Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯುಪಿಎಸ್‌ಸಿ ಪರೀಕ್ಷೆಗೆ ಉಚಿತ ತರಬೇತಿ : ಅರ್ಜಿ ಸಲ್ಲಿಸಲು ಜೂ.30 ಕೊನೆ ದಿನ*
  • *ಹೊರ ರಾಜ್ಯದ ವ್ಯಕ್ತಿಗಳಿಂದ ಕೊಡಗಿನಲ್ಲೂ ಮತದಾನ : ದ್ವಿಮುಖ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ವಂಚನೆ ತಡೆಗಟ್ಟಲು ಸಿಎನ್‌ಸಿ ಆಗ್ರಹ*
  • *ಡಿ.ಕೆ.ಶಿವಕುಮಾರ್ ಪ್ರಮಾಣವಚನ : ಕಾಂಗ್ರೆಸ್ ಸಂಭ್ರಮಾಚರಣೆ*
  • *ಸುಂಟಿಕೊಪ್ಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
  • *ಕೆದಮುಳ್ಳೂರು ವಲಯ ಕಾಂಗ್ರೆಸ್‍ನಿಂದ ಶ್ರಿ ಮಹಾದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ*
  • *ವಿರಾಜಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
  • *ಜೂ.7 ರಂದು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಸಮಾರಂಭ*
  • *ಶಾಸಕ ಎ.ಎಸ್.ಪೊನ್ನಣ್ಣರಿಗೆ ಸಚಿವ ಸ್ಥಾನ ನೀಡಲು ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ಆಗ್ರಹ*
  • *ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ.ಎಸ್.ಗೋಪಾಲಕೃಷ್ಣ ನೇಮಕ*
  • *ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ : ಯುವ ಸಮೂಹ ದುಶ್ಚಟಗಳಿಂದ ದೂರವಿರಿ : ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಹೊರ ರಾಜ್ಯದ ವ್ಯಕ್ತಿಗಳಿಂದ ಕೊಡಗಿನಲ್ಲೂ ಮತದಾನ : ದ್ವಿಮುಖ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ವಂಚನೆ ತಡೆಗಟ್ಟಲು ಸಿಎನ್‌ಸಿ ಆಗ್ರಹ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಹೊರ ರಾಜ್ಯದ ವ್ಯಕ್ತಿಗಳಿಂದ ಕೊಡಗಿನಲ್ಲೂ ಮತದಾನ : ದ್ವಿಮುಖ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ವಂಚನೆ ತಡೆಗಟ್ಟಲು ಸಿಎನ್‌ಸಿ ಆಗ್ರಹ*

ಜೂನ್ 4, 20264 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜೂ.4 : ಅಕ್ರಮ ಮತದಾರರ ಗುರುತಿನ ಚೀಟಿಗಳನ್ನು ರದ್ದುಗೊಳಿಸಲು ‘ವಿಶೇಷ ತೀವ್ರ ಪರಿಷ್ಕರಣೆ’ ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಸ್ಥಳೀಯ ಆದಿಮಸಂಜಾತ ಕೊಡವರ ಚುನಾವಣಾ ಹಕ್ಕುಗಳ ರಕ್ಷಣೆ ಮಾಡಬೇಕು, 2027ರ ಜನಗಣತಿ ಹಾಗೂ ರಾಷ್ಟ್ರೀಯ ಜಾತಿ ಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಒದಗಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮತದಾರರ ಪಟ್ಟಿಯಲ್ಲಿ ಸಂಶಯಾಸ್ಪದ ಪೌರತ್ವ ಹೊಂದಿರುವವರನ್ನು ಸೇರ್ಪಡೆಗೊಳಿಸುತ್ತಿರುವುದರಿಂದ ಕೊಡವ ಭೂಮಿಯು ದೊಡ್ಡ ಪ್ರಮಾಣದ ಜನಸಂಖ್ಯಾ ಬದಲಾವಣೆಯನ್ನು ಎದುರಿಸುತ್ತಿದೆ. ಈ ಅಕ್ರಮ ಮತದಾರರ ಗುರುತಿನ ಚೀಟಿಗಳೇ ಕೊಡವರ ರಾಜಕೀಯ ಅಸ್ತಿತ್ವದ ವಿರೂಪಕ್ಕೆ ಮೂಲ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಭಾರತದ ಇತರ ರಾಜ್ಯಗಳ ಜನರು ತಮ್ಮ ತವರು ಜಿಲ್ಲೆಯಲ್ಲಿ ಮಾತ್ರವಲ್ಲದೆ ಕೊಡಗು ಜಿಲ್ಲೆಯಲ್ಲಿ ಕೂಡ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಹೊಂದಿದ್ದಾರೆ. ಚುನಾವಣೆಯ ಸಮಯದಲ್ಲಿ, ಕೊಡಗಿನಲ್ಲ್ಲಿ ಮತ ಚಲಾಯಿಸುತ್ತಾರೆ. ಅಲ್ಲದೆ ತಮ್ಮ ತವರು ರಾಜ್ಯಕ್ಕೆ ಪ್ರಯಾಣಿಸಿ ಅಲ್ಲಿಯೂ ಮತದಾನ ಮಾಡುತ್ತಾರೆ. ಲೋಕಸಭೆ ಚುನಾವಣೆ ಭಾರತದಾದ್ಯಂತ 5 ರಿಂದ 6 ಹಂತಗಳಲ್ಲಿ ನಡೆಯುತ್ತದೆ ಮತ್ತು ರಾಜ್ಯ ಚುನಾವಣೆಗಳು ಸಹ ವಿಭಿನ್ನ ಸಮಯಗಳಲ್ಲಿ ನಡೆಯುತ್ತವೆ. ವಿವಿಧ ಮತದಾನದ ವೇಳಾಪಟ್ಟಿಯು ಅಂತಹ ದ್ವಿ-ಐಡಿ ಹೊಂದಿರುವವರಿಗೆ ಹಲವು ಬಾರಿ ಮತ ಚಲಾಯಿಸಲು ಅನಗತ್ಯ ಅನುಕೂಲವನ್ನು ನೀಡುತ್ತದೆ. ಇದು “ಒಬ್ಬ ವ್ಯಕ್ತಿ, ಒಂದು ಮತ” ತತ್ವವನ್ನು ಬುಡಮೇಲು ಮಾಡುತ್ತದೆ ಮತ್ತು ಕೊಡವರ ರಾಜಕೀಯ ಪ್ರಾತಿನಿಧ್ಯವನ್ನು ವಿರೂಪಗೊಳಿಸುತ್ತದೆ ಎಂದು ಗಮನ ಸೆಳೆದರು. *ಅಕ್ರಮ ಮತದಾರರು* ಸುಂಟಿಕೊಪ್ಪ ಮತ್ತಿಕಾಡು, ಸಿದ್ದಾಪುರ, ಕುಟ್ಟ ಮುಂತಾದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ವ್ಯಕ್ತಿಗಳು ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಕಾರ್ಮಿಕರನ್ನು ದೊಡ್ಡ ಕಾರ್ಪೊರೇಟ್ ತೋಟಗಳಿಗೆ ಪೂರೈಸುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರಕ್ರಿಯೆಯಲ್ಲಿ ವಲಸೆ ಕಾರ್ಮಿಕರಿಗೆ ನಕಲಿ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ಆಧಾರ್ ಗೆ ರೂ.2 ಸಾವಿರ ವಸೂಲಿ ಮಾಡಲಾಗುತ್ತಿದೆ. ಈ ಸಂಘಟಿತ ಜಾಲವು ಕೊಡಗಿನ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರ್ಪಡೆಗೊಳ್ಳಲು ಅನುಕೂಲ ಮಾಡಿಕೊಡುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. 371ರ ಅಡಿಯಲ್ಲಿ ಕೊಡವಲ್ಯಾಂಡ್‌ಗೆ ಇನ್ನರ್ ಲೈನ್ ಪರ್ಮಿಟ್ ಆದ್ದರಿಂದ, ಕೇಂದ್ರ ಗೃಹ ಸಚಿವಾಲಯವು ಸ್ಥಾಪಿಸಿರುವ ಜನಸಂಖ್ಯಾ ಬದಲಾವಣೆ ಕುರಿತ ಉನ್ನತ ಮಟ್ಟದ ಸಮಿತಿಯು ಇದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅಂತಹ ಜನರನ್ನು ಪಟ್ಟಿಯಿಂದ ತೆಗೆದು ಹಾಕಬೇಕು ಮತ್ತು ಭಾರತದ ಈಶಾನ್ಯ ವಲಯದಲ್ಲಿ ಜಾರಿಗೊಳಿಸಿರುವಂತೆ ಲೇಖನ 371 ರಲ್ಲಿ ಅಳವಡಿಸಲಾಗಿರುವ ಇನ್ನರ್ ಲೈನ್ ಪರ್ಮಿಟ್ ಅಡಿಯಲ್ಲಿ ಕೊಡವ ಪ್ರದೇಶವನ್ನು ತರಬೇಕು. ಕೊಡಗಿನ ಮತದಾರರ ಪಟ್ಟಿಯನ್ನು ನೆರೆಯ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಹಾಸನ, ದಕ್ಷಿಣ ಕನ್ನಡ ಮತ್ತು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ, ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳೊಂದಿಗೆ ತಪಾಸಣೆಗೆ ಒಳಪಡಿಸಿ ದ್ವಿಮುಖ ನಮೂದುಗಳನ್ನು ರದ್ದುಗೊಳಿಸಬೇಕು. ಹಾಗೆಯೇ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನ ರೋಖಿನ್ ಪ್ರಾಂತ್ಯದ (ರೋಹಿಂಗ್ಯಾ) ವಿದೇಶಗಳಿಂದ ರಹಸ್ಯವಾಗಿ ಪೌರತ್ವ ಪಟ್ಟಿಗೆ ಸೇರಿದ ಅಕ್ರಮ ವಲಸಿಗರನ್ನು ತೆಗೆದು ಹಾಕಬೇಕು. ನಕಲಿ ಐಡಿಗಳನ್ನು ಒದಗಿಸುವ ಏಜೆಂಟರು, ದಲ್ಲಾಳಿಗಳು ಹಾಗೂ ಸಹಕರಿಸುವವರ ವಿರುದ್ಧ ಐಪಿಸಿ 420, 468, 471 ಮತ್ತು ಆರ್‌ಪಿ ಕಾಯ್ದೆ 1950 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು. ಇದೇ ಜೂ.20 ರಿಂದ ಎಸ್‌ಐಆರ್ ಪ್ರಾರಂಭಕ್ಕೂ ಮುನ್ನ ಸುಂಟಿಕೊಪ್ಪ, ಮತ್ತಿಕಾಡು, ಸಿದ್ದಾಪುರ ಮತ್ತು ಕುಟ್ಟ ಮತ್ತಿತರ ತೋಟದ ವಲಯಗಳಲ್ಲಿ ಪರಿಶೀಲನೆಗಾಗಿ ಮುಖ್ಯ ಚುನಾವಣಾಧಿಕಾರಿಗಳು ವಿಶೇಷ ಕಾರ್ಯಪಡೆಯನ್ನು ರಚಿಸಬೇಕು ಎಂದು ಒತ್ತಾಯಿಸಿದರು. ಆದಿಮಸಂಜಾತ  ಕೊಡವರು ಅತ್ಯಂತ ದೇಶಭಕ್ತರು ಮತ್ತು ರಾಷ್ಟçಪ್ರೇಮಿಗಳು. ಕೊಡಗಿನ ಗಣನೀಯ ಸಂಖ್ಯೆಯ ಕೊಡವರು ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ ಭದ್ರತಾ ಪಡೆ ಹಾಗೂ ಸಶಸ್ತç ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್‌ಐಆರ್ ಮತ್ತು ಜನಗಣತಿ ಸಂದರ್ಭ ಅವರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಬಾರದು. ಸೈನಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ದುಷ್ಟ ಸಂಚನ್ನು ತಕ್ಷಣ ತಡೆ ಹಿಡಿಯಬೇಕು. ಪ್ರತಿಯೊಬ್ಬ ಮತದಾರನನ್ನು ಭೌತಿಕವಾಗಿ ಪರಿಶೀಲಿಸಲು ಕೊಡಗು ಜಿಲ್ಲೆಯಲ್ಲಿ ಬೂತ್ ಮಟ್ಟದ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆಸಬೇಕು. ಕೊಡವ ಭೂಮಿಯ ಮಣ್ಣಿಗೆ ಸಂಬAಧಿಸಿದ 1971ರ ಪೂರ್ವದ ಸಿಂಧು ಪೌರತ್ವ/ಪೂರ್ವಜರ ದಾಖಲೆಗಳನ್ನು ಸಲ್ಲಿಸಲು ವಿಫಲರಾಗುವ ಎಲ್ಲಾ ಅಕ್ರಮ ಮತದಾರರನ್ನು ತಕ್ಷಣವೇ ಪಟ್ಟಿಯಿಂದ ಕೈಬಿಡಬೇಕು. ಅಕ್ರಮ ಮತದಾರರನ್ನು ಸೇರಿಸಲು ನೆರವಾದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಬೇಕು. ಸ್ಥಳೀಯ ಆದಿಮಸಂಜಾತ ಕೊಡವರ ಹೆಸರುಗಳ ರದ್ಧತಿಯನ್ನು ತಡೆಗಟ್ಟುವುದು ಮತ್ತು ಅವರ ಕಾನೂನುಬದ್ಧತೆಯನ್ನು ದೃಢೀಕರಿಸಬೇಕು. ವಲಸೆ, ಉದ್ಯೋಗ ಮತ್ತು ಭೂ ದಾಖಲೆಗಳ ಕೊರತೆಯಿಂದಾಗಿ, ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ನೈಜ ಕೊಡವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆಯುವ ಸಂಭವ ಹೆಚ್ಚಾಗಿದೆ. ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಅಡಿಯಲ್ಲಿ ‘ವಿಶೇಷ ಕೊಡವ ಪರಿಶೀಲನಾ ಕೋಶ’ವನ್ನು ಸ್ಥಾಪಿಸಬೇಕು. ಈ ಕೋಶವು ವಂಶಾವಳಿ, ಕುಟುಂಬ-ಒಕ್ಕ, ಮನೆ-ಪೆದ, ಕುಲದ ದಾಖಲೆಗಳು ಮತ್ತು ಸಮುದಾಯದ ದೃಢೀಕರಣದ ಆಧಾರದ ಮೇಲೆ ನೈಜ ಕೊಡವ ಮತದಾರರನ್ನು ಗುರುತಿಸಬೇಕು. ಸೂಕ್ತ ಭೌತಿಕ ಪರಿಶೀಲನೆ ಮತ್ತು ವಿಚಾರಣೆಗೆ ಅವಕಾಶ ನೀಡದೆ ಯಾವುದೇ ಕಾರಣಕ್ಕೂ ಒಬ್ಬನೇ ಒಬ್ಬ ಕೊಡವ ಮತದಾರನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬಾರದು. 2027ರ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಕೊಡವರು ಪ್ರತ್ಯೇಕ ಆದಿಮಸಂಜಾತ ಏಕ-ಜನಾಂಗೀಯ ಪ್ರಜಾಸಮೂಹವಾಗಿದ್ದು, ಅವರು ಯಾವುದೇ ಇತರ ಗುಂಪಿನ ಉಪಜಾತಿಯಲ್ಲ. ಮುಂಬರುವ 2027 ರ ರಾಷ್ಟ್ರೀಯ ಜನಗಣತಿ ಮತ್ತು ರಾಷ್ಟಿçÃಯ ಜಾತಿ ಗಣತಿಯಲ್ಲಿ “ಕೊಡವ” ಜನಾಂಗಕ್ಕೆ ಪ್ರತ್ಯೇಕ ಕೋಡ್ ಮತ್ತು ಕಾಲಂ ನೀಡಬೇಕು. ಭಾರತದ ರಿಜಿಸ್ಟಾçರ್ ಜನರಲ್ ಮತ್ತು ಜನಗಣತಿ ಆಯುಕ್ತರು ಕೊಡವರ ಪಾರಂಪರಿಕ ವಂಶಾವಳಿ ಮತ್ತು ವಿಶಿಷ್ಟ ಜನಾಂಗೀಯತೆಯ ಕುರಿತಾದ ಪ್ರಸಿದ್ಧ ಮಾನವಶಾಸ್ತçಜ್ಞ ಡಾ. ಎಂ.ಎ. ಕಲಾಂ ಅವರ ಸಂಶೋಧನಾ ಪ್ರಬಂಧವನ್ನು ಹಾಗೂ 1871-72 ರಿಂದ 1931 ರವರೆಗಿನ ಐತಿಹಾಸಿಕ ಜನಗಣತಿ ದಾಖಲೆಗಳನ್ನು ಪ್ರಮಾಣೀಕರಣವಾಗಿ ಪರಿಗಣಿಸಬೇಕು. ಡಾ. ಸುಬ್ರಮಣಿಯನ್ ಸ್ವಾಮಿಯವರು ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಶಯದಂತೆ, ಕೊಡವರನ್ನು “ಆದಿಮಸಂಜಾತ ಬುಡಕಟ್ಟು ಜನಾಂಗ” ಎಂದು ಗುರುತಿಸಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವನ್ನು ನೀಡಬೇಕು. ಸಂವಿಧಾನದ ವಿಧಿ 25 ಮತ್ತು 26 ರ ಅಡಿಯಲ್ಲಿ ಕೊಡವರ ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವಾದ ‘ತೋಕ್ ಸಂಸ್ಕಾರ ಮತ್ತು ಆಯುಧ ಹಕ್ಕನ್ನು’ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಬೇಕು. ವಿಶ್ವಸಂಸ್ಥೆಯ ಆದಿಮಸಂಜಾತ ಆಸ್ತಿ ಹಕ್ಕುಗಳ ಅಡಿಯಲ್ಲಿ ಕೊಡವರ ಪಾರಂಪರಿಕ ಭೂಮಿಯನ್ನು ಸಂರಕ್ಷಿಸಬೇಕು. ಸಿಕ್ಕಿಂನ ‘ಸಂಘ’ ಮಾದರಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಸಂಸತ್ ಮತ್ತು ವಿಧಾನಸಭಾ ಕ್ಷೇತ್ರವನ್ನು ಮರುವಿಂಗಡಿಸಬೇಕು. ಕೊಡವ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಮತ್ತು ‘ದೇವಟ್ ಪರಂಬ್’ ಜನಾಂಗೀಯ ಹತ್ಯಾಕಾಂಡವನ್ನು ವಿಶ್ವಸಂಸ್ಥೆಯ ಹೋಲೋಕಾಸ್ಟ್ ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ವಿಕೃತ ಇತಿಹಾಸಕಾರನೊಬ್ಬ ಕೊಡವರ ಇತಿಹಾಸವನ್ನು ಅತ್ಯಂತ ವಿಕೃತ ನಿರೂಪಣೆಗಳೊಂದಿಗೆ ಕಲುಷಿತಗೊಳಿಸಿದ್ದಾನೆ. ಈ ನಿಂದನಾತ್ಮಕ ಇತಿಹಾಸವನ್ನು ಅಧಿಕೃತವಾಗಿ ರದ್ದುಗೊಳಿಸಬೇಕು ಮತ್ತು ಆ ವಿನಾಶಕಾರಿ ಬೇಜವಾಬ್ದಾರಿ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ರಾಷ್ಟçಪತಿಗಳು, ಪ್ರಧಾನಮಂತ್ರಿಗಳು, ಗೃಹ ಸಚಿವರು, ಅಧ್ಯಕ್ಷರು, ಜನಸಂಖ್ಯಾ ಬದಲಾವಣೆ ಕುರಿತ ಉನ್ನತ ಮಟ್ಟದ ಸಮಿತಿ, ಜನಗಣತಿ ಆಯುಕ್ತರು ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು. ಚೋಳಪಂಡ ಜ್ಯೋತಿ ನಂಜಪ್ಪ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಮೆ|| ಅಳಮಂಡ  ಜೈ ಗಣಪತಿ, ಪಟ್ಟಮಾಡ ಕುಶ, ನಂದೇಟಿರ ರವಿ ಸುಬ್ಬಯ್ಯ, ಮಂದಪAಡ ಮನೋಜ್ ಮಂದಣ್ಣ, ಕಿರಿಯಮಾಡ ಶೇರಿನ್, ಅರೇಯಡ ಗಿರೀಶ್, ಅಪ್ಪಾರಂಡ ಪ್ರಸಾದ್ ಕುಶಾಲಪ್ಪ, ಪುದಿಯೋಕಡ ಕಾಶಿ ಕರುಂಬಯ್ಯ, ಮಣವಟ್ಟಿರ ಚಿಣ್ಣಪ್ಪ, ಪುದಿಯೋಕಡ ಪೃಥ್ವಿ, ಪುಟ್ಟಿಚಂಡ ಡಾನ್ ದೇವಯ್ಯ, ಬೇಪಡಿಯಂಡ ಬಿದ್ದಪ್ಪ, ಸಾದೆರ ರಮೇಶ್, ಪಾಲೇಕಂಡ ಪ್ರಧಾನ್ ಪೂಣಚ್ಚ, ಚೋಳಪಂಡ ನಾಣಯ್ಯ, ನಂದಿನೆರವAಡ ಮಿಟ್ಟು ಅಪ್ಪಯ್ಯ, ನಂದಿನೆರವAಡ ಅಯ್ಯಣ್ಣ, ಚೊಕ್ಕಂಡ ಕಟ್ಟಿ, ಅಚ್ಚಕಾಳೇರ  ನವೀನ್ ಮೊಣ್ಣಪ್ಪ, ಕೂತಂಡ ರೋಷನ್ ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಡಾ.ಸಹನಾ ಆದಿಮನಿ ಅವರು ಜ್ಞಾಪನಾ ಪತ್ರವನ್ನು ಸ್ವೀಕರಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯುಪಿಎಸ್‌ಸಿ ಪರೀಕ್ಷೆಗೆ ಉಚಿತ ತರಬೇತಿ : ಅರ್ಜಿ ಸಲ್ಲಿಸಲು ಜೂ.30 ಕೊನೆ ದಿನ*

ಜೂನ್ 4, 2026

*ಡಿ.ಕೆ.ಶಿವಕುಮಾರ್ ಪ್ರಮಾಣವಚನ : ಕಾಂಗ್ರೆಸ್ ಸಂಭ್ರಮಾಚರಣೆ*

ಜೂನ್ 3, 2026

*ಸುಂಟಿಕೊಪ್ಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*

ಜೂನ್ 3, 2026

*ಹೊರ ರಾಜ್ಯದ ವ್ಯಕ್ತಿಗಳಿಂದ ಕೊಡಗಿನಲ್ಲೂ ಮತದಾನ : ದ್ವಿಮುಖ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ವಂಚನೆ ತಡೆಗಟ್ಟಲು ಸಿಎನ್‌ಸಿ ಆಗ್ರಹ*

ಜೂನ್ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಜೂ.4 : ಅಕ್ರಮ ಮತದಾರರ ಗುರುತಿನ ಚೀಟಿಗಳನ್ನು ರದ್ದುಗೊಳಿಸಲು ‘ವಿಶೇಷ ತೀವ್ರ ಪರಿಷ್ಕರಣೆ’ ಯನ್ನು ಕಟ್ಟುನಿಟ್ಟಾಗಿ…

*ಡಿ.ಕೆ.ಶಿವಕುಮಾರ್ ಪ್ರಮಾಣವಚನ : ಕಾಂಗ್ರೆಸ್ ಸಂಭ್ರಮಾಚರಣೆ*

ಜೂನ್ 3, 2026

*ಸುಂಟಿಕೊಪ್ಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*

ಜೂನ್ 3, 2026

*ಕೆದಮುಳ್ಳೂರು ವಲಯ ಕಾಂಗ್ರೆಸ್‍ನಿಂದ ಶ್ರಿ ಮಹಾದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ*

ಜೂನ್ 3, 2026

*ವಿರಾಜಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*

ಜೂನ್ 3, 2026

*ಜೂ.7 ರಂದು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಸಮಾರಂಭ*

ಜೂನ್ 3, 2026

*ಶಾಸಕ ಎ.ಎಸ್.ಪೊನ್ನಣ್ಣರಿಗೆ ಸಚಿವ ಸ್ಥಾನ ನೀಡಲು ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ಆಗ್ರಹ*

ಜೂನ್ 3, 2026

*ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ.ಎಸ್.ಗೋಪಾಲಕೃಷ್ಣ ನೇಮಕ*

ಜೂನ್ 3, 2026

*ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ : ಯುವ ಸಮೂಹ ದುಶ್ಚಟಗಳಿಂದ ದೂರವಿರಿ : ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭ*

ಜೂನ್ 3, 2026

*ಜೂ.21 ರಂದು ಅಂತರ ರಾಷ್ಟ್ರೀಯ ಯೋಗ ದಿನಾಚರಣೆ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಜೂನ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.