
ಕುಶಾಲನಗರ ಜೂ.15 NEWS DESK : ಕುಶಾಲನಗರದ ಹಲವು ಶಿಕ್ಷಣ ಸಂಸ್ಥೆಗಳ ಪೈಕಿ ಫಾತಿಮಾ ಕಾನ್ವೆಂಟ್ ಶಾಲೆಗೆ ವಿಶಿಷ್ಟ ಸ್ಥಾನವಿದೆ. ಅಂತಹ ಶಿಕ್ಷಣ ಸಂಸ್ಥೆಯು 1976 ರಲ್ಲಿ ಆರಂಭವಾಗಿದ್ದು. ಈಗ ಅದರ ಸುವರ್ಣ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಶಾಲೆಯ ಸಭಾಂಗಣದಲ್ಲಿ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಾರ್ವಜನಿಕರನ್ನು ಸೇರಿಸಿಕೊಂಡು ಸುವರ್ಣ ವರ್ಷವನ್ನು ಹಬ್ಬವನ್ನಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು. ಅದರಂತೆ ಜೂನ್ ತಿಂಗಳಲ್ಲಿ ಶಾಲೆಯಲ್ಲಿ ಕಲೆಯುತ್ತಿರುವ ವಿದ್ಯಾರ್ಥಿಗಳಿಗೆ, ಪಾಲಕರಿಗೆ, ಶಾಲೆಯ ಸಿಬ್ಬಂದಿಗಳಿಗೆ ಜಾಗೃತಿ ಸಭೆ, ಜುಲೈ ತಿಂಗಳಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲು ಚಿಂತಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಅಂತರ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಮ್ಯಾರಥಾನ್, ಯುವ ಜನಾಂಗದಲ್ಲಿ ಆಚಾರ ವಿಚಾರಗಳನ್ನು ತಿಳಿಸುವ ಪ್ರಯತ್ನವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸಾಂಪ್ರದಾಯಿಕ ದಿನವನ್ನು ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವುದು. ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವ ಮತ್ತು ಹಿರಿಯ ವಿಧ್ಯಾರ್ಥಿಗಳ ಸಮ್ಮಿಲನ ಸಂಭ್ರಮ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ ತಿಂಗಳಲ್ಲಿ ಸುವರ್ಣ ಸಂಭ್ರಮದ ಬೃಹತ್ ಸಮಾರೋಪ ಸಮಾರಂಭ ನಡೆಸಿ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗೈಯುತ್ತಿರುವ ಶಾಲೆಯ ಹಿರಿಯ ವಿಧ್ಯಾರ್ಥಿಗಳನ್ನು ಗೌರವಿಸುವುದು, ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯದ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು
ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಆಗ್ನೆಸ್, ಶಾಲೆಯ ಪ್ರತಿನಿಧಿ ಸಿಸ್ಟರ್ ಪ್ಲೋರೆಟ್, ಆಡಳಿತಾಧಿಕಾರಿ ಸಿಸ್ಟರ್ ಅರ್ಪಿತಾ, ಸಹಾಯಕ ಪ್ರತಿನಿಧಿ ಸಿಸ್ಟರ್ ಸೋಫಿಯಾ ಮೇರಿ, ಪೋಷಕರ ಪ್ರತಿನಿಧಿ ಕೆ.ಎಸ್.ನಾಗೇಶ್ ಮತ್ತು ಆಶ್ರಪ್, ಹಿರಿಯ ವಿಧ್ಯಾರ್ಥಿಗಳ ಪ್ರತಿನಿಧಿ ಮಂಜುನಾಥ್ ಗುಂಡೂರಾವ್, ಅಪ್ಪಯ್ಯ, ನಾಗರಾಜ್, ಶಾಲೆಯ ಸಲಹಾ ಸಮಿತಿಯ ಡಾ.ರಾಮ ಭಟ್ ಮತ್ತು ಪಿಎಸ್ಐ ಗೀತಾ, ಶಿಕ್ಷಕಿಯರಾದ ಗಾಯತ್ರಿ, ಉಷಾ, ಸ್ಮಿತಾ, ದೀಪ್ತಿ ಮತ್ತಿತರರು ಹಾಜರಿದ್ದರು. ಗಂಗಮ್ಮ ನಿರೂಪಿಸಿದರು. ಭಾರತಿ ದೇವಯ್ಯ ಸ್ವಾಗತಿಸಿದರು, ಸುನೀತಾ ವಂದಿಸಿದರು.









