
ಮಡಿಕೇರಿ ಸೆ.23 NEWS DESK : ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ 2026-27 ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಪ.ಜಾತಿ, ಪ.ಪಂಗಡದ ಮತ್ತು ಸಾಮಾನ್ಯ ವರ್ಗದ ಮೀನು ಹಿಡಿಯುವ ಸಲಕರಣೆಗಳ ವಿತರಣೆ” ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾವಲಯ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಕಾರ್ಯಕ್ರಮದಡಿ ಪ.ಜಾತಿ/ ಪ.ಪಂಗಡದ ಮತ್ತು ಸಮಗ್ರ ಮೀನುಗಾರಿಕೆ ಅಭಿವೃದ್ದಿ ಯೋಜನೆಯಡಿ ಸಾಮಾನ್ಯ ವರ್ಗ ದ ಮೀನು ಕೃಷಿಕರಿಗೆ ಮೀನು ಹಿಡಿಯುವ ಸಲಕರಣೆಯನ್ನು ಉಚಿತವಾಗಿ ವಿತರಿಸಲು “ಸೇವಾ ಸಿಂಧು” ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಹ ಮೀನುಗಾರರಿಗೆ/ ಮೀನು ಕೃಷಿಕರಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್, 9 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಇಲಾಖೆಯ ತಾಲ್ಲೂಕು ಕಚೇರಿಗಳನ್ನು ಸಂಪರ್ಕಿಸಲು ಕೋರಿದೆ. ಲಿಂಕ್: https://sevaone.karnataka.gov.in/services/directApply.do?serviceId=2763 ನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಸಚಿನ್ ಅವರು ತಿಳಿಸಿದ್ದಾರೆ.









