ಮಡಿಕೇರಿ NEWS DESK ಅ.24 : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ವಿಜಯದಶಮಿ ಹಬ್ಬದ ಪ್ರಯುಕ್ತ ಮಡಿಕೇರಿ ನಗರದಲ್ಲಿ ಶನಿವಾರ ಪಥಸಂಚಲನ ನಡೆಯಿತು. ನಗರದ ಶ್ರೀ ಮುತ್ತಪ್ಪ ದೇವಾಲಯದಿಂದ ಆರಂಭಗೊಂಡ ಪಥಸಂಚಲನ ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿ ಗಾಂಧಿ ಮೈದಾನದಲ್ಲಿ ಮುಕ್ತಾಯಗೊಂಡಿತು. ಆರ್‌ಎಸ್‌ಎಸ್‌ನ ಗಣವೇಷಧಾರಿ ಸ್ವಯಂಸೇವಕರು ಶಿಸ್ತುಬದ್ಧವಾಗಿ ಪಾಲ್ಗೊಂಡರು. ನಿಗದಿತ ಮಾರ್ಗದಲ್ಲಿ ಸಾಗಿದ ಸ್ವಯಂಸೇವಕರು ವಿಜಯದಶಮಿ ಹಬ್ಬದ ಅಂಗವಾಗಿ ಸಂಘದ ಸಂಪ್ರದಾಯ ಮತ್ತು ಶಿಸ್ತನ್ನು ಪ್ರದರ್ಶಿಸಿದರು.

















