Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ : ಗ್ಯಾರಂಟಿ ಯೋಜನೆ ಪ್ರಗತಿ ಬಗ್ಗೆ ಮಾಹಿತಿ ಪಡೆದ ಮಂದ್ರೀರ ಮೋಹನ್‍ದಾಸ್*
  • *ಎಸ್‍ಐಆರ್ ಪ್ರಕ್ರಿಯೆ : ಕೊಡಗಿನಲ್ಲಿ ಶೇ.86 ರಷ್ಟು ಡಿಜಿಟಲೀಕರಣ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • ವಿರಾಜಪೇಟೆ : ಪರಿಸರ ಸ್ವಚ್ಛತೆಯ ಪರಿಪಾಠ ಮನೆಗಳಿಂದಲೇ ಆರಂಭವಾಗಬೇಕು: ತಹಶೀಲ್ದಾರ್ ಪ್ರವೀಣ್ ಕುಮಾರ್
  • *ಮಡಿಕೇರಿಯಲ್ಲಿ ಸಿಬಿಎಸ್‌ಇ ಅಂತರಶಾಲಾ ಪೋಸ್ಟರ್ ರಚನಾ ಸ್ಪರ್ಧೆ : ವಿಜೇತರಿಗೆ ಬಹುಮಾನ ವಿತರಣೆ*
  • *ಕೂತಿ ಗ್ರಾಮದ ತಮ್ಮೇಗೌಡ ಗೌರಮ್ಮ ಸೌಹಾರ್ದ ಟ್ರಸ್ಟ್‌ನ ವಾರ್ಷಿಕ ಸಭೆ*
  • *ನೇರುಗಳಲೆ : ಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಣೆ*
  • *ಸೋಮವಾರಪೇಟೆಯಲ್ಲಿ ಛತ್ರಪತಿ ಶಾಹು ಮಹಾರಾಜ ಜಯಂತಿ*
  • *ಆ.22ಕ್ಕೆ ಗುಂಡೂರಾಯರ ಪ್ರತಿಮೆ ಸ್ಥಾಪನೆ : ಕುಶಾಲನಗರ ಪುರಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಭೆಯಲ್ಲಿ ಚರ್ಚೆ*
  • *ಕುಶಾಲನಗರ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಜೇಷ ಪೂಜೆ*
  • ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ : ದುಶ್ಚಟಗಳಿಂದ ದೂರವಿದ್ದರೆ ಗೌರವಯುತವಾಗಿ ಬದಕಲು ಸಾಧ್ಯ : ಡಾ.ಜಮೀರ್ ಅಹಮದ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*”ಭಾರತ್ ಜೋಡೋ ಯುವ ಸಂಘ” ರಾಜಕೀಯ ಪ್ರೇರಿತ : ಸೋಮವಾರಪೇಟೆ ಬಿಜೆಪಿ ತೀವ್ರ ವಿರೋಧ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*”ಭಾರತ್ ಜೋಡೋ ಯುವ ಸಂಘ” ರಾಜಕೀಯ ಪ್ರೇರಿತ : ಸೋಮವಾರಪೇಟೆ ಬಿಜೆಪಿ ತೀವ್ರ ವಿರೋಧ*

ಜೂನ್ 5, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜೂ.5 : ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಪ್ರತಿ ಗ್ರಾ.ಪಂ ಮಟ್ಟದಲ್ಲಿ “ಭಾರತ್ ಜೋಡೋ ಯುವ ಸಂಘ” ವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಸಂಘಟನೆಯಾಗಿದ್ದು, ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು “ಭಾರತ್ ಜೋಡೋ ಯುವ ಸಂಘ” ವನ್ನು ಮುನ್ನಡೆಸಲು ಸರಕಾರದ ಮೂಲಕ ತಲಾ 10 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ನೂತನ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದು ಜನರು ಪಾವತಿಸಿದ ತೆರಿಗೆ ಹಣವಾಗಿದ್ದು, ಯಾವುದೇ ಕಾರಣಕ್ಕು ಈ ರೀತಿಯ ರಾಜಕೀಯ ಲಾಭದ ದೃಷ್ಟಿಕೋನದ ಸಂಘಗಳಿಗೆ ವಿನಿಯೋಗ ಮಾಡಬಾರದು ಮತ್ತು ಗ್ರಾಮಗಳಲ್ಲಿ ಸಂಘರ್ಷಕ್ಕೆ ಕಾರಣವಾಗಬಲ್ಲ ಸಂಘಟನೆಗಳನ್ನು ಸರಕಾರ ರಚಿಸಬಾರದು ಎಂದು ಒತ್ತಾಯಿಸಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಹಗಲುಗನಸಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಭಾರತ್ ಜೋಡೋ” ಯಾತ್ರೆಯನ್ನು ದೇಶವ್ಯಾಪಿ ಕೈಗೊಂಡು ರಾಜಕೀಯ ಲಾಭ ಗಳಿಸುವಲ್ಲಿ ವಿಫಲರಾಗಿದ್ದರು. ಈ ಯಾತ್ರೆಗೆ ಕಾಂಗ್ರೆಸ್ ಪಕ್ಷದ ಹಣ ವಿನಿಯೋಗವಾಗಿತ್ತು. ಆದರೆ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿರುವ “ಭಾರತ್ ಜೋಡೋ ಯುವ ಸಂಘ” ಗಳಿಗೆ ಜನರ ತೆರಿಗೆ ಹಣವನ್ನು ನೀಡಲಾಗುತ್ತಿದ್ದು, ಇದು ಖಂಡನೀಯ. ಸರಕಾರ ತಕ್ಷಣ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ಪಕ್ಷದ ಸಂಘಟನೆಗಾಗಿ ಮತ್ತು ಮುಂಬರುವ ಚುನಾವಣೆಗಳಲ್ಲಿ ಲಾಭ ಗಳಿಸುವುದಕ್ಕಾಗಿ “ಭಾರತ್ ಜೋಡೋ” ಹೆಸರಿನಲ್ಲಿ ಸಂಘವನ್ನು ರಚಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಈ ರೀತಿಯ ಸಂಘಗಳ ಸ್ಥಾಪನೆಯಿಂದ ಗ್ರಾಮಗಳಲ್ಲಿ ದ್ವೇಷ ಮತ್ತು ಅಶಾಂತಿಯ ವಾತಾವರಣ ಸೃಷ್ಟಿಯಾಗುವ ಆತಂಕವಿದೆ. ಇದಕ್ಕೆ ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲವೆಂದು ಕಂಠಿ ಕಾರ್ಯಪ್ಪ ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ಪ್ರೇರಿತ ಸಂಘಟನೆಯ ರಚನೆಗಾಗಿ ತಲಾ 10 ಲಕ್ಷ ರೂ.ಗಳನ್ನು ನೀಡುವ ಬದಲು ರಾಜ್ಯದ ಜನರ ಮೇಲೆ ಹೊರಿಸಿರುವ ತೆರಿಗೆ ಹೊರೆಯನ್ನು ಕಡಿಮೆ ಮಾಡಲಿ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲಿ. ಯುವ ಸಮೂಹದ ಪ್ರಗತಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ಅಷ್ಟು ಕಾಳಜಿ ಇದ್ದರೆ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್ ಮತ್ತು ಸಹಕಾರ ಸಂಘಗಳ ಮೂಲಕ ಬಡ್ಡಿ ರಹಿತ ಸಾಲವನ್ನು ನೀಡಲಿ ಎಂದು ಒತ್ತಾಯಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ : ಗ್ಯಾರಂಟಿ ಯೋಜನೆ ಪ್ರಗತಿ ಬಗ್ಗೆ ಮಾಹಿತಿ ಪಡೆದ ಮಂದ್ರೀರ ಮೋಹನ್‍ದಾಸ್*

ಜುಲೈ 30, 2026

*ಎಸ್‍ಐಆರ್ ಪ್ರಕ್ರಿಯೆ : ಕೊಡಗಿನಲ್ಲಿ ಶೇ.86 ರಷ್ಟು ಡಿಜಿಟಲೀಕರಣ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 30, 2026

ವಿರಾಜಪೇಟೆ : ಪರಿಸರ ಸ್ವಚ್ಛತೆಯ ಪರಿಪಾಠ ಮನೆಗಳಿಂದಲೇ ಆರಂಭವಾಗಬೇಕು: ತಹಶೀಲ್ದಾರ್ ಪ್ರವೀಣ್ ಕುಮಾರ್

ಜುಲೈ 30, 2026

*ಎಸ್‍ಐಆರ್ ಪ್ರಕ್ರಿಯೆ : ಕೊಡಗಿನಲ್ಲಿ ಶೇ.86 ರಷ್ಟು ಡಿಜಿಟಲೀಕರಣ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಜುಲೈ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜು.30 NEWS DESK : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‍ಐಆರ್) ಡಿಜಿಟಲೀಕರಣವು ಜಿಲ್ಲೆಯಲ್ಲಿ ಶೇ.86 ರಷ್ಟು ಪೂರ್ಣಗೊಂಡಿದೆ…

ವಿರಾಜಪೇಟೆ : ಪರಿಸರ ಸ್ವಚ್ಛತೆಯ ಪರಿಪಾಠ ಮನೆಗಳಿಂದಲೇ ಆರಂಭವಾಗಬೇಕು: ತಹಶೀಲ್ದಾರ್ ಪ್ರವೀಣ್ ಕುಮಾರ್

ಜುಲೈ 30, 2026

*ಮಡಿಕೇರಿಯಲ್ಲಿ ಸಿಬಿಎಸ್‌ಇ ಅಂತರಶಾಲಾ ಪೋಸ್ಟರ್ ರಚನಾ ಸ್ಪರ್ಧೆ : ವಿಜೇತರಿಗೆ ಬಹುಮಾನ ವಿತರಣೆ*

ಜುಲೈ 30, 2026

*ಕೂತಿ ಗ್ರಾಮದ ತಮ್ಮೇಗೌಡ ಗೌರಮ್ಮ ಸೌಹಾರ್ದ ಟ್ರಸ್ಟ್‌ನ ವಾರ್ಷಿಕ ಸಭೆ*

ಜುಲೈ 30, 2026

*ನೇರುಗಳಲೆ : ಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಣೆ*

ಜುಲೈ 30, 2026

*ಸೋಮವಾರಪೇಟೆಯಲ್ಲಿ ಛತ್ರಪತಿ ಶಾಹು ಮಹಾರಾಜ ಜಯಂತಿ*

ಜುಲೈ 30, 2026

*ಆ.22ಕ್ಕೆ ಗುಂಡೂರಾಯರ ಪ್ರತಿಮೆ ಸ್ಥಾಪನೆ : ಕುಶಾಲನಗರ ಪುರಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಭೆಯಲ್ಲಿ ಚರ್ಚೆ*

ಜುಲೈ 30, 2026

*ಕುಶಾಲನಗರ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಜೇಷ ಪೂಜೆ*

ಜುಲೈ 30, 2026

ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ : ದುಶ್ಚಟಗಳಿಂದ ದೂರವಿದ್ದರೆ ಗೌರವಯುತವಾಗಿ ಬದಕಲು ಸಾಧ್ಯ : ಡಾ.ಜಮೀರ್ ಅಹಮದ್*

ಜುಲೈ 30, 2026

*ಕಾವೇರಿ ಉಳಿಯಬೇಕಾದರೆ ಮೊದಲು ಕೊಡಗು ಉಳಿಯಬೇಕು*

ಜುಲೈ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.