ಆರೋಗ್ಯಕರ ಮಟನ್ ಸೂಪ್ ಮಾಡುವ

02/01/2023

ಬೇಕಾಗುವ ಸಾಮಾಗ್ರಿಗಳು :  ಕುರಿಯ ಕಾಲುಗಳು -4,  ಶುಂಠಿ-ಬೆಳ್ಳುಳ್ಳಿ ಪೇಸ್ಟ್ –  ಅರ್ಧ ಚಮಚ,  ಸಣ್ಣಗೆ ಹೆಚ್ಚಿದ ಈರುಳ್ಳಿ- 3,  ಹಸಿರು ಮೆಣಸಿನಕಾಯಿ -4 ರಿಂದ 6,  ಟೊಮೆಟೊ 1,  ಕೊತ್ತಂಬರಿ ಸೊಪ್ಪು – ಒಂದು ಬಟ್ಟಲು,
ಕೆಂಪು ಮೆಣಸಿನ ಪುಡಿ ಒಂದು ಚಮಚ, ಕರಿಮೆಣಸು ಪುಡಿ -1 ಚಮಚ,  ಎಣ್ಣೆ 3 ಚಮಚ,  ಗರಂ ಮಸಾಲ ಪುಡಿ 1 1/2 ಚಮಚ, ಅರಶಿನ ಪುಡಿ -ಅರ್ಧ ಚಮಚ, ಏಲಕ್ಕಿ 2 ರಿಂದ 4 ಕಾಳುಗಳು,  ರುಚಿಗೆ ತಕ್ಕಷ್ಟು ಉಪ್ಪು,  ಅಗತ್ಯಕ್ಕೆ ತಕ್ಕಂತೆ ನೀರು

ಮಾಡುವ ವಿಧಾನ :  ತಂದು ಇಟ್ಟಿರುವ ಅಂತಹ ಮಟನ್ ಕಾಲುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಅದನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ಅದೇ ಕುಕ್ಕರ್ ಗೆ ಅರಿಶಿನಪುಡಿ ಏಲಕ್ಕಿ ಪುಡಿ ಮತ್ತು ಕರಿಮೆಣಸು ಪುಡಿಯನ್ನು ಸೇರಿಸಿ. ಹಾಗೆ ಮುಂದೆ 5 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕುಕ್ಕರ್ ನಲ್ಲಿ ಬೇಯಿಸಿ. ( 4 ವಿಷಲ್).

ನಂತರ ಪ್ಯಾನ್ ನಲ್ಲಿ ಎಣ್ಣೆ ಹಾಕಿ ಚಿಕ್ಕದಾಗಿ ಹೆಚ್ಚಿರುವ ಈರುಳ್ಳಿ, ಸಣ್ಣಗೆ ಹೆಚ್ಚಿದ ಟೊಮೆಟೊ ಮತ್ತು ಹಸಿ ಮೆಣಸು ಸೇರಿಸಿ ಈರುಳ್ಳಿ ಕೆಂಪು ಬಣ್ಣಕ್ಕೆ ಬರುವಷ್ಟು ಕಾಲ ಅದನ್ನು ಬೇಯಿಸಿ, ಇದೀಗ ಅದೇ ಮಿಶ್ರಣಕ್ಕೆ ತಯಾರಿಸಿದಂತಹ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಬೆರೆಸಿ. ಇದನ್ನು ಕೇವಲ 30 ರಿಂದ 4೦ ಸೆಕೆಂಡುಗಳ ಕಾಲ ಮಾತ್ರ ಹುರಿಯಬೇಕು.

ನಂತರ  ಪ್ರೆಷರ್ ಕುಕ್ಕರ್ ಮುಚ್ಚಳ ತೆರೆಯಿರಿ ಮತ್ತು ತಯಾರ್ ಆಗಿರುವಂತಹ ಮಸಾಲೆಯನ್ನು ಹಾಕಿ ಸುಮಾರು ಹತ್ತು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುಕ್ಕರ್ ನಲ್ಲಿ ಬೇಯಿಸಿ.

ಕೊನೆಗೆ ಕುಕ್ಕರ್ ತಣ್ಣಗಾದ ನಂತರ ಸಣ್ಣಗೆ ಹೆಚ್ಚಿ ದಂತಹ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆಂದ ಕುರಿಯ ಕಾಲಿನಿಂದ ಬರುವ ಅಂಶಗಳು ಆರೋಗ್ಯಕ್ಕೆ ಅತ್ಯುತ್ತಮ ಮದ್ದಿನ ಮೂಲವಾಗಿದೆ.