
ವಿರಾಜಪೇಟೆ ಮೇ 22 NEWS DESK : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಾಜ್ಯೋತಿ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ರಾಮನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗಿನ ಪ್ರತಿಷ್ಟಿತ ನಾಟ್ಯಂಜಲಿ ನೃತ್ಯ ಸಂಸ್ಥೆಯ ಗುರು ಕಾವ್ಯಶ್ರೀ ಕಾಂತ್‍ರಾಜ್ ಹಾಗೂ ಅವರ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ “ಕರ್ನಾಟಕ ಕನ್ನಡ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾವ್ಯಶ್ರೀ ಪ್ರಸ್ತುತ ಮಡಿಕೇರಿಯ ಸಂತ ಜೋಸೆಫರ ಪ್ರೌಢ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯಶ್ರೀ ಅಮ್ಮತ್ತಿ ಬಿಳುಗುಂದ ಗ್ರಾಮದ ಶಿಕ್ಷಕಿ ಹೇಮಾವತಿ ಹಾಗೂ ಕಾಂತ್‍ರಾಜ್ ದಂಪತಿಯ ಪುತ್ರಿ. ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಯ ಮಾಲೀಕರಾದ ಮಹೇಶ್ ಅವರ ಪತ್ನಿ.









