Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • **ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ**
  • *ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಸಾಧನೆ : ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿನಿಯರಿಗೆ ಗೌರವ*
  • *ನಿಯಮ ಉಲ್ಲಂಘಿಸಿ ಮರದ ದಿಮ್ಮಿ ಸಾಗಾಟ : ಐದು ಲಾರಿ ವಶ : ರೂ.2.97 ಲಕ್ಷ ದಂಡ*
  • *ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ*
  • *ತಾಳತ್ತಮನೆಯಲ್ಲಿ ಯುವಜನತೆ ಹಾಗೂ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿ : ಸ್ವಾವಲಂಬಿಗಳಾಗಲು ಕರೆ*
  • *ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ*
  • *ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*
  • *ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ*
  • *ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ*
  • *ಮೂರ್ನಾಡಿನಲ್ಲಿ ಧರ್ಮಸ್ಥಳ ಯೋಜನೆಯಿಂದ ‘ರೈತ ಕ್ಷೇತ್ರ ಪಾಠಶಾಲೆ’*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಸಾಧನೆ : ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿನಿಯರಿಗೆ ಗೌರವ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಸಾಧನೆ : ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿನಿಯರಿಗೆ ಗೌರವ*

ಸೆಪ್ಟೆಂಬರ್ 30, 20261 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಸೆ.30 : ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಾಂಪಿಯನ್ ಪಟ್ಟಕ್ಕೇರಿದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸೆಪ್ಟೆಂಬರ್ 10ರಿಂದ 12ರವರೆಗೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಸಿ.ಐ.ಎಸ್.ಸಿ.ಇ. ರಾಷ್ಟ್ರೀಯ ಹಾಕಿ ಪಂದ್ಯಾವಳಿ-2026ರ ಅಂಡರ್-17 ಬಾಲಕಿಯರ ವಿಭಾಗದಲ್ಲಿ ಕರ್ನಾಟಕ-ಗೋವಾ ವಲಯದ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ಮುಕ್ಕಾಟಿರ ಆದ್ಯ ದೇಚ್ಚಮ್ಮ ಹಾಗೂ ಮೇವಡ ಜಾನ್ಹವಿ ಅವರು ತಂಡದೊಂದಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಯನ್ನು ಅಭಿನಂದಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯರು ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ ಹಾಗೂ ಪರಿಶ್ರಮವನ್ನು ಪ್ರಶಂಸಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಬಾಳೆಯಡ ಸವಿತ ಎಂ.ಜಿ. ಅವರು, ರಾಷ್ಟ್ರಮಟ್ಟದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಹೆಸರು ಗುರುತಿಸುವಂತೆ ಮಾಡಿದ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿ, ಮುಂದೆಯೂ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಶಾಲಾ ಕಾರ್ಯಾಧ್ಯಕ್ಷರಾದ ಕೇಕಡ ದೇವಯ್ಯ ಅವರು ವಿದ್ಯಾರ್ಥಿನಿಯರು ಹಾಗೂ ತರಬೇತುದಾರರಿಗೆ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿನಿಯರು ತಮ್ಮ ಗೆಲುವಿಗೆ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕರಾದ ಹಂಚೆಟ್ಟಿರ ಈರಪ್ಪ ಹಾಗೂ ಸೀಮಾ ಪರ್ವಿನ್, ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಶಾಲಾ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಕರೆಸ್ಪಾಂಡೆಂಟ್ ಕನ್ನಂಡ ಕವಿತ ಕಾವೇರಮ್ಮ, ಆಡಳಿತಾಧಿಕಾರಿ ಮುಕ್ಕಾಟಿರ ಪೊನ್ನಮ್ಮ, ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಬೊಪ್ಪಂಡ ಸರಳಾ ಕರುಂಬಯ್ಯ, ನಂದಿನೆರವಂಡ ದಿನೇಶ್, ಮೂವೆರ ಜಯರಾಂ, ನಂದಿನೆರವಂಡ ರವಿ ಬಸಪ್ಪ, ಮಂಡಿರ ಸದಾಮುದ್ದಪ್ಪ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕಾಳಚಂಡ ಅಪ್ಪಣ್ಣ ಹಾಗೂ ತಡಿಯಂಗಡ ಪ್ರೇಮಲತಾ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

**ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ**

ಸೆಪ್ಟೆಂಬರ್ 30, 2026

*ನಿಯಮ ಉಲ್ಲಂಘಿಸಿ ಮರದ ದಿಮ್ಮಿ ಸಾಗಾಟ : ಐದು ಲಾರಿ ವಶ : ರೂ.2.97 ಲಕ್ಷ ದಂಡ*

ಸೆಪ್ಟೆಂಬರ್ 30, 2026

*ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ*

ಸೆಪ್ಟೆಂಬರ್ 30, 2026

*ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಸಾಧನೆ : ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿನಿಯರಿಗೆ ಗೌರವ*

ಸೆಪ್ಟೆಂಬರ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಸೆ.30 : ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಾಂಪಿಯನ್ ಪಟ್ಟಕ್ಕೇರಿದ ಜನರಲ್ ತಿಮ್ಮಯ್ಯ ಪಬ್ಲಿಕ್…

*ನಿಯಮ ಉಲ್ಲಂಘಿಸಿ ಮರದ ದಿಮ್ಮಿ ಸಾಗಾಟ : ಐದು ಲಾರಿ ವಶ : ರೂ.2.97 ಲಕ್ಷ ದಂಡ*

ಸೆಪ್ಟೆಂಬರ್ 30, 2026

*ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ*

ಸೆಪ್ಟೆಂಬರ್ 30, 2026

*ತಾಳತ್ತಮನೆಯಲ್ಲಿ ಯುವಜನತೆ ಹಾಗೂ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿ : ಸ್ವಾವಲಂಬಿಗಳಾಗಲು ಕರೆ*

ಸೆಪ್ಟೆಂಬರ್ 30, 2026

*ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ*

ಸೆಪ್ಟೆಂಬರ್ 30, 2026

*ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*

ಸೆಪ್ಟೆಂಬರ್ 29, 2026

*ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ*

ಸೆಪ್ಟೆಂಬರ್ 29, 2026

*ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ*

ಸೆಪ್ಟೆಂಬರ್ 29, 2026

*ಮೂರ್ನಾಡಿನಲ್ಲಿ ಧರ್ಮಸ್ಥಳ ಯೋಜನೆಯಿಂದ ‘ರೈತ ಕ್ಷೇತ್ರ ಪಾಠಶಾಲೆ’*

ಸೆಪ್ಟೆಂಬರ್ 29, 2026

*ಮೂರ್ನಾಡು ಕೊಡವ ಸಮಾಜದಿಂದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ*

ಸೆಪ್ಟೆಂಬರ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.