ಮಡಿಕೇರಿ, NEWS DESK ನ.29: ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದ ಬಳಿಕ ಸಮಾಜಕ್ಕೆ ಕೊಡುಗೆ ನೀಡುವುದೇ ನಿಜವಾದ ಸಾಧನೆಯಾಗಿದೆ ಎಂದು ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ಹಾಗೂ ಕಡಗದಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎ. ಶಶಿಕಿರಣ್ ಅಭಿಪ್ರಾಯಪಟ್ಟರು.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ಮತ್ತು ಸಂತೋಷ ಕೂಟ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಮೊದಲ ದಿನ ಹಲವಾರು ಪ್ರಶ್ನೆಗಳೊಂದಿಗೆ ಪ್ರವೇಶಿಸಿದ್ದೆ. ಆದರೆ ಶಿಕ್ಷಣ ಪೂರ್ಣಗೊಳಿಸುವ ವೇಳೆಗೆ ಸಾವಿರಾರು ಸಿಹಿ ನೆನಪುಗಳನ್ನು ಹೊತ್ತುಕೊಂಡು ಹೊರಬಂದಿದ್ದೇನೆ. ಕಾಲೇಜು ಜೀವನದ ಅನುಭವಗಳು ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ಸ್ಮರಿಸಿದರು. ವಿದ್ಯಾಸಂಸ್ಥೆಗಳು ಕೇವಲ ಶಿಕ್ಷಣ ನೀಡುವ ಕೇಂದ್ರಗಳಲ್ಲ, ಜೀವನದ ಮೌಲ್ಯಗಳನ್ನು ಕಲಿಸುವ ಕ್ಷೇತ್ರಗಳಾಗಿವೆ. ಇಲ್ಲಿ ಶಿಕ್ಷಣ ಪಡೆದವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ ಬಳಿಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಸಾಧನೆ ತೋರಬೇಕು. ಕಾಲೇಜಿನ ಅಭಿವೃದ್ಧಿ ಕೇವಲ ಆಡಳಿತ ಮಂಡಳಿಯ ಜವಾಬ್ದಾರಿಯಲ್ಲ. ಹಳೇ ವಿದ್ಯಾರ್ಥಿಗಳ ಪಾತ್ರವೂ ಮಹತ್ವದ್ದಾಗಿದೆ. ಆದ್ದರಿಂದ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಎಲ್ಲರೂ ಹಳೇ ವಿದ್ಯಾರ್ಥಿ ಸಂಘದ ಸದಸ್ಯತ್ವ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ಸಮಾಜ ಸೇವಕ ವಿ.ಜಿ. ಮೋಹನ್ ಮಾತನಾಡಿ, ತಾವು ವ್ಯಾಸಂಗ ಮಾಡಿದ ಕಾಲೇಜಿನ ಕಟ್ಟಡಗಳು ಇಂದು ದುಸ್ಥಿತಿಯಲ್ಲಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಕಟ್ಟಡಗಳ ದುರಸ್ತಿ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸದಸ್ಯತ್ವ ಹೆಚ್ಚಿಸುವ ಕಾರ್ಯಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು 1949ರಲ್ಲಿ ಆರಂಭವಾಗಿದ್ದು, ಇಲ್ಲಿ ಶಿಕ್ಷಣ ಪಡೆದ ಅನೇಕರು ರಕ್ಷಣಾ ಕ್ಷೇತ್ರ, ರಾಜಕೀಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಕಾಲೇಜಿನ ಹೆಸರಿಗೆ ತಕ್ಕಂತೆ ತಮ್ಮ ಬದುಕಿನಲ್ಲಿಯೂ ಶಿಸ್ತನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ 35 ವರ್ಷಗಳ ಹಿಂದೆ ಆರಂಭವಾದ ಹಳೇ ವಿದ್ಯಾರ್ಥಿ ಸಂಘಕ್ಕೆ ಕಳೆದ ಎರಡು ವರ್ಷಗಳಲ್ಲಿ 260ಕ್ಕೂ ಅಧಿಕ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದ್ದು, ಪ್ರಸ್ತುತ ಸದಸ್ಯರ ಸಂಖ್ಯೆ ಸಾವಿರದ ಗಡಿ ದಾಟಿದೆ ಎಂದು ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದಕ್ಕೆ ಸರ್ಕಾರದ ನೀತಿಗಳೂ ಕಾರಣವಾಗುತ್ತಿವೆ. ಕಾಲೇಜಿನ ಕಟ್ಟಡಗಳ ದುರಸ್ತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಹಳೇ ವಿದ್ಯಾರ್ಥಿಗಳು ಸಂಘದ ಸದಸ್ಯತ್ವ ಪಡೆದು ಕಾಲೇಜಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ. ರಾಘವ ಮಾತನಾಡಿ, ಶಿಕ್ಷಣವು ಸಮಾಜವನ್ನು ಬದಲಿಸುವ ಪ್ರಮುಖ ಅಸ್ತ್ರವಾಗಿದ್ದು, ಕಾಲೇಜು ಅಂತಹ ಅಸ್ತ್ರಗಳನ್ನು ರೂಪಿಸುವ ಕೇಂದ್ರವಾಗಿದೆ ಎಂದರು. ಕಾಲೇಜುಗಳು ಕೇವಲ ಪದವಿ ಪ್ರಮಾಣಪತ್ರ ವಿತರಿಸುವ ಸಂಸ್ಥೆಗಳಲ್ಲ. ಅವು ವ್ಯಕ್ತಿತ್ವ ಹಾಗೂ ಬದುಕನ್ನು ರೂಪಿಸುವ ಪವಿತ್ರ ಕೇಂದ್ರಗಳಾಗಿವೆ. ವ್ಯಕ್ತಿಯ ಕೊಡುಗೆಯನ್ನು ಸಮಾಜ ಗುರುತಿಸಿದಾಗ ಮಾತ್ರ ಇತಿಹಾಸ ಅವರನ್ನು ಸ್ಮರಿಸುತ್ತದೆ. ಹಳೇ ವಿದ್ಯಾರ್ಥಿ ಸಂಘವು ಯುವಶಕ್ತಿಯಿಂದ ಕೂಡಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಇನ್ನಷ್ಟು ಪರಿಣಾಮಕಾರಿ ಕೆಲಸಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು. ಸಂಘದ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಾತನಾಡಿ, ಇದೇ ಮೊದಲ ಬಾರಿಗೆ ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ 53 ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದರು. ಸಂಘದ ಸದಸ್ಯ ಕಿಶೋರ್ ರೈ ಕತ್ತಲೆಕಾಡು ಮಾತನಾಡಿ, ಡಿಸೆಂಬರ್ ತಿಂಗಳಲ್ಲಿ ‘ಕ್ಯಾಂಪಸ್ ನೋಡ ಬನ್ನಿ’ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸಂಸದರು, ಶಾಸಕರು, ಅಧಿಕಾರಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಿ ಕಾಲೇಜಿನ ಕಟ್ಟಡಗಳ ದುರಸ್ತಿ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. *ಸನ್ಮಾನ ಮತ್ತು ಗೌರವ* ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಾಧ್ಯಾಪಕರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಸಮಾಜ ಸೇವಕ ವಿ.ಜಿ. ಮೋಹನ್ ಹಾಗೂ ಪಿಡಿಒ ಕೆ.ಎ. ಶಶಿಕಿರಣ್ ಅವರನ್ನು ಕಾಲೇಜು ಮತ್ತು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಎನ್ಸಿಸಿ, ಎನ್ಎಸ್ಎಸ್ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 53 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. *ಸಂಘದ ಮಹಾಸಭೆ* ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಹಳೇ ವಿದ್ಯಾರ್ಥಿ ಸಂಘದ ಬಲವರ್ಧನೆ, ಕಾಲೇಜಿನ ಕಟ್ಟಡಗಳ ದುರಸ್ತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು. *ಕ್ರೀಡಾಕೂಟ ಮತ್ತು ಸಂಭ್ರಮ* ಹಳೇ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಸಭಾಂಗಣದಲ್ಲಿ ಮನರಂಜನಾ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಶೈಕ್ಷಣಿಕ ವರ್ಷಗಳಲ್ಲಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ವಿಜೇತರಿಗೆ ನೆನಪಿನ ಕಾಣಿಕೆ ಹಾಗೂ ಬಹುಮಾನ ವಿತರಿಸಲಾಯಿತು. ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಹಾಗೂ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಿಶಾಂತ್ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ ವಂದಿಸಿದರು.
*ಸನ್ಮಾನಿಸಲ್ಪಟ್ಟ ಬೋಧಕ ಸಿಬ್ಬಂದಿಗಳು*
* ಡಾ. ತಳವಾರ್ ಬಿ.ಎಚ್ — ಹಿಂದಿ ವಿಭಾಗ
* ಡಾ. ಭೈರವಿ ವಿ.ಬಿ — ಭೂಗೋಳಶಾಸ್ತ್ರ ವಿಭಾಗ
* ಡಾ. ಡೀನಾ ಎಂ.ಪಿ — ಆಂಗ್ಲ ಭಾಷಾ ವಿಭಾಗ
* ಡಾ. ನಳಿನಿ ಬಿ.ಎಂ — ಪ್ರಾಣಿಶಾಸ್ತ್ರ ವಿಭಾಗ
* ಡಾ. ಹೇಮಲತಾ ಎಂ.ಜಿ — ಕನ್ನಡ ವಿಭಾಗ
*ಬಹುಮಾನ ಪಡೆದ ವಿದ್ಯಾರ್ಥಿಗಳು*
* ದೀಕ್ಷಿತ ಟಿ.ವಿ — ತೃತೀಯ ಬಿ.ಕಾಂ (ಸಾಮಾನ್ಯ) — ಪ್ರಥಮ
* ನಿಷ್ಮ ಎನ್.ಎನ್ — ತೃತೀಯ ಬಿ.ಕಾಂ (ಸಾ) — ದ್ವಿತೀಯ
* ಅಮೃತ ಎಂ.ಎo — ತೃತೀಯ ಬಿ.ಕಾಂ — ಪ್ರಥಮ
* ಹಿಮ ರಾಜೇಶ್ವರಿ ಎನ್.ಎ — ತೃತೀಯ ಬಿ.ಕಾಂ — ದ್ವಿತೀಯ
* ಸಾನಿಯ ಎಂ.ಎ — ತೃತೀಯ ಬಿ.ಎ — ಪ್ರಥಮ
* ಶಿಫಾ ಎಂ.ಎ — ತೃತೀಯ ಬಿ.ಎ — ದ್ವಿತೀಯ
* ಶ್ರೀಜೇಶ್ ಎನ್.ಬಿ — ತೃತೀಯ ಬಿ.ಬಿ.ಎ — ಪ್ರಥಮ
* ಮಿಲನ ಬಿ.ಕೆ — ತೃತೀಯ ಬಿ.ಬಿ.ಎ — ದ್ವಿತೀಯ
* ಇಂಪನ ಕೆ.ಡಿ — ತೃತೀಯ ಬಿ.ಸಿ.ಎ — ಪ್ರಥಮ
* ವೈಶಾಲಿ ಡಬ್ಲೂ.ಪಿ — ತೃತೀಯ ಬಿ.ಸಿ.ಎ — ದ್ವಿತೀಯ
* ವರ್ಷ ಕೆ.ಟಿ — ತೃತೀಯ ಬಿ.ಎಸ್ಸಿ — ಪ್ರಥಮ
* ಹರ್ಷಿತ್ ಬಿ.ಬಿ — ತೃತೀಯ ಬಿ.ಎಸ್ಸಿ — ದ್ವಿತೀಯ
* ಕೃತಿಕ ಸಿ.ಬಿ — ದ್ವಿತೀಯ ಬಿ.ಕಾಂ (ಸಾ) — ಪ್ರಥಮ
* ಪೂರ್ಣಿಮ ಎಂ.ಎಸ್ — ದ್ವಿತೀಯ ಬಿ.ಕಾಂ (ಸಾ) — ದ್ವಿತೀಯ
* ಶನ್ಯ ದಿನೇಶ್ — ದ್ವಿತೀಯ ಬಿ.ಕಾಂ — ಪ್ರಥಮ
* ಪ್ರಿಯಾಂಕ ಎನ್.ಒ — ದ್ವಿತೀಯ ಬಿ.ಕಾಂ — ದ್ವಿತೀಯ
* ಹೇಮವತಿ — ದ್ವಿತೀಯ ಬಿ.ಎ — ಪ್ರಥಮ
* ಶೃಂಗ ಎಸ್ — ದ್ವಿತೀಯ ಬಿ.ಎ — ದ್ವಿತೀಯ
* ವಂದನ ಬಿ.ಎಂ — ದ್ವಿತೀಯ ಬಿ.ಬಿ.ಎ — ಪ್ರಥಮ
* ಜಶ್ಮಿತ ಜಿ.ಜಿ — ದ್ವಿತೀಯ ಬಿ.ಬಿ.ಎ — ದ್ವಿತೀಯ
* ಸಫ್ರಿನ ಕೆ.ಎಂ — ದ್ವಿತೀಯ ಬಿ.ಸಿ.ಎ — ಪ್ರಥಮ
* ಹರ್ಷಿತ ಆರ್ — ದ್ವಿತೀಯ ಬಿ.ಸಿ.ಎ — ದ್ವಿತೀಯ
* ಸೂಜ಼ನ ಎಂ.ಬಿ — ದ್ವಿತೀಯ ಬಿ.ಎಸ್ಸಿ — ಪ್ರಥಮ
* ಆಷಿಕ ಕೆ ಐ — ದ್ವಿತೀಯ ಬಿ.ಎಸ್ಸಿ — ದ್ವಿತೀಯ
* ಸಿ.ಎಸ್. ಪ್ರಜ್ಞ — ಪ್ರಥಮ ಬಿ.ಕಾಂ (ಸಾ) — ಪ್ರಥಮ
*ಲತಾ — ಪ್ರಥಮ ಬಿ.ಕಾಂ (ಸಾ) — ದ್ವಿತೀಯ
* ಡಿ.ಸಿ.ಪಾರ್ವತಿ — ಪ್ರಥಮ ಬಿ.ಕಾಂ (ಸಿ.ಎ) — ಪ್ರಥಮ
* ತೇಜಸ್ವಿನಿ ಹೆಚ್.ಆರ್ — ಪ್ರಥಮ ಬಿ.ಕಾಂ (ಸಿ.ಎ) — ದ್ವಿತೀಯ
* ಪಿ. ಎಸ್ ಶಿಲ್ಪಶ್ರೀ — ಪ್ರಥಮ ಬಿ.ಎ — ಪ್ರಥಮ
* ಮೇಘ ಎಸ್— ಪ್ರಥಮ ಬಿ.ಎ — ದ್ವಿತೀಯ
* ಸುಚಿತ್ರ ಜೆ.ಎಂ — ಪ್ರಥಮ ಬಿ.ಬಿ.ಎ — ಪ್ರಥಮ
* ಶ್ರೀಜಿತ್ ಎಸ್.ಡಿ — ಪ್ರಥಮ ಬಿ.ಬಿ.ಎ — ದ್ವಿತೀಯ
* ಭುವನ್ ಕೆ.ಬಿ — ಪ್ರಥಮ ಬಿ.ಸಿ.ಎ — ಪ್ರಥಮ
* ಹರ್ಷಿತ ಕೆ.ಎನ್ — ಪ್ರಥಮ ಬಿ.ಸಿ.ಎ — ದ್ವಿತೀಯ
* ಪ್ರಣಿತ ಎಸ್ — ಪ್ರಥಮ ಬಿ.ಎಸ್ಸಿ — ಪ್ರಥಮ
* ವಿಷ್ಣು ಟಿ.ಜಿ— ಪ್ರಥಮ ಬಿ.ಎಸ್ಸಿ — ದ್ವಿತೀಯ
*ಎನ್.ಎಸ್.ಎಸ್.*
* ದೀಕ್ಷಿತ್ ಕೆ.ಎಂ — ತೃತೀಯ ಬಿ.ಕಾಂ — ಪ್ರಥಮ
* ನಿಷ್ಮಿತಾ ಎಸ್ ಎಂ— ತೃತೀಯ ಬಿ.ಕಾಂ — ಪ್ರಥಮ
*ಎನ್.ಸಿ.ಸಿ.*
* ಸಂದೇಶ್ — ತೃತೀಯ ಬಿ.ಎ — ಪ್ರಥಮ
* ಅರ್ಪಿತಾ ಕೆ.ಜಿ — ತೃತೀಯ ಬಿ.ಎ — ಪ್ರಥಮ
*ಎಸ್.ಡಿ. / ಎಸ್.ಡಬ್ಲ್ಯೂ.*
* ಯಶ್ವಂತ್ ಕೆ.ಎಂ — ಪ್ರಥಮ ವರ್ಷ ಎಸ್.ಡಿ — ಪ್ರಥಮ
* ಭುವಿನ್ ಡಿ.ಜಿ — ಪ್ರಥಮ ವರ್ಷ ಎಸ್.ಡಿ — ದ್ವಿತೀಯ
* ಒ.ಕೆ.ನಿಹಾರಿಕ — ಪ್ರಥಮ ವರ್ಷ ಎಸ್.ಡಬ್ಲ್ಯೂ — ಪ್ರಥಮ
* ದಿವ್ಯ — ಪ್ರಥಮ ವರ್ಷ ಎಸ್.ಡಬ್ಲ್ಯೂ — ದ್ವಿತೀಯ
* ರಕ್ಷಿತ ಹೆಚ್ — ಪ್ರಥಮ ವರ್ಷ ಎಸ್.ಡಬ್ಲ್ಯೂ — ದ್ವಿತೀಯ
* ಕೃಪಾಲ್ ಎನ್.ಜೆ — ದ್ವಿತೀಯ ವರ್ಷ ಎಸ್.ಡಿ — ಪ್ರಥಮ
* ಮನೋಜ್ ಕುಮರ್ ಎಂ.ಬಿ — ದ್ವಿತೀಯ ವರ್ಷ ಎಸ್.ಡಿ — ದ್ವಿತೀಯ
* ದೀಪಿಕ ಎಂ.ಜಿ — ದ್ವಿತೀಯ ವರ್ಷ ಎಸ್.ಡಬ್ಲ್ಯೂ — ಪ್ರಥಮ
* ಕಾವೇರಮ್ಮ ಹೆಚ್.ಸಿ — ದ್ವಿತೀಯ ವರ್ಷ ಎಸ್.ಡಬ್ಲ್ಯೂ — ದ್ವಿತೀಯ
* ಹರ್ಷದ್ ಕೆ.ಎ — ತೃತೀಯ ಬಿ.ಕಾಂ — ಪ್ರಥಮ
* ಸಂಗೀತ ಪಿ.ಎ — ತೃತೀಯ ಬಿ.ಎ — ಪ್ರಥಮ
* ಸಪ್ನ ಎಂ. ಶೆಟ್ — ತೃತೀಯ ಬಿ.ಕಾಂ — ಪ್ರಥಮ
* ಚೋಂದಮ್ಮ ಎಂ.ಯು — ತೃತೀಯ ಬಿ.ಕಾಂ — ಪ್ರಥಮ

















