ವಿರಾಜಪೇಟೆ ಅ.8 NEWS DESK : ನಾಪೋಕ್ಲು ಸಮೀಪದ ಚೇಲಾವರ ಗ್ರಾಮದಲ್ಲಿ ಮನೆಯೊಂದರ ಬಳಿ ಸ್ಪ್ರಿಂಕ್ಲರ್ ಪೈಪ್ (ನೀರು ಸಿಂಪಡಿಸುವ ಪೈಪ್) ಒಳಗೆ ಸೇರಿಕೊಂಡಿದ್ದ ದೊಡ್ಡ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಲಾಗಿದೆ. ಪೈಪ್‍ನ ಒಳಗೆ ಹಾವು ಸೇರಿಕೊಂಡಿರುವುದನ್ನು ಕಂಡು ಸ್ಥಳದಲ್ಲಿದ್ದವರು ತಕ್ಷಣವೆ ಉರಗ ರಕ್ಷಕ ಕೀರ್ತನ್ ಸೋಮಣ್ಣ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ್ದ ಕೀರ್ತನ್ ಸೋಮಣ್ಣ ಹಾಗೂ ಸ್ನೇಹಿತ ಪ್ರಜ್ವಲ್ ಪೈಪ್‍ನಿಂದ ಹಾವನ್ನು ರಕ್ಷಿಸಿದರು. ವಿರಾಜಪೇಟೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಾವಿಗೆ ಯಾವುದೇ ಅಪಾಯವಾಗದಂತೆ ಸಮೀಪದ ಮಾಕುಟ್ಟ ಅರಣ್ಯಕ್ಕೆ ಬಿಟ್ಟರು.

















