
ಸಿದ್ದಾಪುರ ಜೂ.22 NEWS DESK : ಸಿದ್ದಾಪುರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಯುನೈಟೆಡ್ ಕೊಡಗು ಸಂಘದ ವತಿಯಿಂದ ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಝಿಯಾದ್, ಸಂಘದ ವತಿಯಿಂದ ಸುಮಾರು 16 ಮಂದಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಸಮವಸ್ತ್ರ ವಿತರಿಸಲಾಗಿದ್ದು, ಮುಂದೆ ಮತ್ತಷ್ಟು ಸಾಮಾಜಿಕ ಕಾರ್ಯಗಳಲ್ಲಿ ಸಂಘಟನೆಯನ್ನು ತೊಡಗಿಸಿಕೊಳ್ಳಲಿರುವುದಾಗಿ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಖಲೀಲ್, ನಿರ್ದೇಶಕರುಗಳಾದ ರಹೀಮ್, ಮೊಹಮ್ಮದ್, ವಾಸಿಂ, ಫಾಝಿಲ್, ಸಿಯಾದ್, ಉಮ್ಮರ್, ಪ್ರಭು, ಮುಸ್ತಫಾ ಮುಖ್ಯೋಪಾಧ್ಯಾಯರಾದ ಬಾಬು ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.









