
ಮಡಿಕೇರಿ NEWS DESK ಜೂ.6 : ನಗರದ ಐಟಿಐ ಸಮೀಪ ನಿರ್ಮಾಣಗೊಳ್ಳಲಿರುವ ಅಮ್ಮ ಕೊಡವ ಸಮಾಜದ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು. ಎಲ್ಲಾ ಸಮುದಾಯಗಳ ಪ್ರಗತಿಗೆ ಸರಕಾರ ಬದ್ಧವಾಗಿದೆ. ಗುಣಮಟ್ಟದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು. ಅಮ್ಮ ಕೊಡವ ಸಮಾಜದ ಮಾಚಮಂಡ ಬಿ.ಮಾದಮ್ಮಯ್ಯ, ಗೌರಮ್ಮ ಮಾದಮ್ಮಯ್ಯ, ನಾರಿಮಂಡ ಬಿ.ಪಾಲಾಕ್ಷ, ರೇವತಿ ಪಾಲಾಕ್ಷ, ಕೊಂಡಿಯಮ್ಮಂಡ ಕಿಶೋರ್ ಕುಮಾರ್, ಇಂದಿರಾ ಕಿಶೋರ್ ಕುಮಾರ್, ನೆರಿಯಂಡಮ್ಮನ ಜನಾರ್ಧನ ಹಾಗೂ ಸಮಿತಿಯ ಸದಸ್ಯರು, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಶಶಿಕಲಾ, ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ, ಪ್ರಮುಖರಾದ ವಿ.ಜಿ.ಮೋಹನ್, ಹರಿಪ್ರಸಾದ್, ಯಶ್, ಪವಿತ್ರ, ಲೀಲಾ ಶೇಷಮ್ಮ, ಸೂರಿ, ಸುಬ್ರಮಣಿ, ವಸಂತ ಭಟ್, ಹಬೀಬ್, ಶರಣು, ಮಂಜುನಾಥ್, ಕೋಚನ ಚೇತನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.









