Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆ.ಎ. ಯಾಕುಬ್ ಖಂಡನೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆ.ಎ. ಯಾಕುಬ್ ಖಂಡನೆ

ನವೆಂಬರ್ 27, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, NEWS DESK ನ.27: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕೇರಳಿಗರ ಕುರಿತು ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಸದಸ್ಯ ಕೆ.ಎ. ಯಾಕುಬ್, ಕೇರಳಿಗರ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇರಳವು ಕರ್ನಾಟಕದ ನೆರೆಯ ರಾಜ್ಯವಾಗಿದ್ದು, ತಲೆತಲಾಂತರಗಳಿಂದ ಎರಡೂ ರಾಜ್ಯಗಳು ಸೌಹಾರ್ದಯುತ ಸಂಬಂಧವನ್ನು ಹೊಂದಿವೆ. ಒಂದು ರಾಜ್ಯದವರು ಮತ್ತೊಂದು ರಾಜ್ಯಕ್ಕೆ ಉದ್ಯೋಗ ಹಾಗೂ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ತೆರಳುವುದು ಸಹಜ ಪ್ರಕ್ರಿಯೆಯಾಗಿದೆ. ಕೇರಳದವರು ಕೊಡಗು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಉದ್ಯೋಗ ಕಂಡುಕೊಂಡು, ಶ್ರಮದ ಜೀವನ ನಡೆಸುತ್ತಾ ವ್ಯಾಪಾರ-ವಹಿವಾಟುಗಳನ್ನು ವಿಸ್ತರಿಸಿದ್ದಾರೆ. ಇದರಿಂದ ರಾಜ್ಯದ ಆರ್ಥಿಕತೆಗೂ ಹಾಗೂ ತೆರಿಗೆ ಆದಾಯಕ್ಕೂ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಕೇರಳಿಗರಂತೆ ಇತರ ರಾಜ್ಯಗಳ ಜನರೂ ಕರ್ನಾಟಕದಲ್ಲಿ ನೆಲೆಸಿದ್ದು, ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರ, ನೆಲ-ಜಲವನ್ನು ಗೌರವಿಸುತ್ತಿದ್ದಾರೆ. ನೆರೆಯ ರಾಜ್ಯಗಳ ಜನರು ಕರ್ನಾಟಕದ ವಿರುದ್ಧವಾಗಿ ಎಂದಿಗೂ ನಡೆದುಕೊಂಡಿಲ್ಲ. ಕೇರಳಿಗರು ಇಲ್ಲಿನ ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ತಮ್ಮ ಮೂಲ ಸಂಸ್ಕೃತಿಯನ್ನೂ ವಿನಿಮಯ ಮಾಡಿಕೊಂಡು ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಅವರು ಆರೋಪಿಸಿರುವಂತೆ ಕೇರಳಿಗರು ಕರ್ನಾಟಕದ ಸಂಸ್ಕೃತಿಯನ್ನು ಹಾಳು ಮಾಡಿಲ್ಲ. ತೆಂಗಿನ ಮರವನ್ನು ಭಾರತೀಯರು ಕಲ್ಪವೃಕ್ಷವೆಂದು ಗೌರವಿಸುತ್ತಾರೆ. ಕೇರಳದ ತೆಂಗಿನ ಮರಗಳೂ ಕಲ್ಪವೃಕ್ಷಗಳೇ ಆಗಿವೆ. ಅಲ್ಲಿನ ನೀರು ಕೂಡ ಜೀವಜಲವೇ ಆಗಿದೆ. ಇಂತಹ ವಿಚಾರಗಳನ್ನು ಕೀಳಾಗಿ ಪರಿಗಣಿಸುವ ಮನೋಭಾವ ಪ್ರತಾಪ್ ಸಿಂಹ ಅವರ ಘನತೆಗೆ ತಕ್ಕುದಲ್ಲ ಎಂದು ಯಾಕುಬ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರಳಿಗರ ಬುದ್ಧಿವಂತಿಕೆಯ ಬಗ್ಗೆಯೂ ಪ್ರತಾಪ್ ಸಿಂಹ ಪ್ರಶ್ನಿಸಿರುವುದು ಸರಿಯಲ್ಲ. ಕೇರಳಿಗರು ವ್ಯಾಪಾರ-ವಹಿವಾಟುಗಳಲ್ಲಿ ಸಾಧಿಸಿರುವ ಪ್ರಗತಿಯೇ ಅವರ ಬುದ್ಧಿವಂತಿಕೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಭಾರತೀಯರು ವಿದೇಶಗಳಲ್ಲಿಯೂ ಬದುಕು ಕಟ್ಟಿಕೊಂಡು ರಾಜಕೀಯ ಸ್ಥಾನಮಾನಗಳನ್ನು ಗಳಿಸಿರುವುದು ಸಹಜ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.

ಸಕಲೇಶಪುರದವರಾದ ಪ್ರತಾಪ್ ಸಿಂಹ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರಲಿಲ್ಲವೇ? ಆ ಸಂದರ್ಭದಲ್ಲಿ ಮಲಯಾಳಿ ಸಮುದಾಯದ ಮತಗಳನ್ನು ಪಡೆದಿಲ್ಲವೇ? ಮತ ನೀಡುವಂತೆ ಮಲಯಾಳಿಗಳಲ್ಲಿ ಕೈಮುಗಿದು ಮನವಿ ಮಾಡಿಲ್ಲವೇ? ಎಂದು ಯಾಕುಬ್ ಪ್ರಶ್ನಿಸಿದ್ದಾರೆ.

ಕೇರಳಿಗರ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಾಪ್ ಸಿಂಹ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕೆ.ಎ. ಯಾಕುಬ್ ಒತ್ತಾಯಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

ಕುಶಾಲನಗರದಲ್ಲಿ ಸಂಭ್ರಮದ ಶ್ರೀ ಮಹಾಗಣಪತಿ ರಥೋತ್ಸವ

ನವೆಂಬರ್ 27, 2026

ನಿಧನ ಸುದ್ದಿ

ನವೆಂಬರ್ 27, 2026

ಕೊಯನಾಡು ಸರ್ಕಾರಿ ಶಾಲೆಯಲ್ಲಿ ಯೋಗ ಸಿಂಚನ ಕಾರ್ಯಕ್ರಮ

ನವೆಂಬರ್ 27, 2026

ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆ.ಎ. ಯಾಕುಬ್ ಖಂಡನೆ

ನವೆಂಬರ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.27: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕೇರಳಿಗರ ಕುರಿತು ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಅವರ…

ನಿಧನ ಸುದ್ದಿ

ನವೆಂಬರ್ 27, 2026

ಕೊಯನಾಡು ಸರ್ಕಾರಿ ಶಾಲೆಯಲ್ಲಿ ಯೋಗ ಸಿಂಚನ ಕಾರ್ಯಕ್ರಮ

ನವೆಂಬರ್ 27, 2026

ಸಿ ಅಂಡ್ ಡಿ ಲ್ಯಾಂಡ್ ಸಮಸ್ಯೆ ಪರಿಹರಿಸದಿದ್ದರೆ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಬಹಿಷ್ಕಾರ: ರೈತ ಹೋರಾಟ ಸಮಿತಿ ಎಚ್ಚರಿಕೆ

ನವೆಂಬರ್ 27, 2026

ಸೋಮವಾರಪೇಟೆಯಲ್ಲಿ ಮಹಿಳಾ ದೌರ್ಜನ್ಯ ತಡೆಗೆ ಮಾನವ ಸರಪಳಿ ಮೂಲಕ ಜಾಗೃತಿ

ನವೆಂಬರ್ 27, 2026

ಮಡಿಕೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ : ಕನಕದಾಸರ ಚಿಂತನೆ, ಕೀರ್ತನೆಗಳು ಮಾನವಕುಲಕ್ಕೆ ಸದಾ ದಾರಿದೀಪ – ಜಯಲಕ್ಷ್ಮಿ ರಾಯಕೋಡ್

ನವೆಂಬರ್ 27, 2026

ಕೊಡಗಿನ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದರೆ ಸಾಕ್ಷ್ಯ ನೀಡಲಿ : ಪ್ರತಾಪ್ ಸಿಂಹ ವಿರುದ್ಧ ಹಿಂದೂ ಮಲಯಾಳಿ ಸಂಘಟನೆಗಳ ಅಸಮಾಧಾನ

ನವೆಂಬರ್ 27, 2026

ಹಿರಿಯ ಪತ್ರಕರ್ತ ಎಂ. ಶ್ರೀಧರ್ ಹೂವಲ್ಲಿ ಅವರಿಗೆ ‘ಗೋವರ್ಧನ ಗೋಪಾಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ

ನವೆಂಬರ್ 27, 2026

ಪ್ರತಾಪ್ ಸಿಂಹ ವಿರುದ್ಧ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ದೂರು; ಕಾನೂನು ಕ್ರಮಕ್ಕೆ ಕೊಡಗು ಹಿಂದೂ ಮಲಯಾಳಿ ಸಮಾಜ ಆಗ್ರಹ

ನವೆಂಬರ್ 26, 2026

ಸಿಎನ್‌ಸಿಯಿಂದ ಸಂವಿಧಾನ ದಿನ ಮತ್ತು 36ನೇ ವರ್ಷದ ಕೊಡವ ನ್ಯಾಷನಲ್ ಡೇ ಆಚರಣೆ : ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಹಕ್ಕೊತ್ತಾಯಗಳ ಮಂಡನೆ;  ಕೊಡವಲ್ಯಾಂಡ್ ಸ್ವಾಯತ್ತತೆ, ST ಸ್ಥಾನಮಾನ, ಕೊಡವ ತಕ್ಕ್‌ಗೆ ಮಾನ್ಯತೆ ಹಾಗೂ 2027ರ ಜನಗಣತಿಯಲ್ಲಿ ಪ್ರತ್ಯೇಕ ಗುರುತಿಗೆ ಒತ್ತಾಯ

ನವೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.