
ನಾಪೋಕ್ಲು ಜೂ.18 NEWS DESK : ನಾಪೋಕ್ಲುವಿನ ಮಾರುಕಟ್ಟೆಯ ಅಂಗಡಿಯವೊಂದಕ್ಕೆ ನುಗ್ಗಿದ ಕಾಡು ಕುರಿಯನ್ನು ಅರಣ್ಯ ಇಲಾಖೆಯಿಂದ ರಕ್ಷಣೆ ಮಾಡಿದ್ದಾರೆ. ಕಾಡು ಕುರಿ ಒಂದು ಬೀದಿ ನಾಯಿಗಳಿಂದ ತಪ್ಪಿಸಿಕೊಂಡು ಮಾರುಕಟ್ಟೆಯ ಅಂಗಡಿಗೆ ನುಗ್ಗಿದೆ ಈ ಸಂದರ್ಭ ಸುಲೇಮಾನ್ ಎಂಬವರು ಕಾಡು ಕುರಿಯನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ನಂತರ ಠಾಣಾಧಿಕಾರಿ ರಾಘವೇಂದ್ರ ಅವರಿಂದ ಸುಮಾರು ಎರಡು ವರ್ಷ ಪ್ರಾಯದ ಹೆಣ್ಣು ಕಾಡು ಕುರಿ ಯನ್ನು ಪಡೆದುಕೊಂಡ ಉಪ ಅರಣ್ಯ ಅಧಿಕಾರಿ ಕಾಳೇಗೌಡ, ಗಸ್ತು ಅರಣ್ಯಪಾಲಕ ಶರತ್ ಕೆ.ಎ., ಅರಣ್ಯ ವೀಕ್ಷಕ ಮುತ್ತಪ್ಪ ಮತ್ತು ಹರ್ಷಿತ್ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡುಕುರಿ ಯನ್ನು ಬಿಡಲಾಯಿತು.
ವರದಿ : ದುಗ್ಗಳ ಸದಾನಂದ.









