ಕುಶಾಲನಗರ, NEWS DESK ನ.6: ದೀಪಾವಳಿ ಹಬ್ಬದ ಪ್ರಯುಕ್ತ ಕುಶಾಲನಗರದ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಚಿನ್ನಾಭರಣ, ವಜ್ರಾಭರಣ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಘೋಷಿಸಲಾಗಿದೆ.
ನವೆಂಬರ್ 5ರಿಂದ 11ರವರೆಗೆ ನಡೆಯುವ ಈ ವಿಶೇಷ ಕೊಡುಗೆಯಡಿ ಚಿನ್ನಾಭರಣಗಳ ಮೇಕಿಂಗ್ (VA) ಶುಲ್ಕದ ಮೇಲೆ ಶೇ.30ರಷ್ಟು ನೇರ ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ಗೆ ರೂ.8,000 ಹಾಗೂ ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕೆ.ಜಿ.ಗೆ ರೂ.8,000 ನೇರ ರಿಯಾಯಿತಿ ನೀಡಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನಗದು ಪಾವತಿಸಿ ಚಿನ್ನಾಭರಣ ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ. ಅಲ್ಲದೆ, ಯಾವುದೇ ಜ್ಯುವೆಲ್ಲರ್ಸ್ನಿಂದ ಖರೀದಿಸಿದ 91.6% ಶುದ್ಧತೆಯ ಹಳೆಯ ಚಿನ್ನಾಭರಣಗಳನ್ನು ವಿನಿಮಯ ಮಾಡಿಕೊಳ್ಳುವಾಗ ಎಕ್ಸ್ಚೇಂಜ್ ದರದ ಮೇಲೆ ಯಾವುದೇ ಕಡಿತವಿಲ್ಲದ ಕೊಡುಗೆಯನ್ನೂ ಸಂಸ್ಥೆ ಪ್ರಕಟಿಸಿದೆ.
ಗ್ರಾಹಕರಿಗೆ ಚಿನ್ನದ ಉಳಿತಾಯ ಯೋಜನೆಗೆ ಸೇರ್ಪಡೆಯಾಗುವ ಅವಕಾಶವಿದ್ದು, ನಿಗದಿತ ಅವಧಿ ಪೂರ್ಣಗೊಳಿಸಿದ ಬಳಿಕ ಮುಂದಿನ ವರ್ಷದ ದೀಪಾವಳಿ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸಬಹುದಾಗಿದೆ. ಈ ಮೂಲಕ ಹಬ್ಬದ ಸಂಭ್ರಮದೊಂದಿಗೆ ಉಳಿತಾಯಕ್ಕೂ ಅವಕಾಶ ಕಲ್ಪಿಸಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸಗಳ ವೈವಿಧ್ಯಮಯ ಚಿನ್ನಾಭರಣ, ವಜ್ರಾಭರಣ ಮತ್ತು ಬೆಳ್ಳಿಯ ಆಭರಣಗಳ ಸಂಗ್ರಹವನ್ನು ಮಳಿಗೆಯಲ್ಲಿ ಸಿದ್ಧಪಡಿಸಲಾಗಿದೆ. ಗ್ರಾಹಕರ ವಿವಿಧ ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಹಲವು ವಿನ್ಯಾಸಗಳು ಲಭ್ಯವಿವೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಹೆಚ್ಚಿನ ಉಳಿತಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕೊಡುಗೆಗಳು ಚಿನ್ನದ ನಾಣ್ಯಗಳು, ಚಿನ್ನದ ಗಟ್ಟಿಗಳು ಹಾಗೂ ಎಲ್ಲೋ ಟ್ಯಾಗ್ ಹೊಂದಿರುವ ಆಭರಣಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ಯಾವುದೇ ಚಿನ್ನದ ಉಳಿತಾಯ ಯೋಜನೆ ಅಥವಾ ಇತರ ಯೋಜನೆಗಳೊಂದಿಗೆ ಈ ಕೊಡುಗೆಗಳನ್ನು ಸಂಯೋಜಿಸಲು ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆಧುನಿಕ ಹಾಗೂ ಪಾರಂಪರಿಕ ಚಿನ್ನಾಭರಣ ಮತ್ತು ವಜ್ರಾಭರಣಗಳ ಮಾರಾಟದಲ್ಲಿ ಹೆಸರು ಗಳಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸುಳ್ಯ, ಮೂಡುಬಿದಿರೆ, ಹಾಸನ ಹಾಗೂ ಪುತ್ತೂರಿನಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ. ದೀಪಾವಳಿ ವಿಶೇಷ ಕೊಡುಗೆಗಳು ಸಂಸ್ಥೆಯ ಎಲ್ಲಾ ಮಳಿಗೆಗಳಲ್ಲಿಯೂ ಲಭ್ಯವಿರಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

















