
ಮಡಿಕೇರಿ ಮೇ 21 NEWS DESK : ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಳ್ಳಿ ಗ್ರಾಮದ ಊರ್ ಮಂದ್ ಹೊಳೆಗೆ 35ಲಕ್ಷ ವೆಚ್ಚದ ಸೇತುವೆ ನಿರ್ಮಾಣಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಪ್ರತೀ ಗ್ರಾಮಗಳ ಅಭಿವೃದ್ಧಿಯ ಕನಸು ತನ್ನದಾಗಿದ್ದು, ಈಡೇರಿಕೆಗೆ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು. ಅಭಿವೃದ್ಧಿಯಲ್ಲಿ ಗ್ರಾಮ ನಿವಾಸಿಗಳ ಪಾತ್ರವು ಮುಖ್ಯ, ಗುಣಮಟ್ಟದ ಕಾಮಗಾರಿ ಗಮನಿಸುವ ಹೊಣೆಗಾರಿಕೆ ಸ್ಥಳೀಯರದಾಗಬೇಕು ಎಂದರಲ್ಲದೆ, ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆಗಾರರಿಗೆ ಸೂಚಿಸಿದರು. ಈ ಸಂದರ್ಭ ಶಿರಂಗಳ್ಳಿ ಗ್ರಾಮಧ್ಯಕ್ಷ ಉಡುವೆರ ಮಿಟ್ಟು ತಮ್ಮಯ್ಯ, ಗರ್ವಾಲೆ ಕೊಡವ ಸಮಾಜ ಅಧ್ಯಕ್ಷ ಸರ್ಕಂಡ ಗಣಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಾಕೇರಿ ಸತೀಶ್, ಸ್ಥಳೀಯ ಮುಖಂಡರಾದ ಉದ್ದಿನಾಡಂಡ ರಘು, ಮೋಟನಳ್ಳಿರ ಸನ್ನಿ ಕಾರ್ಯಪ್ಪ ಸೇರಿದಂತೆ ಗ್ರಾಮಸ್ಥರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.









