ಮಡಿಕೇರಿ, NEWS DESK ಅ.24 : ಭಾರೀ ಮಳೆಗೆ ಕೊಡಗು ಜಿಲ್ಲೆಯ
ವಿವಿಧೆಡೆ ಮನೆ ಹಾಗೂ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಕುಶಾಲನಗರ ತಾಲೂಕಿನ ಚಿಕ್ಕ ಅಳುವಾರ ಗ್ರಾಮದ ನಿವಾಸಿ ವಿಜಯಕುಮಾರ್ ಟಿ.ವೈ. ಅವರ ವಾಸದ ಮನೆಯ ಗೋಡೆಯ ಭಾಗವು ಹಾನಿಗೊಳಗಾಗಿದೆ.
ವಿವಿಧೆಡೆ ಮನೆ ಹಾಗೂ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಕುಶಾಲನಗರ ತಾಲೂಕಿನ ಚಿಕ್ಕ ಅಳುವಾರ ಗ್ರಾಮದ ನಿವಾಸಿ ವಿಜಯಕುಮಾರ್ ಟಿ.ವೈ. ಅವರ ವಾಸದ ಮನೆಯ ಗೋಡೆಯ ಭಾಗವು ಹಾನಿಗೊಳಗಾಗಿದೆ.ಇದೇ ತಾಲೂಕಿನ ಕುಶಾಲನಗರ ಹೋಬಳಿಯ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗೂರು ಗ್ರಾಮದ ನಿವಾಸಿ ಜಯಲಕ್ಷ್ಮಿ ಕೋಂ ಈರಯ್ಯ ಅವರ ಮನೆಯ ಮೇಲ್ಛಾವಣಿ ಹಾನಿಯಾಗಿದೆ. ಅಲ್ಲದೆ, ಕುಶಾಲನಗರ ಹೋಬಳಿಯ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ನಿವಾಸಿ ನವೀನ್ ಅವರ ಕೊಟ್ಟಿಗೆಯೂ ಮಳೆಯಿಂದ ಹಾನಿಗೊಳಗಾಗಿದೆ. ಜಿಲ್ಲೆಯ ವಿವಿಧೆಡೆ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಹಾನಿಗೊಳಗಾದ ಮನೆಗಳು ಹಾಗೂ ಕೊಟ್ಟಿಗೆಯಿಂದಾಗಿ ಸಂತ್ರಸ್ತರಿಗೆ ನಷ್ಟ ಉಂಟಾಗಿದ್ದು, ಹಾನಿಯ ವಿವರಗಳನ್ನು ದಾಖಲಿಸಲಾಗಿದೆ.







