸ್, ಪೊನ್ನಿಮಾಡ ಸುಬ್ರಮಣಿ ಹಾಗೂ ಮೀರಾ ಕಾಳಪಂಡ ಯಮುನಾ ಮಂದಣ್ಣ, ಅಶ್ರಫ್ ಸಹರಾ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.









