
ಮಡಿಕೇರಿ ಜೂ.27 NEWS DESK : ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಗ್ರಾಮಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ನೀಡಿದರು. ಕೆ.ಬಾಡಗ ಗ್ರಾಮದಲ್ಲಿ ಶಾಸಕರ ವಿಶೇಷ 47 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ತಾಯಿ ಭೂಮಿ ಪೈಸಾರಿ ಹಾಡಿ, ನಾಣಚ್ಚಿ ಗದ್ದೆ ಹಾಡಿ ಹಾಗೂ ಕೋಡಂಗೆ ಭಾಗದ ವಿವಿಧ ಅಭಿವೃದ್ಧಿ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, ಸರಕಾರ ಹಾಗೂ ತಾನು ಜನಸಾಮಾನ್ಯರ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ರಸ್ತೆಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದು, ಕಳೆದ ಹಲವಾರು ದಶಕಗಳಿಂದ ಅಭಿವೃದ್ಧಿ ಕಾಣದೆ ಜನಸಾಮಾನ್ಯರ ಬಳಕೆಗೆ ಯೋಗ್ಯವಲ್ಲದ ರಸ್ತೆಗಳನ್ನು ಉತ್ತಮಗೊಳಿಸುವತ್ತ ಗಮನಹರಿಸಿರುವುದಾಗಿ ತಿಳಿಸಿದರು. ಸಾರ್ವಜನಿಕರು ಸಲ್ಲಿಸಿದ ಬೇಡಿಕೆಗೆ ಅನುಸಾರ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು, ಜನರ ಮೂಲಭೂತ ಸೌಲಭ್ಯ ಪೂರೈಕೆಗೆ ತಾವು ಸದಾ ಬದ್ಧರಾಗಿರುವುದಕ್ಕೆ ತಿಳಿಸಿದರು. ಗ್ರಾಮೀಣ ಜನತೆಯು ಆರ್ಥಿಕವಾಗಿ ಸದೃಢವಾಗಲು ಕೃಷಿ ಚಟುವಟಿಕೆಗಳೊಂದಿಗೆ ಉತ್ತಮ ರಸ್ತೆಯ ಸೌಲಭ್ಯದ ಅವಶ್ಯಕತೆಯನ್ನು ಮನಗಂಡಿರುವ ತಾವು, ರಸ್ತೆ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಹಲವು ಕಾರ್ಯಕ್ರಮಗಳನ್ನು ಈಗಾಗಲೇ ತಾವು ಹಮ್ಮಿಕೊಂಡಿರುವುದಾಗಿ ಶಾಸಕರು ತಿಳಿಸಿದರು. ಇದೆ ಸಂದರ್ಭ ಚಂದನಕೇರೆ ಹಾಡಿಯವರ ಕೋರಿಕೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಅವರ ಮನವಿಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ವಲಯ ಅಧ್ಯಕ್ಷರು ಚಿಮ್ಮಣ್ಣಮಾಡ ರವಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬಾನಂಡ ಪ್ರತ್ಯು, ಪಕ್ಷದ ಮುಖಂಡರು ಕಟ್ಟಿ ಕಾರ್ಯಪ್ಪ, ಪಾಲ್ವಿನ್ ಪೂಣಚ್ಚ, ವಿಶು, ರಾಮಕೃಷ್ಣ,ಮಚ್ಚಾಮಾಡ ಮನು, ಕೇಚಮಾಡ ಸಿದ್ದು ನಾಚಪ್ಪ, ಕುಂಡಚ್ಚಿರ ಮಂಜು ದೇವಯ್ಯ ಅಯೂಬ್, ಮುಕಟೀರ ದೀಪು, ಮಧು, ನಿಲ್ಲು, ಬೋಪಣ್ಣ, ಸ್ಥಳೀಯ ಮುಖಂಡರು ಸೋಮಯ್ಯ, ರಾಮಕೃಷ್ಣ, ರಮೇಶ್ ಹಾಗೂ ಪ್ರಮುಖರು ಹಾಜರಿದ್ದರು.









