ಮಡಿಕೇರಿ, NEWS DESK ಸೆ.11: ಮಡಿಕೇರಿ ನಗರ ದಸರಾ ಸಮಿತಿಯ ಕಚೇರಿ ಉದ್ಘಾಟನೆ ಹಾಗೂ ದಸರಾ ಲೋಗೋ ಅನಾವರಣ ಕಾರ್ಯಕ್ರಮ ನಗರಸಭಾ ಸಂಕೀರ್ಣದಲ್ಲಿರುವ ದಸರಾ ಕಚೇರಿಯಲ್ಲಿ ನಡೆಯಿತು.
ನಗರಸಭಾ ಸಂಕೀರ್ಣದಲ್ಲಿರುವ ದಸರಾ ಕಚೇರಿಯಲ್ಲಿ ಗಣಪತಿ ಹೋಮ ನೆರವೇರಿಸುವ ಮೂಲಕ ಕಚೇರಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಡಿಕೇರಿ ನಗರ ದಸರಾ ಸಂಬಂಧಿತ ಲೋಗೋವನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ನಗರಸಭೆ ಪೌರಾಯುಕ್ತ ರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ದಸರಾ ಸಮಿತಿಯ ಗೌರವ ಸಲಹೆಗಾರರಾದ ಸತೀಶ್ ಪೈ, ಜಿ. ಚಿದ್ವಿಲಾಸ್, ಸಾಂಸ್ಕೃತಿಕ ಸಮಿತಿಯ ಗೌರವ ಸಲಹೆಗಾರ ಅನಿಲ್ ಹೆಚ್.ಟಿ., ದಸರಾ ಸಮಿತಿ ಪ್ರಮುಖರಾದ ಎ.ಸಿ. ದೇವಯ್ಯ, ಅಜ್ಜೇಟಿರ ಲೋಕೇಶ್, ವಿನು ಈರಪ್ಪ, ನವೀನ್ ಅಂಬೆಕಲ್, ಮುದ್ದುರಾಜ್, ರವಿ, ಮುನೀರ್ ಮಾಚರ್, ಮೂಡ ಸದಸ್ಯರಾದ ಚಂದ್ರು ಹಾಗೂ ನವೀನ್, ದಸರಾ ಸಮಿತಿ ವ್ಯವಸ್ಥಾಪಕ ಶಶಿಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಶ್ರೀಕೃಷ್ಣ ಉಪಾಧ್ಯಾಯ ಅವರು ದೈವಿಕ ಕಾರ್ಯಗಳನ್ನು ನೆರವೇರಿಸಿದರು.
ಈ ವರ್ಷ ಮಡಿಕೇರಿ ದಸರಾ ಮಹೋತ್ಸವದ ಅಂಗವಾಗಿ ನಾಲ್ಕು ಶಕ್ತಿದೇವತೆಗಳ ಕರಗ ಪೂಜೆ ಅಕ್ಟೋಬರ್ 11ರಂದು ಭಾನುವಾರ ನಡೆಯಲಿದೆ. ಬಳಿಕ ಅಕ್ಟೋಬರ್ 12ರಂದು ಸೋಮವಾರದಿಂದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ನಗರಸಭೆ ಸದಸ್ಯ ಚಂದ್ರಶೇಖರ್ ತಿಳಿಸಿದರು.








