
ಮಡಿಕೇರಿ ಜು.1 NEWS DESK : ಸತ್ಯ, ಧರ್ಮ ನ್ಯಾಯ ಎಂಬ ಜೀವನ ಮೌಲ್ಯಗಳನ್ನು ಎಂದಿಗೂ ಮರೆಯಬಾರದು, ಯಾವುದೇ ಸಂದರ್ಭದಲ್ಲೂ ಪಕ್ಷಪಾತ ಮಾಡಬಾರದು ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ.ಕುಮಾರ್ ಕರೆ ನೀಡಿದರು. ಮಡಿಕೇರಿಯ ಕೊಡಗು ವಿದ್ಯಾಲಯದ ಬಿ.ಕೆ.ಸುಬ್ಬಯ್ಯ ಸಭಾಂಗಣದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ಪದಗ್ರಹಣ ಸಮಾರಂಭ ಜರುಗಿತು. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ. ಕುಮಾರ್ ನೂತನ ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಪದಗ್ರಹಣ ಬೋಧಿಸಿ ಅಧಿಕಾರದ ಬ್ಯಾಡ್ಜ್ಗಳನ್ನು ಪ್ರದಾನ ಮಾಡಿ ಮಾತನಾಡಿದರು. , ಸ್ವಾಮಿ ವಿವೇಕಾನಂದರ ತತ್ವಗಳನ್ನು ಉಲ್ಲೇಖಿಸಿದ ಅವರು, ಕೊಡಗಿನ ಇತಿಹಾಸ, ಪ್ರಮುಖ ಸ್ಥಳಗಳ ಪರಿಚಯ ಹಾಗೂ ದೈಹಿಕ ವ್ಯಾಯಾಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಶಾಲೆಯ ಬೆಳವಣಿಗೆಗೆ ಶ್ರಮಿಸಿದ ಶಿಕ್ಷಕರನ್ನು ಅಭಿನಂದಿಸಿ, ವಿದ್ಯಾರ್ಥಿ ನಾಯಕರು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದೂ ಕುಮಾರ್ ಕರೆ ನೀಡಿದರು. ಪ್ರೌಢಶಾಲಾ ವಿಭಾಗದ ಶಾಲಾ ನಾಯಕ ನಿರಂಜನ್ ಎನ್., ಶಾಲಾ ನಾಯಕಿ ಲಕ್ಷ್ಯ ಪೊನ್ನಕ್ಕ, ಸಹ ಶಾಲಾ ನಾಯಕ ಆದಿತ್ಯ ಕೆ.ಎಂ., ಶಾಲಾ ಸಾಂಸ್ಕೃತಿಕ ನಾಯಕಿ ಶ್ರೀಯ ಕಿರಣ್, ಸಹ ಸಾಂಸ್ಕೃತಿಕ ನಾಯಕಿ ತೃಪ್ತಿ ಟಿ.ಎನ್., ಕ್ರೀಡಾ ನಾಯಕಿ ತೇಜಲ್, ಸಹ ಕ್ರೀಡಾ ನಾಯಕ ದೇವೃತ್ ಟಿ.ಬಿ., ಬಾಪು ಗ್ರೂಪ್ ಲೀಡರ್ಗಳಾದ ಭುವಿನ್ ಹಾಗೂ ಮಹತ್ವ ಅಪ್ಪಯ್ಯ ಕೊಕ್ಕಲೆರ, ಝಾನ್ಸಿ ಗ್ರೂಪ್ ಲೀಡರ್ಗಳಾದ ಶೌರ್ಯ ಪೂಣಚ್ಚ ಹಾಗೂ ಸುಮೇಧಾ ಎಂ.ಎನ್., ಕಿತ್ತೂರು ಗ್ರೂಪ್ ಲೀಡರ್ಗಳಾದ ಆರ್ಯನ್ ಸಿಂಗ್, ಆರಾಧ್ಯ ಕೆ.ಎಲ್., ಟಾಗೋರ್ ಗ್ರೂಪ್ ಲೀಡರ್ ಗಳಾದ ಥನಿಸ್ ಎನ್.ಜಿ., ಸುದೀಕ್ಷಾ ಕೆ. ಅವರಿಗೆ ಅಧಿಕಾರದ ಚಿಹ್ನೆಗಳನ್ನು ಪ್ರದಾನ ಮಾಡಲಾಯಿತು. ಪ್ರಾಥಮಿಕ ವಿಭಾಗದ ಶಾಲಾ ನಾಯಕ ಮನೀಶ್ ರೈ, ಶಾಲಾ ನಾಯಕಿ ಅಮೃತ ನೀಲಮ್ಮ, ಸಾಂಸ್ಕೃತಿಕ ನಾಯಕಿ ಮೋನಿಷಾ, ಕ್ರೀಡಾ ನಾಯಕ ಕೆವಿನ್ ಕಾರ್ಯಪ್ಪ ಸಿ.ಎಸ್., ಬಾಪು ಗ್ರೂಪ್ ಲೀಡರ್ ಆನ್ಯ ನಂಜಪ್ಪ, ಝಾನ್ಸಿ ಗ್ರೂಪ್ ಲೀಡರ್ ಕೃಶ್ ಅಯ್ಯಪ್ಪ ಕೆ.ಕೆ., ಕಿತ್ತೂರು ಗ್ರೂಪ್ ಲೀಡರ್ ಸಾನ್ವಿಕ ಎಂ.ಜಿ ಟಾಗೋರ್ ಗ್ರೂಪ್ ಲೀಡರ್ ಮಾನ್ವಿಕ್ ಬಿ ಎಸ್ ಅವರಿಗೂ ಅಧಿಕಾರದ ಬ್ಯಾಡ್ಜ್ಗಳನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭ ರಾಷ್ಟ್ರೀಯ ಪುಸ್ತಕ ವಾಚನ ದಿನದ ಪ್ರತಿಜ್ಞೆಯನ್ನು ಶಾಲಾ ನಾಯಕಿ ಲಕ್ಷ್ಯ ಪೊನ್ನಕ್ಕ ಬೋಧಿಸಿದರು. ಸಮಾರಂಭದಲ್ಲಿ ಆಡಳಿತ ಸಮಿತಿಯ ಸದಸ್ಯ ಗುರುದತ್ ಸಿ.ಎಸ್., ಮಾಜಿ ಆಡಳಿತ ಸಮಿತಿಯ ಸದಸ್ಯ ಪ್ರೇಮನಾಥ್, ಪ್ರಾಂಶುಪಾಲೆ ಸುಮಿತ್ರ ಕೆ.ಎಸ್., ಆಡಳಿತ ಮುಖ್ಯಸ್ಥ ರವಿ ಪಿ., ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆದಿತ್ಯ ಅಯ್ಯಪ್ಪ ನಿರೂಪಿಸಿ, ನಮೃತ ಸ್ವಾಗತಿಸಿ, ಖುಷಿ ಅತಿಥಿ ಪರಿಚಯಿಸಿ, ಗುರುಪ್ರೀತ್ ವಂದಿಸಿದರು.









