
ಮಡಿಕೇರಿ NEWS DESK ಮೇ 24 : ಬೆಂಗಳೂರಿನ ವಿಶ್ವ ಚೇತನ ಬಳಗವು ಆಯೋಜಿಸುವ, ರಾಷ್ಟ್ರೀಯ ಮಹಾನ್ ನಾಯಕರ ಸಂಸ್ಮರಣಾ ಕಾರ್ಯಕ್ರಮದಲ್ಲಿ, ವಿದ್ಯೆ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಚೋವಂಡ ಚೋಂದಮ್ಮ ಪೂಣಚ್ಚ ಅವರಿಗೆ ರಾಷ್ಟ್ರೀಯ ಸಿದ್ದಬುದ್ದ ಪ್ರಶಸ್ತಿ, ಹಾಗೂ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದಲ್ಲಿ ಚಾಮೆರ ದಿನೇಶ್ ಬೆಳ್ಯಪ್ಪ ಅವರಿಗೆ ರಾಷ್ಟ್ರೀಯ ಭೀಮ್‌ರಾವ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಾಮರಾಜನಗರ ಜಿಲ್ಲಾ ಕೊಳ್ಳೆಗಾಲದ ರೋಟರಿ ಭವನದಲ್ಲಿ, ರೋಟರಿ ಅಧ್ಯಕ್ಷ ಬಿ.ಮಹದೇವ ಅವರ ಅಧ್ಯಕ್ಷತೆಯಲ್ಲಿ, ವಿಶ್ವಚೇತನ ಬಳಗದ ಅಧ್ಯಕ್ಷ ಡಾ.ಎಂ.ಶಿವಸ್ವಾಮಿ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಐವರಿಗೆ ರಾಷ್ಟ್ರೀಯ, ಐವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.









