Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*
  • *ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*
  • *AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*
  • *ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*
  • *ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*
  • *ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*
  • *ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 
  • *ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೆ ಉಳಿಯಲಿ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಹಾಗೂ ಗ್ರಾಮಸ್ಥರ ಆಗ್ರಹ*
  • *ನಿವೇಶನಕ್ಕಾಗಿ ಆಗ್ರಹಿಸಿ ಮೇ 29 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ*
  • *ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*

ಮೇ 26, 20264 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 26 NEWS DESK : ಕೊಡಗು ಜಿಲ್ಲೆಯು ಪ್ರವಾಸಿಗರಿಗೆ ಸುರಕ್ಷಿತವಾಗಿದ್ದು, ಆತಿಥ್ಯಕ್ಕೆ ಎಂದಿನಂತೆ ಹೆಸರುವಾಸಿಯಾಗಿದೆ.   ವದಂತಿಗಳಿಗೆ ಪ್ರವಾಸಿಗರು ಕಿವಿಗೊಡಬಾರದು ಎಂಬ ಸಂದೇಶವನ್ನು ಪ್ರವಾಸಿಗರಿಗೆ ಮನದಟ್ಟು ಮಾಡುವ  ನಿಟ್ಟಿನಲ್ಲಿ  ನಾಡಿನ ಪ್ರವಾಸೋದ್ಯಮಿಗಳು, ಸಂಘಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಕೂಗ್೯  ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೊಳಂಡ ದಿನೇಶ್ ಕಾಯ೯ಪ್ಪ ಮನವಿ ಮಾಡಿದ್ದಾರೆ. ನಗರದ ವ್ಯಾಲಿವ್ಯೂ  ಹೋಟೇಲ್ ಸಭಾಂಗಣದಲ್ಲಿ  ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್   ವತಿಯಿಂದ ಆಯೋಜಿತ  ಪ್ರವಾಸೋದ್ಯಮ ಸಂಬಂಧಿತ ವಿವಿಧ ಸಂಘಸಂಸ್ಥಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು. ಕೆಲವರು ಅನಗತ್ಯವಾಗಿ ಕೊಡಗಿನ ಪ್ರವಾಸೋದ್ಯಮದ ಬಗ್ಗೆ ಇಲ್ಲಸಲ್ಲದ ಟೀಕೆ, ದೂರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿಸುತ್ತಾ ಕೊಡಗಿನ ಆತಿಥ್ಯ ಸಂಸ್ಕೖತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಆಧಾರ ರಹಿತ ಹೇಳಿಕೆಗಳನ್ನು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡ ಸವ೯ರೂ ಖಂಡಿಸಲೇಬೇಕಾಗಿದೆ ಎಂದು ದಿನೇಶ್ ಹೇಳಿದರು.  ಕಳೆದ ವಷ೯ ಕೊಡಗಿಗೆ 25 ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡಿದ್ದರಾದರೂ 45 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂಬ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ದಿನೇಶ್, ಸದ್ಯದಲ್ಲಿಯೇ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಉಪನಿದೇ೯ಶಕರನ್ನು ನಿಯೋಜಿಸುವ ನಿಟ್ಟಿನಲ್ಲಿ  ಕೂಗ್೯  ಹೋಟೇಲ್, ರೆಸಾಟ್೯ ಅಸೋಸಿಯೇಷನ್  ಪ್ರಯತ್ನಿಸಲಿದೆ ಎಂದರು. ಪ್ರವಾಸಿ ತಾಣಗಳಲ್ಲಿ ಅಥವಾ ಯಾವದೇ ಪ್ರವಾಸೋದ್ಯಮದ ಸಂಬಂಧಿತ ಚಟುವಟಿಕೆಗಳಲ್ಲಿ ಅಹಿತಕರ ಘಟನೆ ಸಂಭವಿಸಿದ ಕೂಡಲೇ ಪೂವ೯ಪರ ತಿಳಿಯದೇ ಪ್ರವಾಸೀ ಚಟುವಟಿಕೆಗಳಿಗೇ ನಿಭ೯ಂಧ ಹೇರುವ ಸಕಾ೯ರದ ಕ್ರಮದಿಂದಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದೂ ದಿನೇಶ್ ಹೇಳಿದರು. ಜಿಲ್ಲೆಯ ದುಬಾರೆ, ಮಾಂದಲಪಟ್ಟಿ, ತಡಿಯಂಡಮೋಳ್ ನಂಥ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ತೆರಳದಂತೆ ನಿಭ೯ಂಧ ಹೇರಿರುವ ನಿಯಮವನ್ನು ಕೂಡಲೇ  ಹಿಂಪಡೆಯುವಂತೆಯೂ ದಿನೇಶ್ ಒತ್ತಾಯಿಸಿದರು. ಕೊಡಗು ಚೇಂಬರ್ ಆಫ್ ಕಾಮಸ್೯ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕೊಡಗಿನ ವ್ಯಾಪಾರಸ್ಥರು ಇತ್ತೀಚಿನ ವಷ೯ಗಳಲ್ಲಿ ಪ್ರವಾಸಿಗರನ್ನು ನಂಬಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಹೀಗಿರುವಾಗ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾದಲ್ಲಿ ಅದು ವತ೯ಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎದು ಆತಂಕ ವ್ಯಕ್ತಪಡಿಸಿದರು.  ಈಗಾಗಲೇ ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯಾದ್ಯಂತ 12  ಹೊಸ ತಾಣಗಳೂ ಸೇರಿ  36 ಪ್ರವಾಸಿತಾಣಗಳ ಅಭಿವೖದ್ದಿಗೆ ಯೋಜನೆ ರೂಪಿಸಿದೆ. ಜಿಲ್ಲೆಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಯ ಸಮಸ್ಯೆಯನ್ನೂ ಸಂಬಂಧಿಸಿದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಪರಿಹರಿಸಬೇಕಾಗಿದೆ. ವಾಹನ ನಿಲುಗಡೆ ಸಮಸ್ಯೆಯೂ ವ್ಯಾಪಾರಸ್ಥರಿಂದ ಪ್ರವಾಸಿಗರನ್ನು ಮಾಡಿದೆ ಎಂದೂ ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು. ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ, ಜಿಲ್ಲೆಯಲ್ಲಿನ ಅನಧಿಕೖತ ಹೋಂಸ್ಟೇಗಳನ್ನು ಮುಚ್ಚಿಸಲು ಸಕಾ೯ರದ ಕ್ರಮ ಏನೇನೂ ಸಾಲದು. ಹೆಚ್ಚುವರಿ ಸಿಬ್ಬಂದಿಗಳೊಂದಿಗ ನಿಯಮಬಾಹಿರ ಹೋಂಸ್ಟೇಗಳಿಗೆ ಕಡಿವಾಣ ಹಾಕಲೇಬೇಕು ಎಂದು ಆಗ್ರಹಿಸಿದರು.  ಪ್ರವಾಸೋದ್ಯಮ ದಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಯೋಜನೆಗಳಿಗೆ ಹಿನ್ನಡೆ ಉಂಟು ಮಾಡಿದೆ ಎಂದೂ ಮೋಂತಿ ಗಣೇಶ ನುಡಿದರು. ಕೂಗ್೯   ಹೋಟೇಲ್, ರೆಸಾಟ್೯ ಅಸೋಸಿಯೇಷನ್  ಗೌರವ ಸಲಹೆಗಾರ   ಜಿ.ಚಿದ್ವಿಲಾಸ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ವಿಳಂಭರಹಿತವಾಗಿ ಅಭಿವೖದ್ದಿ ಮಾಡುವುದು ಮುಖ್. ಅನೇಕ ತಾಣಗಳಲ್ಲಿ ಮೂಲಸೌಲಭ್ಯವೇ ಇಲ್ಲ.  ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಂಘಸಂಸ್ಥೆಗಳು ಒಗ್ಗೂಡಿ ತಮ್ಮ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣಗಳಲ್ಲಿ ಕೈಗೊಳ್ಳಬೇಕಾದ ಅಭಿವೖದ್ದಿ ಕಾಯ೯ಗಳ  ಬಗ್ಗೆ ಬಜೆಟ್ ಸಹಿತವಾಗಿ ವರದಿ ನೀಡಿದರೆ ಸಕಾ೯ಱದ ಮಟ್ಟದಲ್ಲಿ  ಈ ನಿಟ್ಟಿನಲ್ಲಿ ಚಚಿ೯ಸಲು ಅನುಕೂಲವಾಗಲಿದೆ ಎಂದರು.  ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡವರು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಚೇತರಿಕೆಗಾಗಿ ಒಂದೇ ಧ್ವನಿಯಲ್ಲಿ ಮಾತನಾಡಬೇಕಾದ ಅಗತ್ಯವಿದೆ ಎಂದೂ ಅವರು ಹೇಳಿದರು. ಲೇಖಕ ಅನಿಲ್ ಹೆಚ್.ಟಿ. ಮಾತನಾಡಿ  ರಾಜ್ಯದ ಪ್ರವಾಸೋದ್ಯಮಕ್ಕ ಕೊಡಗು ಜಿಲ್ಲೆಯು ಮಹತ್ವದ ಕೊಡುಗೆ ನೀಡಿದ್ದರೂ ಅನೇಕ ವಷ೯ಗಳಿಂದ ಪ್ರವಾಸೋದ್ಯಮ ಖಾತೆ ಸಚಿವರು ಜಿಲ್ಲೆಗೆ  ಭೇಟಿ ನೀಡಲೇ ಇಲ್ಲ. ಜಿಲ್ಲೆಗೆ ಭೇಟಿ ನೀಡಿದರೆ ಮಾತ್ರ ಸಚಿವರಿಗೆ, ಉನ್ನತ ಅಧಿಕಾರಿಗಳಿಗೆ ಕೊಡಗಿನ ಪ್ರವಾಸೋದ್ಯಮದ ಬೇಕು ಬೇಡಿಕ ತಿಳಿಯಲು ಸಾಧ್ಯ ಎಂದರು.   ಅತ್ಯಧಿಕ ಆದಾಯ ಬರುತ್ತಿದ್ದ ದುಬಾರೆಯಲ್ಲಿ ಪ್ರವಾಸಿಗರಿಗೆ ಕೆಲವೊಂದು ನಿಭ೯ಂಧ ಹೇರಿರುವ ಕ್ರಮದ ಬಗ್ಗೆ ಅರಣ್ಯ ಇಲಾಖೆ ಪುನರ್ ವಿಮಶೆ೯ ಮಾಡಬೇಕು. 23 ವಷ೯ಗಳಿಂದ ಸಂಭವಿಸದ   ಆಕಸ್ಮಿಕ ದುರಂತ ಸಂಭವಿಸಿದ ಕೂಡಲೇ ಪ್ರವಾಸಿಗರನ್ನು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಯಿಂದಲೇ ದೂರವಿಡುವ ಕ್ರಮ ಸರಿಯಲ್ಲ ಎಂದೂ ಅನಿಲ್ ಪ್ರತಿಪಾದಿಸಿದರು.   ಆನ್ ಲೈನ್   ಬುಕ್ಕಿಂಗ್ ನಂಥ ಅತ್ಯಾಧುನಿಕ ವ್ಯವಸ್ಥೆ ಮೂಲಕ   ದುಬಾರೆಗೆ ಬರುವ ಪ್ರವಾಸಿಗರಿಗೆ  ವ್ಯವಸ್ಥಿತವಾಗಿ ಸಾಕಾನೆ ಶಿಬಿರಕ್ಕೆ ಪ್ರವೇಶಾವಕಾಶ ಕಲ್ಪಿಸಲು ಸಾಧ್ಯವಿದೆ ಎಂದೂ ಅನಿಲ್ ಹೇಳಿದರು. ದುಬಾರೆಯ ರ್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಉತ್ತಪ್ಪ ಮಾತನಾಡಿ,  ಈಗಾಗಲೇ ದುಬಾರೆಯಲ್ಲಿರುವ 84 ರ್ಯಾಫ್ಟಿಂಗ್ ಗೆ ಸಂಖ್ಯೆಯನ್ನು ಸ್ಥಗಿತಗೊಳಿಸಬೇಕು. ಹೆಚ್ಚುವರಿ ರ‍್ಯಾಫ್ಟಿಂಗ್ ನೀಡಿದರೆ ಸಮಸ್ಯೆಯಾಗಲಿದೆ ಎಂದರು. ದುಬಾರೆಯ ರ‍್ಯಾಫ್ಟಿಂಗ್ ಅಸೋಸಿಯೇಷನ್ ಸಲಹೆಗಾರ ಕೆ.ಎಸ್.ರತೀಶ್ ಮಾತನಾಡಿ  ದುಬಾರೆಯಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿದೆ.  ಅಂತೆಯೇ ದುಬಾರೆಯ ನಿವ೯ಹಣೆಗಾಗಿಯೇ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಬೇಕಾಗಿದೆ ಎಂದು ಸಲಹೆ ನೀಡಿದರು. ದುಬಾರೆಯ ಸಾಕಾನೆ ಶಿಬಿರವನ್ನು  10 ದಿನಗಳಿಂದ  ಮುಚ್ಚಿರುವ ಹಿನ್ನಲೆಯಲ್ಲಿ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ನೂರಾರು ಮಂದಿಗೆ ನಷ್ಯವಾಗುತ್ತಿದೆ. ಹೀಗಾಗಿ ಶೀಘ್ರವೇ ದುಬಾರೆಯಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿದರು. ಮಾಂದಲಪಟ್ಟಿ ಜೀಪು ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪಿ.ಟಿ. ಉಣ್ಣಿಕೖಷ್ಣ ಮಾತನಾಡಿ, ಹೆಚ್ಚು ವರಮಾನ ತರುವ ಪ್ರವಾಸಿ ತಾಣವಾದ ಮಾಂದಲಪಟ್ಟಿ ಕೂಡ ಘಳಿನಿಂದ ಮುಚ್ಚಲ್ಪಟ್ಟಿದೆ   ರಸ್ತೆ ಕಾಮಗಾರಿ  ಪೂಣ೯ವಾಗಿದ್ದರೂ   ಪ್ರವಾಸಿಗರಿಂದ ಆದಾಯ ಬರುವ ತಿಂಗಳಿನಲ್ಲಿಯೇ ಮಾಂದಲಪಟ್ಟಿಯನ್ನು ಪ್ರವಾಸಿಗರಿಂದ  ದೂರ  ಇಡಲಾಗಿದೆ.  ಇದರಿಂದಾಗಿ ಮಾಂದಲಪಟ್ಟಿಯನ್ನೇ ನಂಬಿಕೊಂಡಿರುವ  600 ಕ್ಕೂ ಅಧಿಕ ಜೀಪು ಮಾಲೀಕರು, ಅಂಗಡಿ ಮಾಲೀಕರ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ ಎಂದರು. ಮಡಿಕೇರಿಯಲ್ಲಿ ವಾಹನ  ನಿಲುಗಡೆ ವ್ಯವಸ್ಥೆ ಸಮಪ೯ಕವಾಗಿ ಇಲ್ಲದಿರುವುದು ಕೂಡ ಪ್ರವಾಸಿಗರಿಗೆ ತೀವ್ರ ಸಮಸ್ಯೆಯುಂಟು ಮಾಡಿದೆ ಮಂಗಳೂರು ರಸ್ತೆಯಲ್ಲಿರುವ ಸಕಾ೯ರಿ ಪ್ರವಾಸಿ ಮಂದಿರದ ಜಾಗದಲ್ಲಿ ಮಲ್ಟಿ ಲೆವಲ್   ವ್ಯವಸ್ಥೆಯಡಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕು ಎಂದೂ ಉಣ್ಣಿಕೖಷ್ಣ ಒತ್ತಾಯಿಸಿದರು. ಮಡಿಕೇರಿ ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ  ತೆಕ್ಕಡ ಸಂತೋಷ್ ಮಾತನಾಡಿ  , ಬಾಡಿಗೆ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು. ಕೂಗ್೯  ಹೋಟೇಲ್  ಮತ್ತು , ರೆಸಾಟ್೯ ಅಸೋಸಿಯೇಷನ್   ಪದಾಧಿಕಾರಿ ಮೋಹನ್ ದಾಸ್, ಕೊಡಗು ಚೇಂಬರ್ ಆಫ್ ಕಾಮಸ್೯ ಉಪಾಧ್ಯಕ್ಷ  ಎ.ಕೆ. ನವೀನ್ ಮಾತನಾಡಿ, ಪ್ರವಾಸಿಗರಿಗೆ ಉಂಟಾಗುತ್ತಿರುವ ವಿವಿಧ ಸಮಸ್ಯೆ ಪರಿಹಾರ ಸಂಬಂಧಿತ ಶಾಸಕರ ಮೂಲಕ ಸಕಾ೯ರದ ಬಳಿ ನಿಯೋಗ ತೆರಳುವುಧು   ಸೂಕ್ತ ಎಂದು ಸಲಹೆ ನೀಡಿದರು. ಕೂಗ್೯  ಹೋಟೇಲ್ ಮತ್ತು , ರೆಸಾಟ್೯ ಅಸೋಸಿಯೇಷನ್ ಪ್ರಧಾನ ಕಾಯ೯ದಶಿ೯ ನಾಸೀರ್  ಅಹಮ್ಮದ್,,  ಖಜಾಂಜಿ ಸಾಗರ್  ಗಣಪತಿ,  ಜಂಟಿ ಕಾಯ೯ದಶಿ೯ ಡಿ.ಕೆ. ಮಂಜುನಾಥ್  ವೇದಿಕೆಯಲ್ಲಿದ್ದರು. ಕೊಡಗು ಟ್ರಾವಲ್ಸ್ ಅಸೋಸಿಯೇಷನ್  ಅಧ್ಯಕ್ಷ ವಸಂತ್,  ಸೋಮವಾರಪೇಟೆ ತಾಲೂಕು ಹೋಂಸ್ಟೇ ಅಸೋಸಿಯೇಷನ್ ನಿದೇ೯ಶಕ ಕಾತಿ೯ಕ್  ಸದಾನಂದ್, ಕಾವೇರಿ ಕಾರು ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗೌತಮ್, ಕಾಫಿ ನಾಡು ಕಾರು ಚಾಲಕ ಮತ್ತು  ಮಾಲೀಕರ ಸಂಘದ ಅಧ್ಯಕ್ಷ ಮಹೇಂದ್ರ ಸೇರಿದಂತೆ ವಿವಿಧ ಸಂಘಸಂಸ್ಥಗಳ ಪ್ರಮುಖರು ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*

ಮೇ 26, 2026

*ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*

ಮೇ 26, 2026

*AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*

ಮೇ 26, 2026

*ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*

ಮೇ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 26 NEWS DESK : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮ ಮಟ್ಟಕ್ಕೂ ತಲುಪುತ್ತಿದ್ದು,…

*AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*

ಮೇ 26, 2026

*ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*

ಮೇ 26, 2026

*ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*

ಮೇ 26, 2026

*ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*

ಮೇ 26, 2026

*ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 

ಮೇ 26, 2026

*ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೆ ಉಳಿಯಲಿ : ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಹಾಗೂ ಗ್ರಾಮಸ್ಥರ ಆಗ್ರಹ*

ಮೇ 26, 2026

*ನಿವೇಶನಕ್ಕಾಗಿ ಆಗ್ರಹಿಸಿ ಮೇ 29 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ*

ಮೇ 26, 2026

*ದೇವಟ್ ಪರಂಬ್ ನಲ್ಲಿ ಹಿರಿಯರಿಗೆ ಗೌರವ ಅರ್ಪಿಸಿದ ಸಿಎನ್‌ಸಿ : ಅಂತರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ*

ಮೇ 26, 2026

*ಸುಂಟಿಕೊಪ್ಪ : ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಅವರಿಗೆ ಸನ್ಮಾನ*

ಮೇ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.