
ಮಡಿಕೇರಿ ಸೆ.24 NEWS DESK : ಐಸಿಎಆರ್-ಐಐಎಚ್ಆರ್ ನ ಬೆಂಗಳೂರಿನ ಬೆಳೆ ಸಂರಕ್ಷಣಾ ವಿಭಾಗದ ‘ಅಣಬೆ ಪ್ರಯೋಗಾಲಯ’ದ ಸಹಯೋಗದೊಂದಿಗೆ, ಚೆಟ್ಟಳ್ಳಿಯಲ್ಲಿರುವ ಐಸಿಎಆರ್-ಐಐಎಚ್ಆರ್ನ ‘ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ’ವು(ಸಿಎಚ್ಇಎಸ್) 2026ರ ಸೆಪ್ಟೆಂಬರ್, 25 ರಂದು ಚೆಟ್ಟಳ್ಳಿಯ ಐಸಿಎಆರ್-ಸಿಎಚ್ಇಎಸ್ ಸಂಸ್ಥೆಯಲ್ಲಿ “ಅಣಬೆ ಕೃಷಿ ಕುರಿತಾದ ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮ ನಡೆಯಲಿದೆ. ಭಾರತ ಸರ್ಕಾರದ ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ಯ (ಆರ್ಕೆವಿವೈ) ಆರ್ಥಿಕ ನೆರವಿನೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು, ರೈತರು, ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಇತರ ಸಂಬಂಧಿತರ ನಡುವೆ ವೈಜ್ಞಾನಿಕ ಅಣಬೆ ಕೃಷಿಯ ಕುರಿತು ಜಾಗೃತಿ ಮೂಡಿಸುವ ಮತ್ತು ಅದನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಕಾರ್ಯಕ್ರಮದಲ್ಲಿ ಅಣಬೆ ವೈವಿಧ್ಯತೆಯ ಪ್ರದರ್ಶನ, ತಾಂತ್ರಿಕ ತರಬೇತಿ ಅವಧಿಗಳು ಹಾಗೂ ‘ಅತ್ಯುತ್ತಮ ಅಣಬೆ ಬೆಳವಣಿಗೆ ಚೀಲ’ಮತ್ತು ‘ಅತ್ಯುತ್ತಮ ಮೌಲ್ಯವರ್ಧಿತ ಅಣಬೆ ಉತ್ಪನ್ನ’ಕ್ಕಾಗಿ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.









