ಮಡಿಕೇರಿ NEWS DESK ಜು.6 : ವನ್ಯಜೀವಿ ದಾಳಿಯನ್ನು ತಡೆಯುವಲ್ಲಿ ಮತ್ತು ಕೊಡಗಿನ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಬೃಹತ್ ವಾಹನ ಜಾಥಾ ಮತ್ತು ಪ್ರತಿಭಟನಾ ಸಭೆ ನಡೆಸಿತು.
ನಗರದ ಗಾಂಧಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು ವನ್ಯಜೀವಿ ದಾಳಿಯನ್ನು ತಡೆಯುವಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಸಂಪÀÆರ್ಣವಾಗಿದೆ ವಿಫಲವಾಗಿದೆ. ಆದರೆ ಈ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸರಕಾರದಿಂದ ಅಗತ್ಯ ನೆರವು ದೊರಕಿಲ್ಲವೆಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು, ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವÀ ಭೂಪೇಂದ್ರ ಯಾದವ್ ಅವರು, ಕಾಡಾನೆ ಹಾವಳಿ ತಡೆಗೆ 350 ಕೋಟಿ ರೂ.ಗಳ 5 ವರ್ಷಗಳ ಅವಧಿಯ ಯೋಜನೆಯನ್ನು ಒದಗಿಸಲು ಮುಂದಾಗಿದ್ದಾರೆ ಎಂದರು.
ರಾಜ್ಯ ಕಾಂಗ್ರೆಸ್ ಸರಕಾರ ಜಿಲ್ಲೆಯ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಇಲ್ಲಿಯವರೆಗೆ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ, ಅರಣ್ಯ ಸಚಿವರೇ ಇಲ್ಲದೆ ಅರಣ್ಯ ಇಲಾಖೆ ಸಮರ್ಪಕವಾಗಿ ಕೆಲಸ ನಿರ್ವಹಿಸದಂತಾಗಿದೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ, ವನ್ಯಜೀವಿ ಮತ್ತು ಕಾಡಾನೆ ಹಾವಳಿ ತಡೆಗೆ ರಾಜ್ಯದ ಕಾಂಗ್ರೆಸ್ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಮಲೆನಾಡ ಭಾಗದ ಎಲ್ಲಾ ಜಿಲ್ಲೆಗಳು ಒಗ್ಗೂಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಬಿಜೆಪಿ ಪಕ್ಷ ತನ್ನ ಅಧಿಕಾರದ ಕೊನೆಯ ಅವಧಿಯ 2023-24ನೇ ಸಾಲಿನಲ್ಲಿ ಕಾಡಾನೆ ಮಾನವ ಸಂಘರ್ಷ ತಡೆಗೆ 120 ಕೋಟಿ ರೂ.ಗಳನ್ನು ಒದಗಿಸಿದೆ. ಅದರಲ್ಲಿ ಚಿಕ್ಕಾಸನ್ನು ಈ ಕಾಂಗ್ರೆಸ್ ಸರ್ಕಾರ ಸದ್ಬಳಕೆ ಮಾಡಿಲ್ಲ. ನಮ್ಮ ಅವಧಿಯಲ್ಲಿ ಮಾಡಿದ್ದ ಕಂದಕ, ಸೋಲಾರ್ ಬೇಲಿಗಳ ಕನಿಷ್ಟ ನಿರ್ವಹಣೆೆಯೂ ನಡೆದಿಲ್ಲ. ಹೀಗಿದ್ದೂ ಕಳೆದ ಬಜೆಟ್‌ನಲ್ಲಿ ಮುಂದಿನ 5ವರ್ಷಕ್ಕೆ ಕಾಡಾನೆ-ಮಾನವ ಸಂಘರ್ಷ ಪರಿಹಾರಕ್ಕೆ 1500ಕೋಟಿ ರೂ. ಸೂಚಿಸಲಾಗಿದ್ದರು, ಇದಕ್ಕೆ ಅನುಮೋದನೆಯನ್ನು ಇಲ್ಲಿಯವರೆಗೂ ನೀಡಿಲ್ಲವೆಂದು ಗೇಲಿ ಮಾಡಿದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಜಿಲೆಯ ಸಿ ಮತ್ತು ಡಿ ಜಮೀನನ್ನು ಅರಣ್ಯಕ್ಕೆÀ ಹಸ್ತಾಂತರಿಸಬೇಕೆನ್ನುವ ಆದೇಶವನ್ನು ಪರಿಸರವಾದಿಗಳ ಪಿತೂರಿಯಿಂದ ಹೊರಡಿಸಲಾಗಿದೆ. ಇಂದು ಸರಕಾರದ ಆದೇಶದಿಂದ ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ, ಶಾಂತಳ್ಳಿ, ಕೂತಿ, ಸೂರ್ಲಬ್ಬಿ ವಿಭಾಗದ 5 ಸಾವಿರಕ್ಕು ಹೆಚ್ಚಿನ ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಮೂರು ನಾಲ್ಕು ತಲೆಮಾರಿನಿಂದ ಸಿ ಮತ್ತು ಡಿ ಜಮೀನಿನಲ್ಲಿ ನೆಲೆಸಿರುವವರಿಗೆ ಅವರ ಜಾಗಕ್ಕೆ ಹಕ್ಕುಪತ್ರವನ್ನು ಒದಗಿಸುವ ನಿಟ್ಟಿನ ಕಾರ್ಯವನ್ನು ನಮ್ಮ ಅವಧಿಯಲ್ಲಿ ಮಾಡಲಾಗಿದೆ. ಆದರೆ, ಕಾಂಗ್ರೆಸ್ ಸರಕಾರ ಇದನ್ನು ತೆಗೆಯುವ ಪ್ರಯತ್ನಕ್ಕೆ ಮುಂದಾಗಿರುವುದಲ್ಲದೆ, ಹಾರಂಗಿ ಜಲಾಶಯದಿಂದ ಮುಳುಗಡೆಯಾದ ಜಾಗಕ್ಕೆ ಪರ್ಯಾಯವಾಗಿ ಅತ್ತೂರು ಗ್ರಾಮದಲ್ಲಿ ಸಂತ್ರಸ್ತರಿಗೆ ನೀಡಿದ ಜಾಗವನ್ನು ಕಂದಾಯ ಗ್ರಾಮವಾಗಿ ಘೋಷಿಸುವ ಬಿಜೆಪಿ ಸರಕಾರದ ಪ್ರಯತ್ನಗಳನ್ನು ತಿರಸ್ಕರಿಸಿರುವುದಾಗಿ ಟೀಕಿಸಿದರು.

ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವನ್ಯ ಜೀವಿ ಹಾವಳಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡಯುತ್ತಿರುವ ಜೀವಹಾನಿ, ಕೃಷಿ ಹಾನಿಗೆ ಸಂಬAಧಿಸಿದAತೆ ಬಿಜೆಪಿ ವಿವಿಧ ಹೋರಾಟಗಳನ್ನು ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ರೂಪಿಸಿದೆ. ಹೀಗಿದ್ದೂ ಸರ್ಕಾರವಾಗಲಿ, ಅರಣ್ಯ ಇಲಾಖೆಯಾಗಲಿ ಇದಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ. ಬದಲಾಗಿ ಕಾಡಾನೆ ದಾಳಿಯಿಂದ ಮೃತ ಪಟ್ಟವರಿಗೆ ಪರಿಹಾರ ನೀಡುವ ಕಾರ್ಯವಷ್ಟೆ ನಡೆಯುತ್ತಿದೆ. ಪರಿಹಾರದ ಮೂಲಕ ಯಾವುದೇ ಜೀವಕ್ಕೆ ಬೆಲೆ ಕಟ್ಟಲಾಗದೆಂದು ತಿಳಿಸಿದರು.
ತಲೆತಲಾಂತರಗಳಿಮದ ಸಿ ಮತ್ತು ಡಿ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಕುಟುಂಬಗಳನ್ನು, ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಇದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದಲ್ಲದೆ, ಸಿ ಮತ್ತು ಡಿ ಜಮೀನನ್ನು ಅರಣ್ಯಕ್ಕೆÀ ಸೇರಿದ್ದೆನ್ನುವ ಸುತ್ತೋಲೆ, ಆದೇಶಗಳನ್ನು ಹಿಂದಕ್ಕೆ ಪಡೆಯಬೇಕು. ಈ ಹಿಂದೆಯೆ ಬಿಜೆಪಿಯು ಜಿಲ್ಲೆಯ ವನ್ಯ ಜೀವಿ ಹಾವಳಿಗೆ ಸಂಬAಧಿಸಿದAತೆ ಅಧಿಕಾರಿಗಳು, ಸ್ಥಳೀಯ ಪ್ರಮುಖರು. ಜನಪ್ರತಿನಿಧಿಗಳನ್ನು ಒಳಗೊಂಡAತೆ ಸಭೆ ಕಡೆಯುವಂತೆ ಆಗ್ರಹಿಸಿದ್ದೇವೆ. ಹೀಗಿದ್ದರು ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಪ್ರತಿಷ್ಠೆಗಾಗಿ ಸಭೆಯನ್ನು ಬೆಂಗಳೂರಿನಲ್ಲಿ ಕರೆಯುತ್ತಿರುವ ಬಗ್ಗೆ ನಮ್ಮ ಧಿಕ್ಕಾರವಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ತದರ್ಶಿಗಳಾದ ವಿ.ಕೆ.ಲೋಕೇಶ್, ಚಲನ್ ಕುಮಾರ್, ಮಾಜಿ ಅಧ್ಯಕ್ಷರುಗಳಾದ ರಾಬಿನ್ ದೇವಯ್ಯ, ಬಿ.ಬಿ.ಭಾರತೀಶ್, ರಾಜ್ಯ ಬಿಜೆಪಿ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಬಿ.ಸಿ.ನವೀನ್, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಸ್ವಾಗತಿಸಿ, ವಕ್ತಾರ ಬಿ.ಕೆ.ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ವ್ಯಾಪ್ತಿಯ ಸೋಮವಾರಪೇಟೆ, ಸಿದ್ದಾಪುರ, ಪೊನ್ನಂಪೇಟೆ, ವಿರಾಜಪೇಟೆ, ಭಾಗಮಂಡಲ ಮತ್ತು ಮಡಿಕೇರಿ ಮಂಡಲ ವ್ಯಾಪ್ತಿಯಿಂದ ಸೋಮವಾರ ಬೆಳಗ್ಗೆ ಬಿಜೆಪಿ ಕಾರ್ಯಕರ್ತರು ವಾಹನಗಳಲ್ಲಿ ಬೃಹತ್ ಜಾಥ ನಡೆಸಿದರು. ಫೋಟೋ :: ಬಿಜೆಪಿ ಪ್ರೊಟೆಸ್ಟ್







