ಮಡಿಕೇರಿ NEWS DESK ನ.23 : ಕೊಡಗಿನ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಎಂ. ಶ್ರೀಧರ್ ಹೂವಲ್ಲಿ ಅವರು ಪ್ರತಿಷ್ಠಿತ ‘ಗೋವರ್ಧನ ಗೋಪಾಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2026’ಕ್ಕೆ ಭಾಜನರಾಗಿದ್ದಾರೆ. ಮೈಸೂರಿನ ‘ಯುವಂ ಯುಗಂ’ ಕನ್ನಡ ಮಾಸಪತ್ರಿಕೆಯ 3ನೇ ವಾರ್ಷಿಕೋತ್ಸವದ ಅಂಗವಾಗಿ ಶೈನ್ ಗ್ಲೋಬಲ್ ಹ್ಯೂಮ್ಯಾನಿಟಿ ಟ್ರಸ್ಟ್, ಬೋಗಾದಿ, ಮೈಸೂರು, ಕಾವೇರಿ ಮಿತ್ರ ನ್ಯೂಸ್ ಕನ್ನಡ ಹಾಗೂ ಶ್ರೀಗರಿ ಸಮೂಹ ಮಾಧ್ಯಮ ಸಂಘಗಳ ಸಹಯೋಗದಲ್ಲಿ ನ.25ರಂದು ಗೋವರ್ಧನ ಗೋಪಾಲ ಕನ್ನಡ ರಾಜ್ಯೋತ್ಸವ ಹಾಗೂ ಅಂತರರಾಷ್ಟ್ರೀಯ ಶ್ರೀಕೃಷ್ಣ ಶಾರದಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ದಶಕಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಎಂ. ಶ್ರೀಧರ್ ಹೂªಲ್ಲಿ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂದು ಬೆಳಗ್ಗೆ 10.30 ಗಂಟೆಗೆ ಮೈಸೂರಿನ ಕನ್ನಡ ಕಲಾ ಮಂದಿರದ ಸಮೀಪ ನಡೆಯಲಿರುವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಂತರಾಷ್ಟ್ರೀಯ ಶ್ರೀಕೃಷ್ಣ ಶಾರದಾ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ. ಇದೇ ಸಂದರ್ಭ ಎಂ. ಶ್ರೀಧರ್ ಹೂವಲ್ಲಿ ಅವರಿಗೆ ಗೋವರ್ಧನ ಗೋಪಾಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
















