Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡವ ಪುಸ್ತಕ ಪತ್ತಾಯ : ಪುಸ್ತಕ ಓದುವುದರಿಂದ ಮನಸ್ಸಿಗೆ ಸುಖ, ಶಾಂತಿ ಪ್ರಾಪ್ತಿ : ಅಜ್ಜಿನಿಕಂಡ ಮಹೇಶ್ ನಾಚಯ್ಯ*
  • *ಕೊಡಗಿನಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿದೆ : ಅಬ್ದುಲ್ ರಶೀದ್*
  • *ಸೋಮವಾರಪೇಟೆ ಗ್ಯಾರಂಟಿ ಯೋಜನೆಯ ಪ್ರಾಧಿಕಾರ ಸಮಿತಿ ಸಭೆ*
  • *ನಿವೇಶನ ರಹಿತ 22ನೇ ದಿನಕ್ಕೆ*
  • *ಹೊನ್ನಮ್ಮನ ಕನಸಿಗೆ ಮತ್ತೊಂದು ಗರಿ*
  • *ಸೆಸ್ಕ್‌ನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಅತ್ತೆ-ಮಾವಂದಿರನ್ನು ಚೆನ್ನಾಗಿ ನೋಡಿಕೊಂಡಲ್ಲಿ ಸಂಸಾರಕ್ಕೆ ಅರ್ಥ : ಶರಣಮ್ಮ ಎಸ್.ಜಂಗಿನ*
  • *ಹೊಂದಾಣಿಕೆಯ ಕೊರತೆಯಿಂದ ಮಡಿಕೇರಿ ನಗರಸಭೆಯಲ್ಲಿ ಅಭಿವೃದ್ಧಿ ಶೂನ್ಯ : ಬಹುಮತ ನೀಡಿದ ಜನರಿಗೆ ಬಿಜೆಪಿಯಿಂದ ಮೋಸ*
  • *ಕೊಡಗಿನಲ್ಲಿ ಮೊದಲ ಅಂಗಾಂಗ ದಾನ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಂಗಾಂಗ ಸಂಗ್ರಹಣೆ*
  • *ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸಲು ಹೇರೂರು ಗ್ರಾಮಸ್ಥರ ಒತ್ತಾಯ*
  • *ಕಾವ್ಯಶ್ರೀ ಕಾಂತ್‍ರಾಜ್‍ಗೆ ಕರ್ನಾಟಕ ಕನ್ನಡ ರತ್ನ ಪ್ರಶಸ್ತಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸಲು ಹೇರೂರು ಗ್ರಾಮಸ್ಥರ ಒತ್ತಾಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸಲು ಹೇರೂರು ಗ್ರಾಮಸ್ಥರ ಒತ್ತಾಯ*

ಮೇ 23, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 23 NEWS DESK : ಸುಂಟಿಕೊಪ್ಪ ಸಮೀಪದ ಹೇರೂರು ಗ್ರಾಮದಲ್ಲಿ ಆದಿವಾಸಿಗಳು ವಾಸವಿರುವ ಪ್ರದೇಶದಲ್ಲಿ ಚರ್ಚ್ ನಡೆಸಲೆಂದು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದು, ಸರಕಾರಿ ಕಾರ್ಯಚಟುವಟಿಕೆಗಳಿಗೆ ಬಳಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದನ್ನು ಸ್ವಾಗತಿಸುವುದಾಗಿ ಹೇರೂರು ಗ್ರಾಮಸ್ಥರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾದ ಪ್ರಮುಖ ಹಾಗೂ ಗ್ರಾಮಸ್ಥ ಚಂದ್ರಶೇಖರ್ ಹೇರೂರು ಅವರು ಅನಾರೋಗ್ಯಪೀಡಿತರಾಗುವ ಆದಿವಾಸಿಗಳನ್ನು ಗುಣಮುಖರನ್ನಾಗಿ ಮಾಡುವ ನೆಪದಲ್ಲಿ ಮನಪರಿವರ್ತಿಸಿ ಮತಾಂತರ ಮಾಡಲಾಗುತ್ತಿದೆ. ಆದಿವಾಸಿಗಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದರಿಂದ ಈ ಭಾಗದಲ್ಲಿರುವ ಹಾಡಿ ಜನರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸಲು ಆಸ್ಪತ್ರೆಯನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು. ಹೇರೂರು ಹಾಡಿಯಲ್ಲಿ 380ಕ್ಕೂ ಹೆಚ್ಚಿನ ಆದಿವಾಸಿಗಳು ನೆಲೆಸಿದ್ದಾರೆ. ಇಲ್ಲಿಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯ್ತಿಯಿಂದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಶೌಚಾಲಯಗಳನ್ನು ಒದಗಿಸಲಾಗಿದೆ. ಇವರುಗಳು ವಾಸಿಸುತ್ತಿರುವ ಪ್ರದೇಶ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದಾಗಿದೆ. ಮುಗ್ಧ ಆದಿವಾಸಿಗಳನ್ನು ಹಣಕಾಸಿನ ನೆರವನ್ನು ನೀಡುವ ಆಮಿಷಗಳನ್ನೊಡ್ಡಿ ಮತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೆ ಅಲ್ಲಿರುವ ಬಹುತೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ. ಹೀಗಿದ್ದೂ ಅವರು ಪರಿಶಿಷ್ಟ ಪಂಗಡದ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು, ಕನಿಷ್ಠ ತಿಂಗಳಿಗೊಮ್ಮೆಯಾದರು ಹಾಡಿಗೆ ಭೇಟಿ ನೀಡಿ, ಅಲ್ಲಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಚರ್ಚ್‍ಗೆಂದು ಅನಧಿಕೃತವಾಗಿ ನಿರ್ಮಿಸಿದ ಕಟ್ಟಡವನ್ನು ಆಸ್ಪತ್ರೆಯಾಗಿ ಪರಿವರ್ತಿಸಿ ಯೋಗ್ಯ ಆರೋಗ್ಯ ಸೇವೆಯನ್ನು ನೀಡಲು ಮುಂದಾಗಬೇಕೆಂದು ಚಂದ್ರಶೇಖರ್ ಒತ್ತಾಯಿಸಿದರು. ನಾಕೂರು ಶಿರಂಗಾಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರು ಹಾಗೂ ಹೇರೂರು ವಿಭಾಗದ ಮಾಜಿ ಸದಸ್ಯ ಜಗನ್ನಾಥ ಎಂ.ಸಿ ಅವರು ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟ ಪ್ರದೇಶದಲ್ಲಿ ಆದಿವಾಸಿ ಕುಟುಂಬಗಳಿಗೆ ಸರಕಾರದಿಂದಲೇ ಮನೆಗಳನ್ನು ನಿರ್ಮಿಸಿ, ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಇಲ್ಲಿನ ಆದಿವಾಸಿಗಳು ಸ್ಥಳೀಯರೊಂದಿಗೆ ಆತ್ಮೀಯ ಒಡನಾಟದಲ್ಲಿದ್ದಾರೆ, ಒಗ್ಗಟ್ಟಿನಿಂದ ಇದ್ದಾರೆ. ಹೀಗಿದ್ದೂ ಆದಿವಾಸಿಗಳ ಮನ ಪರಿವರ್ತಿಸಿ ಮತಾಂತರಕ್ಕೆ ಪ್ರಚೋದಿಸಿದ್ದಾರೆ ಎಂದರು. *ಪೂಜೆ ಮಾಡುತ್ತಿಲ್ಲ* ಹಾಡಿಯ ಬಹುತೇಕ ಆದಿವಾಸಿಗಳು ಪ್ರಸ್ತುತ ಮತಾಂತರಗೊಂಡಿದ್ದು, ಹಿಂದೆ ತಾವು ಅನುಸರಿಸಿಕೊಂಡು ಬರುತ್ತಿದ್ದ ಪ್ರಕೃತಿ ಪೂಜೆ ಪುನಸ್ಕಾರ, ಆಚಾರ ವಿಚಾರಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಗ್ರಾಮದ ಬಸವೇಶ್ವರ ದೇವಸ್ಥಾನದ ಸಾಕಷ್ಟು ಕೆಲಸ ಕಾರ್ಯಗಳನ್ನು ಹಿಂದೆ ಆದಿವಾಸಿಗಳು ನಿರ್ವಹಿಸುತ್ತಿದ್ದರು. ಆದರೆ ಇಂದು ಪೂಜೆಯಲ್ಲಿ ಕೂಡ ಪಾಲ್ಗೊಳ್ಳುತ್ತಿಲ್ಲ, ಮೂಲ ಆಚರಣೆಗಳನ್ನು ಕೈಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಹೇರೂರು ಗ್ರಾಮದ ಅಧ್ಯಕ್ಷ ಬಿ.ಎಸ್.ವಸಂತ, ಗ್ರಾಮಸ್ಥರಾದ ಕೆ.ಎಸ್.ರಮೇಶ್, ಚರಣ್ ತೆಕ್ಕಡೆ ಹಾಗೂ ಗಗನ್ ಮಂದೋಡಿ ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡವ ಪುಸ್ತಕ ಪತ್ತಾಯ : ಪುಸ್ತಕ ಓದುವುದರಿಂದ ಮನಸ್ಸಿಗೆ ಸುಖ, ಶಾಂತಿ ಪ್ರಾಪ್ತಿ : ಅಜ್ಜಿನಿಕಂಡ ಮಹೇಶ್ ನಾಚಯ್ಯ*

ಮೇ 23, 2026

*ಕೊಡಗಿನಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿದೆ : ಅಬ್ದುಲ್ ರಶೀದ್*

ಮೇ 23, 2026

*ಸೋಮವಾರಪೇಟೆ ಗ್ಯಾರಂಟಿ ಯೋಜನೆಯ ಪ್ರಾಧಿಕಾರ ಸಮಿತಿ ಸಭೆ*

ಮೇ 23, 2026

*ಕೊಡಗಿನಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿದೆ : ಅಬ್ದುಲ್ ರಶೀದ್*

ಮೇ 23, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಮೇ 23 NEWS DESK : ಸಾಹಿತ್ಯಾಸಕ್ತರಿಗೆ ಕೊಡಗು ಜಿಲ್ಲೆಯಲ್ಲಿ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹದಾಯಕ ವಾತಾವರಣ ಇದೆ. ಹೀಗಾಗಿಯೇ…

*ಸೋಮವಾರಪೇಟೆ ಗ್ಯಾರಂಟಿ ಯೋಜನೆಯ ಪ್ರಾಧಿಕಾರ ಸಮಿತಿ ಸಭೆ*

ಮೇ 23, 2026

*ನಿವೇಶನ ರಹಿತ 22ನೇ ದಿನಕ್ಕೆ*

ಮೇ 23, 2026

*ಹೊನ್ನಮ್ಮನ ಕನಸಿಗೆ ಮತ್ತೊಂದು ಗರಿ*

ಮೇ 23, 2026

*ಸೆಸ್ಕ್‌ನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಅತ್ತೆ-ಮಾವಂದಿರನ್ನು ಚೆನ್ನಾಗಿ ನೋಡಿಕೊಂಡಲ್ಲಿ ಸಂಸಾರಕ್ಕೆ ಅರ್ಥ : ಶರಣಮ್ಮ ಎಸ್.ಜಂಗಿನ*

ಮೇ 23, 2026

*ಹೊಂದಾಣಿಕೆಯ ಕೊರತೆಯಿಂದ ಮಡಿಕೇರಿ ನಗರಸಭೆಯಲ್ಲಿ ಅಭಿವೃದ್ಧಿ ಶೂನ್ಯ : ಬಹುಮತ ನೀಡಿದ ಜನರಿಗೆ ಬಿಜೆಪಿಯಿಂದ ಮೋಸ*

ಮೇ 23, 2026

*ಕೊಡಗಿನಲ್ಲಿ ಮೊದಲ ಅಂಗಾಂಗ ದಾನ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಂಗಾಂಗ ಸಂಗ್ರಹಣೆ*

ಮೇ 23, 2026

*ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸಲು ಹೇರೂರು ಗ್ರಾಮಸ್ಥರ ಒತ್ತಾಯ*

ಮೇ 23, 2026

*ಕಾವ್ಯಶ್ರೀ ಕಾಂತ್‍ರಾಜ್‍ಗೆ ಕರ್ನಾಟಕ ಕನ್ನಡ ರತ್ನ ಪ್ರಶಸ್ತಿ*

ಮೇ 22, 2026

*ಯುವ ವೈಭವ ಕಾರ್ಯಕ್ರಮ : ಸೆಂಟ್ ಆನ್ಸ್ ಪದವಿ ಕಾಲೇಜಿಗೆ ಸಮಗ್ರ ಚಾಂಪಿಯನ್ ಪಟ್ಟ*

ಮೇ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.