
ವಿರಾಜಪೇಟೆ ಜೂ.3 NEWS DESK : ಕೊಡಗು ಜಿಲ್ಲೆಯ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರನ್ನಾಗಿ ಕೆ.ಎಸ್.ಗೋಪಾಲಕೃಷ್ಣ ನೇಮಕಗೊಂಡಿದ್ದಾರೆ. ರಾಜ್ಯ ಸಮಿತಿಯ ಅಧ್ಯಕ್ಷರಾದ ಹೆಚ್.ಪಿ.ಸೋಮಶೇಖರ್ ಕಾರ್ಯಕಾರಿ ಮಂಡಳಿಯ ಸಭೆ ಕರೆದು ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಉದ್ದೇಶದಿಂದ ಮತ್ತು ಬಡವರನ್ನು ರಕ್ಷಣೆ ಮಾಡಲು ಸರ್ಕಾರದ ಅನುದಾನದ ಆದೇಶದಂತೆ, ರಾಜ್ಯ ಕಾರ್ಯಕಾರಿ ಮಂಡಳಿ ಆದೇಶದಂತೆ ಈ ನೇಮಕಾತಿಯನ್ನು ಮಾಡಿದ್ದಾರೆ. ಕೊಡಗು ಜಿಲ್ಲೆಯ ಸಂಪೂರ್ಣ ಹಿಂದುಳಿದ ಬಡ ಒಕ್ಕಲಿಗರನ್ನು ರಕ್ಷಿಸಲು ಮತ್ತು ಸರ್ಕಾರದ ಸವಲತ್ತುಗಳನ್ನು ಒದಗಿಸಲು ಸಂಘಟನೆಯಲ್ಲಿ ತೊಡಗಿಸಿಕೊಂಡು ಸಂಘವನ್ನು ಮುನ್ನಡೆಸಲು ಆದೇಶ ಆದೇಶಿಸಿದ್ದಾರೆ. ಮೂಲತಃ ವಿರಾಜಪೇಟೆ ಸಮೀಪದ ಕಣ್ಣಂಗಾಲ ಗ್ರಾಮದವರಾದ ಕೆ.ಎಸ್.ಗೋಪಾಲಕೃಷ್ಣ ಅವರು ಕಣ್ಣಂಗಾಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಪಂಚಾಯತ್ ಪರಿಷತ್ ಸದಸ್ಯರಾಗಿ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಕಣ್ಣ೦ಗಾಲ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಹಾರಂಗಿ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸದಸ್ಯರಾಗಿ, ಕಣ್ಣ೦ಗಾಲ ದ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.









