
ಕುಶಾಲನಗರ, ಸೆ.10 NEWS DESK : ಕುಶಾಲನಗರದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಕಚೇರಿಯಲ್ಲಿ ಎಲ್‌ಐಸಿಯ 70ನೇ ಸಂಸ್ಥಾಪನಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಲ್‌ಐಸಿಯ ಧ್ಯೇಯ, ಸಾಧನೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಲಾಯಿತು. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದರೊಂದಿಗೆ ಹೆಚ್ಚಿನ ಕುಟುಂಬಗಳಿಗೆ ಜೀವ ವಿಮೆಯ ಭದ್ರತೆಯನ್ನು ತಲುಪಿಸುವ ಸಂಕಲ್ಪವನ್ನು ಎಲ್‌ಐಸಿ ಕುಶಾಲನಗರ ಶಾಖೆಯ ಸಿಬ್ಬಂದಿ ಹಾಗೂ ಪ್ರತಿನಿಧಿಗಳು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಲ್‌ಐಸಿ ಶಾಖಾ ವ್ಯವಸ್ಥಾಪಕ ಎಸ್.ಬಿ. ಶಿವಪ್ರಸಾದ್, ಸುಂಟಿಕೊಪ್ಪದ ವಾಣಿಜ್ಯೋದ್ಯಮಿ ಎಡ್ವರ್ಡ್ ಜಾರ್ಜ್ ವಿಲಿಯಂ ಹಾಗೂ ಗ್ಯಾಲಕ್ಸಿ ಪ್ರತಿನಿಧಿ ಸುಬ್ರಮಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಲ್‌ಐಸಿ ವತಿಯಿಂದ ಹೊರತರಲಾದ ‘ಜೀವನ್ ರಕ್ಷಾ’ ಪಾಲಿಸಿಯ ಪ್ರಚಾರ ಸಾಮಗ್ರಿಯನ್ನು ವಾಣಿಜ್ಯೋದ್ಯಮಿ ಎಡ್ವರ್ಡ್ ಜಾರ್ಜ್ ವಿಲಿಯಂ ಬಿಡುಗಡೆಗೊಳಿಸಿದರು.










