ಮಡಿಕೇರಿ, NEWS DESK ನ.1: ಕೊಡಗು ಹಿತರಕ್ಷಣಾ ವೇದಿಕೆಯ ವತಿಯಿಂದ ಮಡಿಕೇರಿ ನಗರದ ವಿಶ್ವಮಾನವ ಉದ್ಯಾನವನದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ್ ಕಾಮತ್ ಹಾಗೂ ಪುರಸಭೆಯ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ ಅವರು ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ ಅವರು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿ, ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಮಹತ್ವದ ಕುರಿತು ಹಿತನುಡಿಗಳನ್ನಾಡಿದರು.
ಸಮಾಜ ಸೇವಕ ಹಾಗೂ ವೇದಿಕೆಯ ಪದಾಧಿಕಾರಿ ಪ್ರಭು ರೈ ಅವರು ನೆರೆದಿದ್ದವರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ರವಿ ಗೌಡ, ತಾಲೂಕು ಉಪಾಧ್ಯಕ್ಷ ನಾಗೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಅಕ್ಷಿತ್, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಪ್ರಸಾದ್, ಕಾರ್ಮಿಕ ಘಟಕದ ಅಧ್ಯಕ್ಷೆ ದಿವ್ಯ, ನಗರ ಉಪಾಧ್ಯಕ್ಷೆ ಲಿಲ್ಲಿ ಗೌಡ, ಪೂರ್ಣಿಮಾ, ಬಾಲಕೃಷ್ಣ ನಾಯಕ್, ವೇದಿಕೆಯ ಸದಸ್ಯರಾದ ಜಾನ್ಸನ್, ಪ್ರವೀಣ್, ಅಜಿತ್, ವಿಜೇಶ್, ದೀಕ್ಷಿತ್ ಕುಮಾರ್, ವೈಭವ್, ಸುಜಿತ್ ಟಿ.ಆರ್., ಅಕ್ಷಯ್, ಗಜೇಂದ್ರ, ರೂಪ, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಸಂಪತ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ವೆಂಕಟೇಶ್, ಮುನೀರ್ ಮಾಚರ್, ಸಮೀರ್, ಮಹದೇವಣ್ಣ, ವಸಂತ್ ಭಟ್, ಸುಲೇಮಾನ್, ಯೂಸೆಫ್, ಶೇಕ್ ಆದಂ, ಕವನ್ ಕೊತ್ತುಳಿ, ಯೋಗು, ಸಂದೀಪ್, ರಾಮಯ್ಯ ಹಾಗೂ ಭವನ್ ಡಿ.ಎಸ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯ ವತಿಯಿಂದ ಸಾರ್ವಜನಿಕರಿಗೆ ಉಪಹಾರ, ಕಾಫಿ, ಟೀ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು.
ಪ್ರಭು ರೈ ಸ್ವಾಗತಿಸಿ, ಅಕ್ಷಿತ್ ವಂದಿಸಿದರು.

















