Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯುವ ವೈಭವ ಕಾರ್ಯಕ್ರಮ : ಸೆಂಟ್ ಆನ್ಸ್ ಪದವಿ ಕಾಲೇಜಿಗೆ ಸಮಗ್ರ ಚಾಂಪಿಯನ್ ಪಟ್ಟ*
  • *ನೆಲ್ಲಿಹುದಿಕೇರಿ ಗ್ರಾಮಸ್ಥರಿಂದ ಶಾಸಕ ಡಾ.ಮಂತರ್ ಗೌಡ ಅವರಿಗೆ ಸನ್ಮಾನ : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ* 
  • *ಕೊಡಗು : ವಿದ್ಯುತ್ ಅಡಚಣೆ : ಸಹಾಯವಾಣಿ ಕೇಂದ್ರ ಆರಂಭ*
  • *ಮುಂಗಾರು : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
  • *ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರಿಗೆ ಸಾಧನಸಿರಿ ಪ್ರಶಸ್ತಿ ಪ್ರದಾನ*
  • *ಮಡಿಕೇರಿಯಲ್ಲಿ ಮಾವು ಮತ್ತು ಹಲಸಿನ ಮೇಳ ಆರಂಭ*
  • *ದುಬಾರೆ ದುರ್ಘಟನೆ : ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ರಾಜ್ಯ ಉಪ ಲೋಕಾಯುಕ್ತ*
  • *ಪ್ರಸನ್ನ ಭಟ್ ವಿರುದ್ಧ ದೂರು*
  • *ಮೇ 22 ರಿಂದ ಮಾವು ಮತ್ತು ಹಲಸು ಮೇಳ*
  • *ಮಡಿಕೇರಿ : ಮೇ 22 ರಂದು ನೇರ ಸಂದರ್ಶನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ದೆಹಲಿ ಬುಡಕಟ್ಟು ಸಾಂಸ್ಕೃತಿಕ ಸಮಾವೇಶಕ್ಕೆ ಕೊಡಗಿನ ಗಿರಿಜನರು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ದೆಹಲಿ ಬುಡಕಟ್ಟು ಸಾಂಸ್ಕೃತಿಕ ಸಮಾವೇಶಕ್ಕೆ ಕೊಡಗಿನ ಗಿರಿಜನರು*

ಮೇ 21, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 21 NEWS DESK : ನವದೆಹಲಿಯಲ್ಲಿ ಮೇ 24 ರಂದು ನಡೆಯಲಿರುವ ಅಖಿಲ ಭಾರತ ಬುಡಕಟ್ಟು ಜನಾಂಗದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಕೊಡಗಿನಿಂದ ಹೊರಟ 110 ಗಿರಿಜನ ಪ್ರತಿನಿಧಿಗಳ ಸಭೆಯು ಗೊಣಿಕೊಪ್ಪ ದುರ್ಗಾ ಭೋಜಿ ಹಾಲ್ ನಲ್ಲಿ ನಡೆಯಿತು.  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಿರಿಜನ ಸುರಕ್ಷಾ ವೇದಿಕೆ ಕೊಡಗು ಜಿಲ್ಲಾ ಘಟಕದ ಸಂಚಾಲಕರಾದ ಪಣಿಯರವರ ಭಾಗ್ಯ ಮೋಹನ್, ಮಹಾನ್ ಜನನಾಯಕ ಬಿರ್ಸಾ ಮುಂಡಾರವರ 150ನೇ ಜನ್ಮ ಜಯಂತಿ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಲಾಗುತ್ತಿರುವ ಈ ಮಹಾ ಸಂಗಮದಲ್ಲಿ ದೇಶದ ಐದು ನೂರಕ್ಕೂ ಹೆಚ್ಚು ಗಿರಿಜನ ಸಮುದಾಯಗಳಿಂದ ಮೂರು ಲಕ್ಷಕ್ಕೂ ಅಧಿಕ ಗಿರಿಜನ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಕೊಡಗು ಜಿಲ್ಲೆಯ 6 ಗಿರಿಜನ ಜನಜಾತಿಯ 110 ಪ್ರತಿನಿಧಿಗಳು ಸೇರಿದಂತೆ ರಾಜ್ಯದ 1250 ಪ್ರತಿನಿಧಿಗಳು ವಿಶೇಷ ರೈಲಿನ ಮೂಲಕ ದೆಹಲಿಗೆ ತೆರಳುತ್ತಿದ್ದಾರೆ ಎಂದರು. ಗಿರಿಜನ ಸಮುದಾಯಗಳ ಸಾಂಸ್ಕೃತಿಕ ಅಸ್ತಿತ್ವ, ಧಾರ್ಮಿಕ ಪರಂಪರೆ ಹಾಗೂ ಸಾಮಾಜಿಕ ಮಾಲ್ಯಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸುವ ಅಪರೂಪದ ಅವಕಾಶ ಇದಾಗಲಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ದೆಹಲಿಯ ಐದು ವಿಭಿನ್ನ ಪ್ರದೇಶಗಳಿಂದ ಭವ್ಯ ಸಾಂಸ್ಕೃತಿಕ ಶೋಭಾಯಾತ್ರೆ ನಡೆಯಲಿದ್ದು, ಗಿರಿಜನ ಬುಡಕಟ್ಟು ಸಮುದಾಯಗಳ ವೈವಿಧ್ಯಮಯ ವೇಷಭೂಷಣ, ಕಲಾ ಪರಂಪರೆ, ಜನಪದ ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನು ದೇಶದ ಮುಂದೆ ತೆರೆದಿಡಲಿದೆ. ಬಳಿಕ ಕೆಂಪು ಕೋಟೆ ಮೈದಾನದಲ್ಲಿ ಶೋಭಾಯಾತ್ರೆ ಒಂದಾಗಲಿದೆ. ನಂತರ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದರು. ಕೇಂದ್ರ ಸಚಿವ ಅಮಿತ್ ಷಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಗಿರಿಜನ ಮುಖಂಡರು, ಚಿಂತಕರು, ಸ್ವಾಮಿಜಿಗಳು, ಕಲಾವಿದರು ಹಾಗೂ ಸಮಾಜದ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗಿರಿಜನ ಮುಖಂಡರಾದ ಸಿದ್ದಪ್ಪನವರು ಮಾತನಾಡಿ, ಸ್ವಾತಂತ್ರ್ಯ ನಂತರ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಇಷ್ಟೋಂದು ಬೃಹತ್ ಪ್ರಮಾಣದಲ್ಲಿ ಒಂದೆಡೆ ಗಿರಿಜನ ಪ್ರತಿನಿಧಿಗಳು ಸಮಾಗಮವಾಗುತ್ತಿರುವುದು ವಿಷೇಶವಾಗಿದ್ದು, ದೇಶದಲ್ಲಿ ಅಂದಾಜು 700ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರಿದ್ದು ಇವರಲ್ಲಿ ಹಲವರು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ  ಸಂಸ್ಕೃತಿ, ಪರಂಪರೆ ಹಾಗೂ ಹಕ್ಕುಗಳ ರಕ್ಷಣೆಗಾಗಿ ಸಂಘಟಿತ ಸಮಾವೇಶದ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದರು. ಪ್ರಾಂತ ವನವಾಸಿ ಕಲ್ಯಾಣ ಅಧ್ಯಕ್ಷರಾದ ಚಕ್ಕೇರ ಮನು ಕಾವೇರಪ್ಪ ಮಾತನಾಡಿ, ದೆಹಲಿಯ ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳಿಗೂ ಶುಭ ಹಾರೈಸಿದರು. ಜೇನುಕುರುಬ ಸಮುದಾಯದ ಪ್ರತಿನಿಧಿಗಳಾದ ಆರ್.ಕೆ.ಚಂದ್ರ, ದೇವರಕಾಡು ನಿತ್ಯ, ಸೋಲಿಗರ ಉಮೇಶ್, ಅಂಚೆತಿಟ್ಟು ಸಂಜೀವ, ಮರಾಠಿ ಸಮುದಾಯದ ಪರಮೇಶ್ವರ್, ವಾಲ್ಮೀಕಿ ಸಮುದಾಯದ ಮುತ್ತುರಾಜ್, ಪ್ರಮುಖರಾದ ಅಮ್ಮುಣಿ, ಚೋಮು, ಶಶಿಕಲಾ, ಜಯಲಕ್ಷ್ಮಿ, ಭೋಜ, ರಿಧೀಶ್ ಮತ್ತಿತರರು ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯುವ ವೈಭವ ಕಾರ್ಯಕ್ರಮ : ಸೆಂಟ್ ಆನ್ಸ್ ಪದವಿ ಕಾಲೇಜಿಗೆ ಸಮಗ್ರ ಚಾಂಪಿಯನ್ ಪಟ್ಟ*

ಮೇ 22, 2026

*ನೆಲ್ಲಿಹುದಿಕೇರಿ ಗ್ರಾಮಸ್ಥರಿಂದ ಶಾಸಕ ಡಾ.ಮಂತರ್ ಗೌಡ ಅವರಿಗೆ ಸನ್ಮಾನ : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ* 

ಮೇ 22, 2026

*ಕೊಡಗು : ವಿದ್ಯುತ್ ಅಡಚಣೆ : ಸಹಾಯವಾಣಿ ಕೇಂದ್ರ ಆರಂಭ*

ಮೇ 22, 2026

*ನೆಲ್ಲಿಹುದಿಕೇರಿ ಗ್ರಾಮಸ್ಥರಿಂದ ಶಾಸಕ ಡಾ.ಮಂತರ್ ಗೌಡ ಅವರಿಗೆ ಸನ್ಮಾನ : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ* 

ಮೇ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸಿದ್ದಾಪುರ ಮೇ.22 NEWS DESK : ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಅಂದಾಜು 7 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ…

*ಕೊಡಗು : ವಿದ್ಯುತ್ ಅಡಚಣೆ : ಸಹಾಯವಾಣಿ ಕೇಂದ್ರ ಆರಂಭ*

ಮೇ 22, 2026

*ಮುಂಗಾರು : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಮೇ 22, 2026

*ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರಿಗೆ ಸಾಧನಸಿರಿ ಪ್ರಶಸ್ತಿ ಪ್ರದಾನ*

ಮೇ 22, 2026

*ಮಡಿಕೇರಿಯಲ್ಲಿ ಮಾವು ಮತ್ತು ಹಲಸಿನ ಮೇಳ ಆರಂಭ*

ಮೇ 22, 2026

*ದುಬಾರೆ ದುರ್ಘಟನೆ : ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ರಾಜ್ಯ ಉಪ ಲೋಕಾಯುಕ್ತ*

ಮೇ 22, 2026

*ಪ್ರಸನ್ನ ಭಟ್ ವಿರುದ್ಧ ದೂರು*

ಮೇ 22, 2026

*ಮೇ 22 ರಿಂದ ಮಾವು ಮತ್ತು ಹಲಸು ಮೇಳ*

ಮೇ 21, 2026

*ಮಡಿಕೇರಿ : ಮೇ 22 ರಂದು ನೇರ ಸಂದರ್ಶನ*

ಮೇ 21, 2026

*ದೆಹಲಿ ಬುಡಕಟ್ಟು ಸಾಂಸ್ಕೃತಿಕ ಸಮಾವೇಶಕ್ಕೆ ಕೊಡಗಿನ ಗಿರಿಜನರು*

ಮೇ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.