ಮಡಿಕೇರಿ, NEWS DESK ಅ.2: ಪೊನ್ನಂಪೇಟೆ ಕೊಡವ ಸಮಾಜದ 39ನೇ ವಾರ್ಷಿಕ ಮಹಾಸಭೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಮಹಾಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು 600 ಸದಸ್ಯರು ಕೊಡವ ಸಮಾಜದ ಅಭಿವೃದ್ಧಿ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸಲಹೆಗಳನ್ನು ನೀಡುವುದರೊಂದಿಗೆ ಅಗತ್ಯ ಸಹಕಾರದ ಭರವಸೆ ನೀಡಿದರು.
ಕೊಡವ ಸಮಾಜದ ಅಂಗ ಸಂಸ್ಥೆಯಾದ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ 7ರಿಂದ 10ನೇ ತರಗತಿಯವರೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಅಲ್ಲದೆ, ಕೊಡವ ಸಮಾಜದ ಸದಸ್ಯರ ಮಕ್ಕಳಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.99.2 ಅಂಕ ಗಳಿಸಿದ ನೆಲ್ಲಿಮಾಡ ಟಿ. ಸಿದ್ಧಾಂತ್ ಕಾವೇರಪ್ಪ, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.99.33 ಅಂಕ ಗಳಿಸಿದ ಕಾಟಿಮಾಡ ಡಿ. ಭಾಷಿತ ಹಾಗೂ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಜ್ಜಿಕುಟ್ಟೀರ ಎಂ. ಜಶ್ ಕಾವೇರಿಯಪ್ಪ ಅವರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಮಹಾಸಭೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌರವ ಕಾರ್ಯದರ್ಶಿ ಕೋಟೇರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೆಮಾಡ ಡಿ. ಸುಧೀರ್, ಖಜಾಂಚಿ ಚೆಪ್ಪುಡಿರ ಎ. ಕಾರ್ಯಪ್ಪ, ಖಾಯಂ ಆಹ್ವಾನಿತ ನಿರ್ದೇಶಕ ಚಪ್ಪುಡಿರ ಪಿ. ಕಿಟ್ಟು ಅಯ್ಯಪ್ಪ, ನಿರ್ದೇಶಕರಾದ ಕೋಣಿಯಂಡ ಸಂಜು ಸೋಮಯ್ಯ, ಕಳ್ಳಿಚಂಡ ದೇವಯ್ಯ, ಅಜ್ಜಿಕುಟ್ಟಿರ ಎಂ. ಪೃಥ್ವಿ ಸುಬ್ಬಯ್ಯ, ಅಡ್ಡಂಡ ಸಿ. ಪ್ರಕಾಶ್ ಕುಶಾಲಪ್ಪ, ಮೂಕಳೆರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಜಿ. ಗಂಗಮ್ಮ, ಕೊಡವ ಸಮಾಜದ ಅಂಗಸಂಸ್ಥೆಯಾಗಿರುವ ನ್ಯಾಯಪೀಠದ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ, ಅಪ್ಪಚ್ಚ ಕವಿ ವಿದ್ಯಾಲಯದ ಅಧ್ಯಕ್ಷ ಪೊನ್ನಿಮಾಡ ಎಸ್. ಸುರೇಶ್ ಹಾಗೂ ಸ್ಪೋರ್ಟ್ಸ್ ಅಂಡ್ ರೀಕ್ರಿಯೇಷನ್ ಕ್ಲಬ್‌ನ ಅಧ್ಯಕ್ಷ ಚೆಪ್ಪುಡಿರ ಎಂ. ಪೊನ್ನಪ್ಪ ಉಪಸ್ಥಿತರಿದ್ದರು.








