ಗೋಣಿಕೊಪ್ಪ, NEWS DESK ಸೆ.೦8: ಅಮ್ಮತ್ತಿ ಒಂಟಿ ಅಂಗಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ಪ್ರಾಥಮಿಕ ವಿಭಾಗದಲ್ಲಿ ಮೇವಡ ಯಾನಿ ಬೆಳ್ಳಿಯಪ್ಪ, ಮಾಲೇಟ್ಟಿರ ರೇನಾ ಪೊನ್ನಮ್ಮ ಹಾಗೂ ಕೊಪ್ಪಿರ ಎಸ್. ತನ್ವಿ ತಂಗಮ್ಮ ಸ್ಪರ್ಧಿಸಿ ವಿಜೇತರಾಗಿದ್ದಾರೆ.
ಬಾಲಕರ ಪ್ರಾಥಮಿಕ ವಿಭಾಗದಲ್ಲಿ ಐಚಂಡ ತಲಿಶ್ ಯು., ಚೇಮಿರ ದ್ರೋಣ್ ಚಿನ್ನಪ್ಪ, ಮೂಕೊಂಡ ಪ್ರಥಮ್ ಪೂವಣ್ಣ ಆರ್. ಹಾಗೂ ಎಸ್. ಗೌರವ್ ಕೃಷ್ಣ ಸ್ಪರ್ಧಿಸಿ ವಿಜೇತರಾಗಿದ್ದಾರೆ.
ಗೋಣಿಕೊಪ್ಪದ ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಬಾಲಕಿಯರ ಪಂದ್ಯಾವಳಿಯಲ್ಲಿ ಪಟ್ಟಡ ದೇಚಮ್ಮ, ತಾತಂಡ ಗ್ರಂಥ ಕಾವೇರಮ್ಮ ಹಾಗೂ ಚೊಕ್ಕಂಡ ದಿತಿ ದೇಚಮ್ಮ ಸ್ಪರ್ಧಿಸಿ ವಿಜೇತರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀಮತಿ ಮೋನಿಕಾ ಹಾಗೂ ಶ್ರೀಮತಿ ಲಾವಣ್ಯ ಅವರು ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮಾನ್ ಸುಧೇಶ್ ಬಿ.ಎಸ್., ಕಾರ್ಯದರ್ಶಿ ಶ್ರೀಮಾನ್ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಶ್ರೀಮತಿ ಪಾರ್ವತಿ ಪಿ.ಯು., ಸಂಯೋಜಕಿ ಅಮೃತ ಅರ್ಜುನ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ವೃಂದದವರು ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.







