ಮಡಿಕೇರಿ NEWS DESK ನ.24 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟ ನ.29 ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ. ಮಡಿಕೇರಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2025-26ನೇ ಸಾಲಿನಲ್ಲಿ ಹಳೆ ವಿದ್ಯಾರ್ಥಿ ಸಂಘವು ಕಾಲೇಜಿನ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ವಿವಿಧ ಚಟುವಟಿಕೆಗಳಿಗೆ ಹಲವು ಕೊಡುಗೆಗಳನ್ನು ನೀಡಿದೆ ಎಂದು ಮಾಹಿತಿ ನೀಡಿದರು. ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಅಮೃತ ಮಹೋತ್ಸವದ ಸ್ಮರಣಾರ್ಥ ಬಿಲ್ಬೋರ್ಡ್ ಅಳವಡಿಸಲಾಗಿದೆ. ಕೊಡಗಿನ ಎಲ್ಲಾ ಶಾಲಾ ಕಾಲೇಜುಗಳ ಎನ್ಸಿಸಿ ಕೆಡೆಟ್ಗಳಿಗೆ ಅನುಕೂಲವಾಗುವಂತೆ ಕಾಲೇಜಿನ ಮೈದಾನದ ಪಾರ್ಶ್ವಭಾಗದಲ್ಲಿ 9 ಅಡಿ ಎತ್ತರದ ರೈಫಲ್ ರೇಂಜ್ ನಿರ್ಮಿಸಲಾಗಿದೆ. ಕಾಲೇಜಿನ ಎನ್ಸಿಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಿ 65 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ.
ಅರ್ಥಶಾಸ್ತ್ರ ವಿಭಾಗದ ಎ.ಡಿ.ಶ್ರಫ್ ಅವರ ಜನ್ಮದಿನದ ಅಂಗವಾಗಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಲು ಹಾಗೂ ಆಂಗ್ಲ ಭಾಷಾ ವಿಭಾಗದ ಒಂದು ದಿನದ ವಿಚಾರ ಸಂಕಿರಣಕ್ಕೆ ಧನಸಹಾಯ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಕಾರ್ಯಾಗಾರ, ಗ್ರಂಥಾಲಯಕ್ಕೆ ಡಿಜಿಟಲ್ ಲೈಬ್ರರಿ ಅಳವಡಿಸಲು ಸಹಾಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಸಂಘದ ವತಿಯಿಂದ ಕಾಲೇಜಿನ ಮೈದಾನವನ್ನು ವರ್ಷಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುತ್ತಿದೆ. ಸೆಮಿನಾರ್ ಹಾಲ್ನಲ್ಲಿ ದುರಸ್ತಿಗೊಂಡ ಮೈಕ್ ತೆರವುಗೊಳಿಸಿ ಹೊಸ ಮೈಕ್ ಅಳವಡಿಸಲಾಗಿದೆ. ಕಾಲೇಜು ಆವರಣದಲ್ಲಿ 50ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಪ್ರತಿಭಾ ಸಮಾಗಮ ಕಾರ್ಯಕ್ರಮಕ್ಕೆ ಧನಸಹಾಯ ನೀಡಲಾಗಿದ್ದು, ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗಾಗಿ ಮಾಹಿತಿ ಕಾರ್ಯಾಗಾರ, ರಸಪ್ರಶ್ನೆ ಸ್ಪರ್ಧೆ ಹಾಗೂ ಜಿಲ್ಲಾ ಮಟ್ಟದ ಛಾಯಾಗ್ರಹಣ ಸ್ಪರ್ಧೆ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಪತ್ರಿಕಾ ಕಚೇರಿ, ಟಿವಿ ಮಾಧ್ಯಮ ಹಾಗೂ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯ ಕಾರ್ಯನಿರ್ವಹಣೆ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಗಿದೆ. ಪ್ರಾಂಶುಪಾಲರು ಮತ್ತು ಸಂಘದ ಸದಸ್ಯರ ಸಹಕಾರದೊಂದಿಗೆ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸದಸ್ಯತ್ವ ಅಭಿಯಾನ ನಡೆಸಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ 260ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಸಂಘದ ಸದಸ್ಯತ್ವ ಪಡೆದುಕೊಂಡಿದ್ದಾರೆ. ನೂತನವಾಗಿ ಸದಸ್ಯತ್ವ ಪಡೆದುಕೊಳ್ಳುವವರು ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟದಲ್ಲಿ ಪಾಲ್ಗೊಂಡು ಸ್ಥಳದಲ್ಲೇ ನೋಂದಾಯಿಸಿಕೊಳ್ಳಬಹುದಾಗಿದೆ ಅಥವಾ ಸದಸ್ಯತ್ವ ಪಡೆಯಲು 9880778047 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಕ್ಕಾಟಿರ ಎ.ಅಪ್ಪಯ್ಯ, ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಶಿ ಕಿರಣ್ ಕೆ.ಎ. ಹಾಗೂ ಸಮಾಜ ಸೇವಕ ವಿ.ಜಿ.ಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ಮಹಾಸಭೆಯ ಆಹ್ವಾನ ಪತ್ರಿಕೆ ಸಿಗದವರು ಕೂಡ ಸಭೆಯಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ್ನು ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಶಿಕ್ಷಣವೇ ದೇಶದ ಆಸ್ತಿಯಾಗಿದ್ದರೂ ಶೈಕ್ಷಣಿಕ ಬೆಳವಣಿಗೆಗೆ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರಕಾರ ಅಗತ್ಯ ಸಹಕಾರ ನೀಡುತ್ತಿಲ್ಲ. ಸರಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಹಳೆ ವಿದ್ಯಾರ್ಥಿ ಸಂಘ ಕಾಲೇಜ್ ನ ಅಭಿವೃದ್ಧಿಗೆ ಹಾಗೂ ಎಲ್ಲಾ ಚಟುವಟಿಕೆಗಳಿಗೆ ಸಹಕಾರವನ್ನು ನೀಡುತ್ತಾ ಬರುತ್ತಿದೆ. ಸಂಘದಲ್ಲಿ ಒಂದು ಸಾವಿರ ಸದಸ್ಯರು ಮಾತ್ರ ಇದ್ದು, ಸದಸ್ಯತ್ವ ಪಡೆಯದ ಹಳೆಯ ವಿದ್ಯಾರ್ಥಿಗಳು ಸದಸ್ಯತ್ವವನ್ನು ಪಡೆದು ಕಾಲೇಜು ಅಭಿವೃದ್ಧಿಗೆ ಕೈಜೋಡಿಸಬೇಕು. ಆ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ಇದೇ ಮೊದಲ ಬಾರಿಗೆ ಸಂತೋಷ ಕೂಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 53 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುತ್ತಿದೆ. ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾದ ಮುಕ್ಕಾಟಿರ ಎ.ಅಪ್ಪಯ್ಯ, ಕಡಗದಾಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ರಾಷ್ಟçಪತಿ ಪ್ರಶಸ್ತಿ ವಿಜೇತ ಶಶಿ ಕಿರಣ್ ಕೆ.ಎ., ಮಡಿಕೇರಿಯ ಸಮಾಜ ಸೇವಕ ವಿ.ಜಿ.ಮೋಹನ್ ಹಾಗೂ ಬೋಧಕ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಬೊಳ್ಳಜಿರ ಅಯ್ಯಪ್ಪ ತಿಳಿಸಿದರು. ಫೀ.ಮಾ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ ಕಾಲೇಜ್ ನ ಪ್ರಗತಿಗೆ ಹಳೆ ವಿದ್ಯಾರ್ಥಿ ಸಂಘ ಅಪಾರ ಸಹಕಾರವನ್ನು ನೀಡುತ್ತಿದೆ. ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಸಂಘಕ್ಕೆ ಶಕ್ತಿ ತುಂಬಬೇಕು. ಇದರಿಂದ ಕಾಲೇಜ್ ನ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು. ಕಾರ್ಯಪ್ಪ ಕಾಲೇಜು ಕೇವಲ ವಿದ್ಯೆ ಕಲಿಸುವುದಕ್ಕಷ್ಟೇ ಸೀಮಿತವಾಗಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವ್ಯಕ್ತಿತ್ವವನ್ನು ರೂಪಿಸಿದೆ. ಜೀವನದ ಮೌಲ್ಯ, ಸೌಹಾರ್ದತೆ ಮತ್ತು ಶಿಸ್ತನ್ನು ಹೇಳಿಕೊಟ್ಟಿದೆ. ಅತ್ಯಂತ ಶ್ರೇಷ್ಠ ವಿದ್ಯಾ ಸಂಸ್ಥೆಯಾಗಿ ಗುರುತಿಸಲ್ಪಟ್ಟಿರುವ ಈ ಕಾಲೇಜ್ ನ ಏಳಿಗೆಗೆ ಹಳೆ ಯುವ ವಿದ್ಯಾರ್ಥಿಗಳ ಸಹಕಾರದ ಅಗತ್ಯವಿದೆ. ಸಂಘದಲ್ಲಿ ಸದಸ್ಯತ್ವವನ್ನು ಪಡೆದುಕೊಂಡು ಪ್ರಗತಿಗಾಗಿ ಕೈಜೋಡಿಸಬೇಕು ಮತ್ತು ಪರಸ್ಪರ ಬಾಂಧವ್ಯವವನ್ನು ಗಟ್ಟಿಗೊಳಿಸಬೇಕು. ಕೊಡಗು ವಿವಿ ಆದ ನಂತರ ಕಾಲೇಜು ಆಂತರಿಕ ಸಂಪನ್ಮೂನದಿoದಲೇ ಪ್ರಗತಿ ಸಾಧಿಸಬೇಕಾಗಿದೆ. ಕಾಲೇಜು ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಹಳೆಯ ವಿದ್ಯಾರ್ಥಿಗಳು, ದಾನಿಗಳು ಹಾಗೂ ಸಾರ್ವಜನಿಕರು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಂಘದ ನಿರ್ದೇಶಕ ಕಿಶೋರ್ ರೈ ಕತ್ತಲೆಕಾಡು ಮಾತನಾಡಿ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮಹಾಸಭೆ ಮತ್ತು ಸಂತೋಷ ಕೂಟದಲ್ಲಿ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ., ಕೊಡಗಿನ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮುಕ್ಕಾಟಿರ ಎ.ಅಪ್ಪಯ್ಯ, ಕಡಗದಾಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಶಿ ಕಿರಣ್ ಕೆ.ಎ. ಹಾಗೂ ಮಡಿಕೇರಿಯ ಸಮಾಜ ಸೇವಕ ವಿ.ಜಿ.ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ ಹಾಗೂ ನಿರ್ದೇಶಕಿ ಖುರ್ಷಿದ್ ಬಾನು ಕೆ.ಹೆಚ್ ಅವರು ಸಂಘದ ವಾರ್ಷಿಕ ಮಹಾಸಭೆ ಮತ್ತು ಸಂತೋಷ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು ಅನುಭವವನ್ನು ಹಂಚಿಕೊಳ್ಳುವುದರೊoದಿಗೆ ಅಗತ್ಯ ಸಲಹೆಗಳನ್ನು ನೀಡಬೇಕು ಎಂದು ಕೋರಿದರು.
*ಸನ್ಮಾನಿಸಲ್ಪಡುವ ಬೋಧಕ ಸಿಬ್ಬಂದಿಗಳು*
* ಡಾ. ತಳವಾರ್ ಬಿ.ಎಚ್ — ಹಿಂದಿ ವಿಭಾಗ
* ಡಾ. ಭೈರವಿ ವಿ.ಬಿ — ಭೂಗೋಳಶಾಸ್ತ್ರ ವಿಭಾಗ
* ಡಾ. ಡೀನಾ ಎಂ.ಪಿ — ಆಂಗ್ಲ ಭಾಷಾ ವಿಭಾಗ
* ಡಾ. ನಳಿನಿ ಬಿ.ಎಂ — ಪ್ರಾಣಿಶಾಸ್ತ್ರ ವಿಭಾಗ
* ಡಾ. ಹೇಮಲತಾ ಎಂ.ಜಿ — ಕನ್ನಡ ವಿಭಾಗ
*ಬಹುಮಾನ ಪಡೆಯುವ ವಿದ್ಯಾರ್ಥಿಗಳು*
* ದೀಕ್ಷಿತ ಟಿ.ವಿ — ತೃತೀಯ ಬಿ.ಕಾಂ (ಸಾಮಾನ್ಯ) — ಪ್ರಥಮ
* ನಿಷ್ಮ ಎನ್.ಎನ್ — ತೃತೀಯ ಬಿ.ಕಾಂ (ಸಾ) — ದ್ವಿತೀಯ
* ಅಮೃತ ಎಂ.ಎo — ತೃತೀಯ ಬಿ.ಕಾಂ — ಪ್ರಥಮ
* ಹಿಮ ರಾಜೇಶ್ವರಿ ಎನ್.ಎ — ತೃತೀಯ ಬಿ.ಕಾಂ — ದ್ವಿತೀಯ
* ಸಾನಿಯ ಎಂ.ಎ — ತೃತೀಯ ಬಿ.ಎ — ಪ್ರಥಮ
* ಶಿಫಾ ಎಂ.ಎ — ತೃತೀಯ ಬಿ.ಎ — ದ್ವಿತೀಯ
* ಶ್ರೀಜೇಶ್ ಎನ್.ಬಿ — ತೃತೀಯ ಬಿ.ಬಿ.ಎ — ಪ್ರಥಮ
* ಮಿಲನ ಬಿ.ಕೆ — ತೃತೀಯ ಬಿ.ಬಿ.ಎ — ದ್ವಿತೀಯ
* ಇಂಪನ ಕೆ.ಡಿ — ತೃತೀಯ ಬಿ.ಸಿ.ಎ — ಪ್ರಥಮ
* ವೈಶಾಲಿ ಡಬ್ಲೂ.ಪಿ — ತೃತೀಯ ಬಿ.ಸಿ.ಎ — ದ್ವಿತೀಯ
* ವರ್ಷ ಕೆ.ಟಿ — ತೃತೀಯ ಬಿ.ಎಸ್ಸಿ — ಪ್ರಥಮ
* ಹರ್ಷಿತ್ ಬಿ.ಬಿ — ತೃತೀಯ ಬಿ.ಎಸ್ಸಿ — ದ್ವಿತೀಯ
* ಕೃತಿಕ ಸಿ.ಬಿ — ದ್ವಿತೀಯ ಬಿ.ಕಾಂ (ಸಾ) — ಪ್ರಥಮ
* ಪೂರ್ಣಿಮ ಎಂ.ಎಸ್ — ದ್ವಿತೀಯ ಬಿ.ಕಾಂ (ಸಾ) — ದ್ವಿತೀಯ
* ಶನ್ಯ ದಿನೇಶ್ — ದ್ವಿತೀಯ ಬಿ.ಕಾಂ — ಪ್ರಥಮ
* ಪ್ರಿಯಾಂಕ ಎನ್.ಒ — ದ್ವಿತೀಯ ಬಿ.ಕಾಂ — ದ್ವಿತೀಯ
* ಹೇಮವತಿ — ದ್ವಿತೀಯ ಬಿ.ಎ — ಪ್ರಥಮ
* ಶೃಂಗ ಎಸ್ — ದ್ವಿತೀಯ ಬಿ.ಎ — ದ್ವಿತೀಯ
* ವಂದನ ಬಿ.ಎಂ — ದ್ವಿತೀಯ ಬಿ.ಬಿ.ಎ — ಪ್ರಥಮ
* ಜಶ್ಮಿತ ಜಿ.ಜಿ — ದ್ವಿತೀಯ ಬಿ.ಬಿ.ಎ — ದ್ವಿತೀಯ
* ಸಫ್ರಿನ ಕೆ.ಎಂ — ದ್ವಿತೀಯ ಬಿ.ಸಿ.ಎ — ಪ್ರಥಮ
* ಹರ್ಷಿತ ಆರ್ — ದ್ವಿತೀಯ ಬಿ.ಸಿ.ಎ — ದ್ವಿತೀಯ
* ಸೂಜ಼ನ ಎಂ.ಬಿ — ದ್ವಿತೀಯ ಬಿ.ಎಸ್ಸಿ — ಪ್ರಥಮ
* ಆಷಿಕ ಕೆ ಐ — ದ್ವಿತೀಯ ಬಿ.ಎಸ್ಸಿ — ದ್ವಿತೀಯ
* ಸಿ.ಎಸ್. ಪ್ರಜ್ಞ — ಪ್ರಥಮ ಬಿ.ಕಾಂ (ಸಾ) — ಪ್ರಥಮ
*ಲತಾ — ಪ್ರಥಮ ಬಿ.ಕಾಂ (ಸಾ) — ದ್ವಿತೀಯ
* ಡಿ.ಸಿ.ಪಾರ್ವತಿ — ಪ್ರಥಮ ಬಿ.ಕಾಂ (ಸಿ.ಎ) — ಪ್ರಥಮ
* ತೇಜಸ್ವಿನಿ ಹೆಚ್.ಆರ್ — ಪ್ರಥಮ ಬಿ.ಕಾಂ (ಸಿ.ಎ) — ದ್ವಿತೀಯ
* ಪಿ. ಎಸ್ ಶಿಲ್ಪಶ್ರೀ — ಪ್ರಥಮ ಬಿ.ಎ — ಪ್ರಥಮ
* ಮೇಘ ಎಸ್— ಪ್ರಥಮ ಬಿ.ಎ — ದ್ವಿತೀಯ
* ಸುಚಿತ್ರ ಜೆ.ಎಂ — ಪ್ರಥಮ ಬಿ.ಬಿ.ಎ — ಪ್ರಥಮ
* ಶ್ರೀಜಿತ್ ಎಸ್.ಡಿ — ಪ್ರಥಮ ಬಿ.ಬಿ.ಎ — ದ್ವಿತೀಯ
* ಭುವನ್ ಕೆ.ಬಿ — ಪ್ರಥಮ ಬಿ.ಸಿ.ಎ — ಪ್ರಥಮ
* ಹರ್ಷಿತ ಕೆ.ಎನ್ — ಪ್ರಥಮ ಬಿ.ಸಿ.ಎ — ದ್ವಿತೀಯ
* ಪ್ರಣಿತ ಎಸ್ — ಪ್ರಥಮ ಬಿ.ಎಸ್ಸಿ — ಪ್ರಥಮ
* ವಿಷ್ಣು ಟಿ.ಜಿ— ಪ್ರಥಮ ಬಿ.ಎಸ್ಸಿ — ದ್ವಿತೀಯ
*ಎನ್.ಎಸ್.ಎಸ್.*
* ದೀಕ್ಷಿತ್ ಕೆ.ಎಂ — ತೃತೀಯ ಬಿ.ಕಾಂ — ಪ್ರಥಮ
* ನಿಷ್ಮಿತಾ ಎಸ್ ಎಂ— ತೃತೀಯ ಬಿ.ಕಾಂ — ಪ್ರಥಮ
*ಎನ್.ಸಿ.ಸಿ.*
* ಸಂದೇಶ್ — ತೃತೀಯ ಬಿ.ಎ — ಪ್ರಥಮ
* ಅರ್ಪಿತಾ ಕೆ.ಜಿ — ತೃತೀಯ ಬಿ.ಎ — ಪ್ರಥಮ
*ಎಸ್.ಡಿ. / ಎಸ್.ಡಬ್ಲ್ಯೂ.*
* ಯಶ್ವಂತ್ ಕೆ.ಎಂ — ಪ್ರಥಮ ವರ್ಷ ಎಸ್.ಡಿ — ಪ್ರಥಮ
* ಭುವಿನ್ ಡಿ.ಜಿ — ಪ್ರಥಮ ವರ್ಷ ಎಸ್.ಡಿ — ದ್ವಿತೀಯ
* ಒ.ಕೆ.ನಿಹಾರಿಕ — ಪ್ರಥಮ ವರ್ಷ ಎಸ್.ಡಬ್ಲ್ಯೂ — ಪ್ರಥಮ
* ದಿವ್ಯ — ಪ್ರಥಮ ವರ್ಷ ಎಸ್.ಡಬ್ಲ್ಯೂ — ದ್ವಿತೀಯ
* ರಕ್ಷಿತ ಹೆಚ್ — ಪ್ರಥಮ ವರ್ಷ ಎಸ್.ಡಬ್ಲ್ಯೂ — ದ್ವಿತೀಯ
* ಕೃಪಾಲ್ ಎನ್.ಜೆ — ದ್ವಿತೀಯ ವರ್ಷ ಎಸ್.ಡಿ — ಪ್ರಥಮ
* ಮನೋಜ್ ಕುಮರ್ ಎಂ.ಬಿ — ದ್ವಿತೀಯ ವರ್ಷ ಎಸ್.ಡಿ — ದ್ವಿತೀಯ
* ದೀಪಿಕ ಎಂ.ಜಿ — ದ್ವಿತೀಯ ವರ್ಷ ಎಸ್.ಡಬ್ಲ್ಯೂ — ಪ್ರಥಮ
* ಕಾವೇರಮ್ಮ ಹೆಚ್.ಸಿ — ದ್ವಿತೀಯ ವರ್ಷ ಎಸ್.ಡಬ್ಲ್ಯೂ — ದ್ವಿತೀಯ
* ಹರ್ಷದ್ ಕೆ.ಎ — ತೃತೀಯ ಬಿ.ಕಾಂ — ಪ್ರಥಮ
* ಸಂಗೀತ ಪಿ.ಎ — ತೃತೀಯ ಬಿ.ಎ — ಪ್ರಥಮ
* ಸಪ್ನ ಎಂ. ಶೆಟ್ — ತೃತೀಯ ಬಿ.ಕಾಂ — ಪ್ರಥಮ
* ಚೋಂದಮ್ಮ ಎಂ.ಯು — ತೃತೀಯ ಬಿ.ಕಾಂ — ಪ್ರಥಮ
















