
ಮಡಿಕೇರಿ ಜೂ.27 NEWS DESK : ಮರದಿಂದ ಬಿದ್ದು ಗಾಯಗೊಂಡಿದ್ದ ಕಾಳ ಅವರ ಮನೆಗೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕೆಲ ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಸಂದರ್ಭ ಮರದಿಂದ ಬಿದ್ದು ಸೊಂಟ ಭಾಗಕ್ಕೆ ತೀವ್ರವಾದ ಗಾಯಗಳೊಂದಿಗೆ ಕಾಳ ರವರು ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆಗೆ ಪೂರ್ಣ ಸಹಕಾರ ನೀಡಿದ್ದ ಶಾಸಕರು, ಕಾಳ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಶೀಘ್ರವಾಗಿ ಗುಣಮುಖರಾಗಿ ಬರುವಂತೆ ಹಾರೈಸಿದರು. ಯಾವುದೇ ರೀತಿಯಾದ ತೊಂದರೆ ಆದಲ್ಲಿ ತನ್ನನ್ನು ಸಂಪರ್ಕಿಸುವಂತೆ ಈ ಸಂದರ್ಭದ ಶಾಸಕರು ತಿಳಿಸಿದರು.









