
ಲೋವರ್ ಸಿಯಾಂಗ್ NEWS DESK ಜೂ.29 : ಈಶಾನ್ಯ ಭಾರತದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ವಿವಿಧೆಡೆ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ತೀವ್ರತೆಯನ್ನು ಪಡೆದುಕೊಂಡಿರುವುದರಿಂದ ಗುಡ್ಡಗಳು ಕುಸಿಯುತ್ತಿವೆ. ಅರುಣಾಚಲ ಪ್ರದೇಶದ ಲೋವರ್ ಸಿಯಾಂಗ್ ಜಿಲ್ಲೆಯ ಸಿಜೆ ಪ್ರದೇಶದಲ್ಲಿ ಭೀಕರ ಗುಡ್ಡ ಕುಸಿತವಾಗಿದೆ. ಬೃಹತ್ ಗುಡ್ಡ ಕುಸಿಯುವ ಸಂದರ್ಭ ಕೆಸರುಮಯ ರಸ್ತೆಯಲ್ಲಿದ್ದ ಬೈಕ್ ಸವಾರನನ್ನು ಬೈಕ್ ಸಹಿತ ಮಣ್ಣು, ಕಲ್ಲಿನ ರಾಶಿ ಕೆಳಭಾಗಕ್ಕೆ ಎಳೆದುಕೊಂಡು ಹೋಗಿದೆ. ಆದರೆ ಅದೃಷ್ಟವಶಾತ್ ಬೈಕ್ ಸವಾರನ ಮೇಲೆ ಮಣ್ಣಿನ ರಾಶಿ ಬೀಳದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೀಕರ ದೃಶ್ಯಕ್ಕೆ ಸಾಕ್ಷಿಯಾದ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.









