Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*
  • *ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*
  • *AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*
  • *ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*
  • *ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*
  • *ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*
  • *ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 
  • *ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೆ ಉಳಿಯಲಿ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಹಾಗೂ ಗ್ರಾಮಸ್ಥರ ಆಗ್ರಹ*
  • *ನಿವೇಶನಕ್ಕಾಗಿ ಆಗ್ರಹಿಸಿ ಮೇ 29 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ*
  • *ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 

ಮೇ 26, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 26 NEWS DESK : ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಜನಸಾಮಾನ್ಯರನ್ನು ವಂಚಿಸಿರುವುದಾಗಿ ಆರೋಪಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಸ್.ಪ್ರಕಾಶ್ ಆಚಾರ್ಯ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಟಿ.ಪಿ.ರಮೇಶ್ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ನಗರಸಭಾ ಕಚೇರಿಯವರೆಗೆ ಕಾಂಗ್ರೆಸ್ ಪ್ರಮುಖರು ಮತ್ತು ಸದಸ್ಯರು ಷೆÉೂೀಷಣೆಗಳ ಸಹಿತ ಪ್ರತಿಭಟನೆ ನಡೆಸಿ, ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆಯ ಮುಂಭಾಗ ಕೆಲ ಕಾಲ ಪ್ರತಿಭಟನೆ ನಡೆದ ಬಳಿಕ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಆಡಳಿತ ಪಕ್ಷದೊಳಗಿನ ಹೊಂದಾಣಿಕೆಯ ಕೊರತೆಯಿಂದ ಮಡಿಕೇರಿ ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.ಉತ್ತಮ ಆಡಳಿತದ ನಿರೀಕ್ಷೆಯಲ್ಲಿ ಬಹುಮತ ನೀಡಿದ ಜನರಿಗೆ ಬಿಜೆಪಿ ಮೋಸ ಮಾಡಿದೆ ಎಂದು  ಆರೋಪಿಸಿದರು. ಮಡಿಕೇರಿ ಕ್ಷೇತ್ರದ ಶಾಸಕರು ಒದಗಿಸಿರುವ ವಿಶೇಷ ಅನುದಾನದಿಂದಷ್ಟೆ ನಗರದಲ್ಲಿಂದು  ಅಭಿವೃದ್ಧಿ ಕಾಮಗಾರಿಗಳು  ನಡೆಯುತ್ತಿದೆ. ಮುಂಗಾರು ಸಮೀಪಿಸಿದರೂ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ತಡೆಗೋಡೆ ಮತ್ತು ರಸ್ತೆಗಳ ಕಾಮಗಾರಿ ಆರಂಭಗೊಂಡಿಲ್ಲ.ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಈ ಯಾವುದೇ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿ ಆಡಳಿತ ಯಾವುದೇ ಪ್ರಯತ್ನವನ್ನು ನಡೆಸುತ್ತಿಲ್ಲ. ಮುಂಬರುವ ನಗರಸಭಾ ಚುನಾವಣೆಯಲ್ಲಿ ಇವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ಸ್ಪಷ್ಟಪಡಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಟಿ.ಪಿ.ರಮೇಶ್ ಮಾತನಾಡಿ, ಮಡಿಕೇರಿ ನಗರಸಭೆಯಲ್ಲಿ ಬಿಜೆಪಿಯ ಈ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಜನಸಾಮಾನ್ಯರ ಅಗತ್ಯ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯದೆ ಅಭಿವೃದ್ಧಿ ಹೀನ ಪರಿಸ್ಥಿತಿಯನ್ನು ಕಾಣುತ್ತಿರುವುದಾಗಿ ತೀಕ್ಷ್ಣವಾಗಿ ನುಡಿದರು. ಮಳೆಗಾಲಕ್ಕೂ ಮುನ್ನ ನಡೆಯಬೇಕಾಗಿರುವ ತೋಡು ಮತ್ತು ಚರಂಡಿಗಳ ಸ್ವಚ್ಛತಾ ಕಾರ್ಯ ಇನ್ನೂ ನಡೆದಿಲ್ಲ. ಜಲ್ ಜೀವನ್ ಮಿಷನ್ ಯೋಜನೆಯಿಂದ ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿಲ್ಲ. ನಗರಸಭೆಯ ಕಚೇರಿಯಲ್ಲಿ ಫಾರಂ ನಂ.3 ಸೇರಿದಂತೆ ಯಾವುದೇ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲವೆಂದು ಆರೋಪಿಸಿ, ಬಿಜೆಪಿ ಆಡಳಿತ ತನ್ನ ಧೋರಣೆಗಳನ್ನು ಬದಲಿಸಿಕೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ  ಕಾಂಗ್ರೆಸ್ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಇಳಿಯಲಿದೆಯೆಂದು ಎಚ್ಚ್ಚರಿಕೆಯನ್ನಿತ್ತರು.  : ಪೌರಾಯುಕ್ತರಿಗೆ ಮನವಿ ಸಲ್ಲಿಕೆ :  ಪ್ರತಿಭಟನೆಯ ಬಳಿಕ ಪೌರಾಯುಕ್ತ ರಮೇಶ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿಯಲ್ಲಿ ಪ್ರಮುಖವಾಗಿ ಬಡವರ್ಗದ ಮಂದಿಗೆ ನಿವೇಶನ ನೀಡುವಲ್ಲಿ ಬಿಜೆಪಿ ಆಡಳಿತ ವಿಫಲವಾಗಿದೆ, ಯಾವುದೇ ವಾರ್ಡ್‍ನಲ್ಲಿ ತಡೆಗೋಡೆ ನಿರ್ಮಾಣವಾಗದಿರುವುದು, ನಗರದ ಕಸವನ್ನು ಸ್ಟೋನ್ ಹಿಲ್‍ನ ತ್ಯಾಜ್ಯ ವಿಲೇವಾರಿ ಜಾಗದ ಬದಲಾಗಿ ಸುಬ್ರಹ್ಮಣ್ಯ ನಗರದ ಮಳ್ಭಾಗದಲ್ಲಿ ಸುರಿಯುತ್ತಿರುವ ಬಗ್ಗೆ, ಅಸಮರ್ಪಕ ಬೀದಿ ದೀಪಗಳ ಬಗ್ಗೆ ಪ್ರಸ್ತಾಪಿಸಲಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ಉಪಾಧ್ಯಕ್ಷರುಗಳಾದ ಸದಾ ಮುದ್ದಪ್ಪ, ಮುನೀರ್ ಮಾಚರ್, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜಯಂತಿ ಶೆಟ್ಟಿ, ಉದಯ ಕುಮಾರ್, ಪ್ರಮುಖರಾದ ಮಿನಾಜ್ó ಪ್ರವೀಣ್, ಕೆ.ಜಿ.ಪೀಟರ್, ಚಂದ್ರಶೇಖರ್, ಪ್ರತಿಭಟನೆಯನ್ನು ಬೆಂಬಲಿಸಿದ ಕೊಡಗು ಅಭಿವೃದ್ಧಿ ಸಮಿತಿಯ ಪ್ರಸನ್ನ ಭಟ್ ಮೊದಲಾದವರು ಪಾಲ್ಗೊಂಡಿದ್ದರು.

 

 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*

ಮೇ 26, 2026

*ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*

ಮೇ 26, 2026

*AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*

ಮೇ 26, 2026

*ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*

ಮೇ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 26 NEWS DESK : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮ ಮಟ್ಟಕ್ಕೂ ತಲುಪುತ್ತಿದ್ದು,…

*AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*

ಮೇ 26, 2026

*ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*

ಮೇ 26, 2026

*ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*

ಮೇ 26, 2026

*ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*

ಮೇ 26, 2026

*ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 

ಮೇ 26, 2026

*ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೆ ಉಳಿಯಲಿ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಹಾಗೂ ಗ್ರಾಮಸ್ಥರ ಆಗ್ರಹ*

ಮೇ 26, 2026

*ನಿವೇಶನಕ್ಕಾಗಿ ಆಗ್ರಹಿಸಿ ಮೇ 29 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ*

ಮೇ 26, 2026

*ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*

ಮೇ 26, 2026

*ಸುಂಟಿಕೊಪ್ಪ : ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಅವರಿಗೆ ಸನ್ಮಾನ*

ಮೇ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.