Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಮಲೇರಿಯ ವಿರೋಧಿ ಮಾಸಾಚರಣೆ*
  • *ಕೂಡಿಗೆ ಸೈನಿಕ ಶಾಲೆಯ ರಾಷ್ಟ್ರೀಯ ಫುಟ್ಬಾಲ್ ಸಮಾರೋಪ : ರಾಷ್ಟ್ರೀಯ ಚಿಂತನೆ ಮೂಡಿಸುವಲ್ಲಿ ಸೈನಿಕ ಶಾಲೆಗಳ ಪಾತ್ರ ಹಿರಿದು : ಕೇರಳಂ-ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್*
  • *ದೇವಣಗೇರಿ : ಬೀದಿ ನಾಟಕಗಳಿಂದ ಜಾಗೃತಿ ಹೆಚ್ಚಲಿದೆ : ಶಶಿ ಸುಬ್ರಮಣಿ*
  • *ಕೂಡ್ಲೂರು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ವಿಠಲ ಸಾಲಿಯಾನ*
  • *ಸೋಮವಾರಪೇಟೆ : 2 ಲೀಟರ್‌ಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಬಾಟಲಿ ನಿಷೇಧ*
  • *ಜೂ.21ರಂದು ಮಡಿಕೇರಿಯಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ*
  • *ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ*
  • *ಮಡಿಕೇರಿ ಲಯನ್ಸ್ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ : ಜೂ.27ರಂದು ಪದಗ್ರಹಣ*
  • *ಬಿಲ್ಲವ ಹಾಗೂ ಬಂಟರ ಸಮಾಜದ ಅವಹೇಳನ : ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು*
  • *ವಿಪತ್ತು ನಿರ್ವಹಣೆ ಸಹಾಯವಾಣಿ ಕೇಂದ್ರ ಆರಂಭ : ನೋಡಲ್ ಮತ್ತು ಸಹಾಯಕ ನೋಡಲ್ ಅಧಿಕಾರಿಗಳ ನೇಮಕ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜೂ.21ರಂದು ಮಡಿಕೇರಿಯಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜೂ.21ರಂದು ಮಡಿಕೇರಿಯಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ*

ಜೂನ್ 11, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.11 NEWS DESK  : ಆಯುಷ್ ಇಲಾಖೆಯ ವತಿಯಿಂದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂ.21 ರಂದು ನಗರದ ಕಾವೇರಿ ಹಾಲ್ ನಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಆಯುಷ್ ಇಲಾಖಾ ಅಧಿಕಾರಿ ಡಾ. ಶೈಲಜಾ ಅವರು ಯೋಗ ದಿನಾಚರಣೆಯಂದು ಬೆಳಗ್ಗೆ 6.45 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ನಂತರ 7 ಗಂಟೆಯಿಂದ 8 ಗಂಟೆಯವರೆಗೆ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶನಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಕೂಡ ಪಾಲ್ಗೊಳ್ಳಲಿದ್ದು, ಯೋಗ ದಿನಾಚರಣೆಯ ಯಶಸ್ಸಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಹಕರಿಸುವಂತೆ ಮನವಿ ಮಾಡಿದರು. ಯೋಗ ದಿನಾಚರಣೆÉಗೆ ಪೂರ್ವಭಾವಿಯಾಗಿ ಜೂ.19 ರಂದು ಸಂಜೆ 5 ಗಂಟೆಗೆ ಯೋಗ ಪ್ರೊಟೋಕಾಲ್‍ನ ಪ್ರಕಾರ ಯೋಗಾಸನಗಳ ಪೂರ್ವಾಭ್ಯಾಸ ನಗರದ ಸರಕಾರಿ ಬಸ್ ಡಿಪೋ ಬಳಿಯ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಜೂ.16 ರಂದು ಬೆಳಿಗ್ಗೆ 8 ಗಂಟೆಗೆ ನಗರದ ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ, ಹಳೆಯ ಖಾಸಗಿ ಬಸ್‍ನಿಲ್ದಾಣ, ಇಂದಿರಾಗಾಂಧಿ ವೃತ್ತವನ್ನು ಬಳಸಿ ಮತ್ತೆ ಗಾಂಧಿ ಮೈದಾನಕ್ಕೆ ಬರುವಂತೆ “ಯೋಗ ಜಾಥ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. *ಆನ್‍ಲೈನ್ ಯೋಗ* ಕೊಡಗು ಜಿಲ್ಲಾ ವೈದ್ಯಕೀಯ ವಿದ್ಯಾಸಂಸ್ಥೆಯ ಬೋಧಕ ಆಸ್ಪತ್ರೆಯ ಡಾ.ಪಿ.ಜಿ.ಅರುಣ್ ಅವರು ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಒಳಗೊಂಡಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿತ ಯೋಗ ದಿನಾಚರಣೆ ಪ್ರಯುಕ್ತ “ಆನ್‍ಲೈನ್ ಯೋಗ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಆಯುಷ್ ಮಂತ್ರಾಲಯದ ಅಧಿಕೃತ ಪೋರ್ಟಲ್ https;//moa.habit.yoga?ref=karnataka ದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು, ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸಾರ್ವಜನಿಕರು ನೋಂದಾಯಿಸಿಕೊಳ್ಳುವ ಮೂಲಕ ಜೂ.21ರವರೆಗೆ ಯೋಗ ತರಬೇತಿಯನ್ನು ಆನ್ ಲೈನ್‍ನಲ್ಲಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಆಯುಷ್ ಮಂತ್ರಾಲಯದ ಈ ಪ್ರಯತ್ನ ಜೂ.21ರ ಯೋಗ ದಿನಾಚರಣೆಯಂದು ಅಧಿಕೃತವಾಗಿ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳ್ಳಲಿದೆ ಎಂದರು. *ಸರ್ವರಿಗೂ “ವೈ-ಬ್ರೇಕ್”* ಯೋಗದ ಮಹತ್ವವನ್ನು ಸಮಾಜದ ಎಲ್ಲಾ ಸ್ತರಗಳ ಮಂದಿಗೂ ತಲುಪಿಸುವ ಉದ್ದೇಶÀದಿಂದ “ವೈ-ಬ್ರೇಕ್” (ಯೋಗ ಬ್ರೇಕ್) ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಡಿ ವಿವಿಧ ಸರಕಾರಿ ಕಚೇರಿಗಳು, ಸರಕಾರೇತರ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ 10 ರಿಂದ 15 ನಿಮಿಷಗಳ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದರ ಮೂಲಕ ಯೋಗದ ಮಹತ್ವವನ್ನು ತಿಳಿಸುವ ಪ್ರಯತ್ನ ನಡೆಯಲಿದ್ದು, ಇದಕ್ಕಾಗಿ 7 ಮಂದಿ ಯೋಗ ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಡಾ.ಅರುಣ್ ಹೇಳಿದರು. *”ನಿತ್ಯ ಯೋಗ”* ಪ್ರಸಕ್ತ ಸಾಲಿನಲ್ಲಿ ಆನ್ ಲೈನ್‍ನ ಗೂಗಲ್ ಮೀಟ್, ಝೂಮ್ ಮೀಟ್ ವೇದಿಕೆಗಳಲ್ಲಿ ಯೋಗ ಸ0ಸ್ಥೆಯ ತರಬೇತುದಾರರು, ಆಯುಷ್ಮಾನ್ ಆರೋಗ್ಯ ಮಂದಿರದ ಯೋಗ ತರಬೇತುದಾರರಿಂದ ಬೆಳಗ್ಗೆ ಮತ್ತು ಸಂಜೆ 45 ನಿಮಿಷಗಳ ಅವಧಿಯ ಯೋಗ ತರಬೇತಿ ಮತ್ತು 15 ನಿಮಿಷಗಳ ಆರೋಗ್ಯ ಸಂಬಂಧಿ ಉಪನ್ಯಾಸವನ್ನು ಆಯೋಜಿಸಲಾಗಿದೆ. ಇನ್ನಷ್ಟೆ ಈ ಕಾರ್ಯಕ್ರಮದ ಆನ್‍ಲೈನ್ ಲಿಂಕ್‍ನ್ನು ಒದಗಿಸಬೇಕಾಗಿದೆ. ಈ ಲಿಂಕ್‍ನಲ್ಲಿ ಆಸಕ್ತರು ಸೇರ್ಪಡೆಗೊಂಡು ಬೆಳಗ್ಗೆ ಮತ್ತು ಸಂಜೆ ತಲಾ ಮೂರು ಅವಧಿಗಳಲ್ಲಿ ತಮಗೆ ಸೂಕ್ತವಾದ ಸಮಯವನ್ನು ಆಯ್ದುಕೊಂಡು 365 ದಿನಗಳ ಕಾಲ ಯೋಗಾಭ್ಯಾಸವನ್ನು ಮಾಡಬಹುದೆಂದು ತಿಳಿಸಿದರು. ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸೊಯೇಷನ್(ನೀಮ) ಸಂಸ್ಥೆಯ ಕೊಡಗು ಘಟಕದ ಅಧ್ಯಕ್ಷರಾದ ಡಾ.ರಾಜಾರಾಮ್ ಅವರು ಮಾತನಾಡಿ, ಯೋಗ ದಿನಾಚರಣೆಗೆ ನೀಮಾ ಸಂಘ0ಟನೆಯು ಕೈಜೋಡಿಕೊಂಡು ಬರುತ್ತಿದೆ. ಈ ಬಾರಿ “ಸೆಲ್ಫಿ ವಿದ್ ಯೋಗ ಕೇಂದ್ರ” ಎನ್ನುವ ಸ್ಪರ್ಧೆಯನ್ನು ಸಾರ್ವಜನಿಕರಿಗೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಯೋಗ ಕೇಂದ್ರಗಳಿಗೆ ತೆರಳಿ, ಅಲ್ಲಿ ಯೋಗಾಭ್ಯಾಸ ಮಾಡುವ ಅತೀ ಹೆಚ್ಚು ಸೆಲ್ಫಿಗಳನ್ನು ತೆಗೆದು ಕಳುಹಿಸುವವರಿಗೆ ಯೋಗ ದಿನಾಚರಣೆಯಂದು ವಿಶೇಷ ಬಹುಮಾನವನ್ನು ನೀಮ ವತಿಯಿಂದ ನೀಡಲಾಗುತ್ತದೆ. ಸೆಲ್ಫಿಗಳನ್ನು ಮೊ.9886266120ಕ್ಕೆ ಕಳುಹಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಆಯುಷ್ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಕೆ.ಟಿ.ಕಾವೇರಪ್ಪ, ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕ ಕೆ.ಕೆ.ಮಹೇಶ್ ಕುಮಾರ್ ಹಾಗೂ ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಸುಧಾಕರ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಮಲೇರಿಯ ವಿರೋಧಿ ಮಾಸಾಚರಣೆ*

ಜೂನ್ 11, 2026

*ಕೂಡಿಗೆ ಸೈನಿಕ ಶಾಲೆಯ ರಾಷ್ಟ್ರೀಯ ಫುಟ್ಬಾಲ್ ಸಮಾರೋಪ : ರಾಷ್ಟ್ರೀಯ ಚಿಂತನೆ ಮೂಡಿಸುವಲ್ಲಿ ಸೈನಿಕ ಶಾಲೆಗಳ ಪಾತ್ರ ಹಿರಿದು : ಕೇರಳಂ-ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್*

ಜೂನ್ 11, 2026

*ದೇವಣಗೇರಿ : ಬೀದಿ ನಾಟಕಗಳಿಂದ ಜಾಗೃತಿ ಹೆಚ್ಚಲಿದೆ : ಶಶಿ ಸುಬ್ರಮಣಿ*

ಜೂನ್ 11, 2026

*ಕೂಡಿಗೆ ಸೈನಿಕ ಶಾಲೆಯ ರಾಷ್ಟ್ರೀಯ ಫುಟ್ಬಾಲ್ ಸಮಾರೋಪ : ರಾಷ್ಟ್ರೀಯ ಚಿಂತನೆ ಮೂಡಿಸುವಲ್ಲಿ ಸೈನಿಕ ಶಾಲೆಗಳ ಪಾತ್ರ ಹಿರಿದು : ಕೇರಳಂ-ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್*

ಜೂನ್ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜೂ.11 NEWS DESK : ದೇಶಭಕ್ತಿ, ಸಮಗ್ರತೆಯ ಪರಿಕಲ್ಪನೆ, ನಾಯಕತ್ವದ ಗುಣಗಳೊಂದಿಗೆ, ರಾಷ್ಟ್ರೀಯ ಸೇವೆಯ ಮೌಲ್ಯಗಳನ್ನು ಯುವ ಸಮೂಹದಲ್ಲಿ…

*ದೇವಣಗೇರಿ : ಬೀದಿ ನಾಟಕಗಳಿಂದ ಜಾಗೃತಿ ಹೆಚ್ಚಲಿದೆ : ಶಶಿ ಸುಬ್ರಮಣಿ*

ಜೂನ್ 11, 2026

*ಕೂಡ್ಲೂರು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ವಿಠಲ ಸಾಲಿಯಾನ*

ಜೂನ್ 11, 2026

*ಸೋಮವಾರಪೇಟೆ : 2 ಲೀಟರ್‌ಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಬಾಟಲಿ ನಿಷೇಧ*

ಜೂನ್ 11, 2026

*ಜೂ.21ರಂದು ಮಡಿಕೇರಿಯಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ*

ಜೂನ್ 11, 2026

*ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ*

ಜೂನ್ 11, 2026

*ಮಡಿಕೇರಿ ಲಯನ್ಸ್ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ : ಜೂ.27ರಂದು ಪದಗ್ರಹಣ*

ಜೂನ್ 11, 2026

*ಬಿಲ್ಲವ ಹಾಗೂ ಬಂಟರ ಸಮಾಜದ ಅವಹೇಳನ : ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು*

ಜೂನ್ 11, 2026

*ವಿಪತ್ತು ನಿರ್ವಹಣೆ ಸಹಾಯವಾಣಿ ಕೇಂದ್ರ ಆರಂಭ : ನೋಡಲ್ ಮತ್ತು ಸಹಾಯಕ ನೋಡಲ್ ಅಧಿಕಾರಿಗಳ ನೇಮಕ*

ಜೂನ್ 10, 2026

*ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ : ಓದಿನ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳಿ : ಪ್ರೊ.ಅಶೋಕ ಸಂಗಪ್ಪ ಆಲೂರು*

ಜೂನ್ 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.