ನಾಪೋಕ್ಲು,NEWS DESK ಸೆ.27: ಬಾಳಲೆ ವಿಜಯಲಕ್ಷ್ಮಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಆಟ ಪ್ರದರ್ಶಿಸಿ ರನ್ನರ್ಸ್ ಸ್ಥಾನ ಪಡೆದುಕೊಂಡಿದ್ದಾರೆ. ತಂಡದ ಆರು ವಿದ್ಯಾರ್ಥಿಗಳು ಸಂಪಾಜೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ.
ತಂಡದ ವಿದ್ಯಾರ್ಥಿಗಳಾದ ಕುಟ್ಟಂಡ ದೇಚಮ್ಮ ಎಂ., ಚೊಯಮಂಡ ವರ್ಣ ಎಂ., ನೆಲಚಂಡ ಪೊನ್ನಮ್ಮ ಎನ್., ಬೋವ್ವೆರಿಯಂಡ ಹನ್ಸಿಕಾ ಪೊನ್ನಪ್ಪ ಬಿ., ರಾನಿಯ ತಸ್ಲಿನ್, ಅಮ್ಮಕಂಡ ಆಂಚಲ್ ತಂಗಮ್ಮ, ಹೋಲೀಕ ಪಿ., ಬೇರೇರಾ ಶಿಯಾನ ಮುತ್ತಣ್ಣ ಹಾಗೂ ತಾತಂಡ ಗ್ರಂಥ ಕಾವೇರಪ್ಪ ಅವರು ತಂಡದ ಉತ್ತಮ ಪ್ರದರ್ಶನಕ್ಕೆ ಪ್ರಮುಖ ಪಾತ್ರ ವಹಿಸಿದರು.
ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀಮತಿ ಮೋನಿಕಾ ಮತ್ತು ಶ್ರೀಮತಿ ಲಾವಣ್ಯ ಅವರ ತರಬೇತಿಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ.
ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧೇಶ್ ಬಿ.ಎಸ್., ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಶ್ರೀಮತಿ ಪಾರ್ವತಿ ಪಿ.ಯು., ಸಂಯೋಜಕಿ ಅಮೃತ ಅರ್ಜುನ್ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.








