
ವಿರಾಜಪೇಟೆ ಜೂ.3 NEWS DESK : ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮುಕ್ಕಾಟಿರ ವಿನಿತ ಕಾವೇರಮ್ಮ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೇಸ್ ಪಕ್ಷದ ಶಾಸಕರುಗಳು, ಜಿಲ್ಲಾ ಅಧ್ಯಕ್ಷರು, ಹಿರಿಯ ಕಾಂಗ್ರೇಸ್ ನಾಯಕರುಗಳ ಸಲಹೆಯ ಮೇರೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿಯವರ ಆದೇಶದ ಮೇರೆಗೆ ವಿನಿತಾ ಕಾವೇರಮ್ಮ ಅವರನ್ನು ಪ್ರಧಾನ ಕಾರ್ಯದರ್ಶೀಯಾಗಿ ನೇಮಿಸಲಾಗಿದೆ. ಇವರು ಮೂಲತಃ ವಿರಾಜಪೇಟೆ ತಾಲೂಕಿನ ಕಡಂಗ ಮರೂರು ಗ್ರಾಮದ ಮುಕ್ಕಾಟಿರ ಕರುಂಬಯ್ಯ ಅವರ ಪತ್ನಿ. ಇವರು ಹಲವಾರು ವರ್ಷಗಳೀಂದ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದರಲ್ಲದೆ, ಪ್ರಸ್ತುತ ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.









