ಮಡಿಕೇರಿ,NEWS DESK ಸೆ. 8:ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ 2025-26ನೇ ಸಾಲಿನ 75. ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪರವರ ಅಧ್ಯಕ್ಷತೆಯಲ್ಲಿ ರೈತ ಸಹಕಾರ ಭವನದ ಸಭಾಂಗಣದಲ್ಲಿ ಜರುಗಿತ್ತು.
ಸಭೆಯಲ್ಲಿ ಮೊದಲಿಗೆ ಸಂಘದ ಕಾರ್ಯ ವ್ಯಾಪ್ತಿಯ ಪ್ರಾಥಮಿಕ,ಪ್ರೌಢಶಾಲಾ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ನೆರವೇರಿಸಿದರು.
ಸಭೆಯಲ್ಲಿ 2025-26. ನೇ ಸಾಲಿನ ಲೆಕ್ಕಪರಿಶೋಧನಾ ವರದಿ, ಜಮಾಖರ್ಚು, ವ್ಯಾಪಾರ ಲಾಭ ಸೇರಿದಂತೆ, ನಿವ್ವಳ ಲಾಭದ ವಿಲೇವಾರಿ, ಅಂದಾಜು ಬಡ್ಜೆಟ್ ಮಂಜೂರು ಸೇರಿದಂತೆ ಸಂಘದ ಅಭಿವೃದ್ಧಿ ಪೂರಕವಾದ ಅಂಶಗಳ ಬಗ್ಗೆ ಚರ್ಚೆಗಳು ನಡೆದವು.
ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಂಘದ ಅಭಿವೃದ್ಧಿಗೆ ಪೂರಕವಾಗಿ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹೆಚ್. ಬಿ. ಚಂದ್ರಪ್ಪ ಮಾತಾನಾಡಿದ ಅವರು ಸಭೆಯಲ್ಲಿ ಚರ್ಚೆಗೊಂಡ ವಿಷಯಗಳನ್ನು ನೊಂದಣಿ ಮಾಡಲಾಗಿದೆ ಅದರ ಮೂಲಕ ಮಾಸಿಕ ಸಭೆಯಲ್ಲಿ ಚರ್ಚೆ ಮಾಡಿ ಸಾಧಕ ಬಾಧಕಗಳನ್ನು ಚರ್ಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಸಂಘವು ಈ ಸಾಲಿನಲ್ಲಿ ರೂ 58.12 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಅದರ ಮುಖೇನ ವಿವಿಧ ನಿಧಿಗಳಿಗೆ ಹಣವನ್ನು ಕಾಯ್ದಿರಿಸಲಾಗಿದೆ . ಅದರ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು
ಸಂಘವು ಕಳೆದ ಹಲವು ವರ್ಷಗಳಿಂದ ಸದಸ್ಯರಿಗೆ ಹಾಗೂ ಸದಸ್ಯರೇತರರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ. ಸಂಘವು 2122 ಸದಸ್ಯರನ್ನು ಹೊಂದಿದ್ದು ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿಗೆ ಪಡಿತರ ವಿತರಣೆಯ ಸಗಟು ನಾಮಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ 100 ನ್ಯಾಯಬೆಲೆ ಅಂಗಡಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಕುಶಾಲನಗರ ಮುಖ್ಯ ರಸ್ತೆಯಲ್ಲಿ ವ್ಯಾಪಾರ ಸಂಕೀರ್ಣ ಹೊಂದಿದ್ದು, ಗ್ರಾಹಕರ ಶಾಖೆ, ಸ್ಟೇಷನರಿ, ಗೊಬ್ಬರ, ಕ್ರಿಮಿನಾಶಕ, ಬಿತ್ತನೆಬೀಜ, ಕೋವಿತೋಟಾ, ಜನತಾ ಬಜಾರ್ ಮೆಡಿಕಲ್ಸ್, ಹಾಗೂ ಸದಸ್ಯರಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ, ವಾಹನ ಸಾಲ, ಅಡಮಾನ ಸಾಲಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸೇವೆ ಹಾಗೂ ಸೌಲಭ್ಯಗಳ ಬಗ್ಗೆ ವಿವರ ನೀಡಿದರು.
ಈ ಸಾಲಿನಲ್ಲಿ ಸಂಘದ ಸದಸ್ಯರಿಗೆ ಶೇ.20% ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ಅಲ್ಲದೆ ಮುಂದಿನ ಯೋಜನೆಗೆ ಮಹಾಸಭೆ ಅನುಮತಿಯನ್ನು ಪಡೆದು ಯೋಜನೆಗಳನ್ನು ಕಾರ್ಯಗೊಳಿಸಲಾಗುವುದುಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಜಗದೀಶ್ ನವರು ಸಂಘದ ವಾರ್ಷಿಕ ಮಹಾಸಭೆ ಸಭೆಯ ವರದಿಯನ್ನು ವಾಚಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಹೆಚ್.ಟಿ. ಚಂದ್ರಕಲಾ, ನಿರ್ದೇಶಕರಾದ ಕೆ.ಎಂ. ಪ್ರಸನ್ನ, ಬಿ.ಸಿ. ಮಲ್ಲಿಕಾರ್ಜುನ, ಹೆಚ್.ಎನ್. ಮಹದೇವ್ , ಪಾರ್ವತಿ ಬಿ.ಎಂ, ಮಂಜುನಾಥ್ , ಎನ್.ಸಿ. ಪೂನ್ನಪ್ಪ, ಹೆಚ್ ಜೆ. ಶರತ್, ಹೆಚ್. ಡಿ. ನಂದಕುಮಾರ್, ಗಂಗಾಧರ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿರ್ದೇಶಕಿ ಜಲಜಾ ಶೇಖರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಜಿ. ಜಗದೀಶ್, ಸೇರಿದಂತೆ ಸುಂಟಿಕೊಪ್ಪ,ಕುಶಾಲನಗರ ಹೆಬ್ಬಾಲೆ ಬ್ಲಾಕ್ ಮಟ್ಟದ ಸಂಘದ ಸದಸ್ಯರು ಹಾಜರಿದ್ದರು.
ಚಂದ್ರಕಲಾ ತಂಡ ಪ್ರಾರ್ಥಿಸಿ, ನಿರ್ದೇಶಕ ಎನ್.ಸಿ. ಪೊನ್ನಪ್ಪ ಸ್ವಾಗತಿಸಿ, ರಘು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.








