Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಉಪಚುನಾವಣೆ ಉಸ್ತುವಾರಿಯಾಗಿ ಬಿ.ಎಸ್.ಆನಂದ್ ನೇಮಕ*
  • *ನಿಧನ ಸುದ್ದಿ*
  • *ಸೋಮವಾರಪೇಟೆ : ಕಲಾವಿದೆ ವರ್ಷಗೆ ಸನ್ಮಾನ*
  • *ಗಣಗೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ : ಬೆಳೆಗಾರರಲ್ಲಿ ಆತಂಕ* 
  • *ಕಣಿವೆ ಬ್ರಹ್ಮ ಶ್ರೀ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ : ಸೀತಾ ಕಲ್ಯಾಣೋತ್ಸವ*
  • *ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ : ಹೆಲ್ತಿ ಹ್ಯಾಬಿಟ್ ಹ್ಯಾಪಿ ಲೈಫ್ ಕಾಯಾ೯ಗಾರ : ತಂತ್ರಜ್ಞಾನದ ಹೆಚ್ಚಿನ ಬಳಕೆ ಮನಸ್ಸಿನ ಕ್ರಿಯಾಶೀಲತೆಯ ನಾಶಕ್ಕೆ ಕಾರಣವಾಗಬಹುದು : ಡಾ.ಶುಭಾ ಕೆ.ಜಿ ಎಚ್ಚರಿಕೆ*
  • *ಶ್ರೀಕೋದಂಡ ರಾಮೋತ್ಸವ ಸಮಿತಿಯಿಂದ ಶ್ರೀ ರಾಮೋತ್ಸವ ಭವ್ಯ ಮೆರವಣಿಗೆ*
  • *ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮೇಳ : ಯಶಸ್ಸಿಗೆ  ಪ್ರಾಂಶುಪಾಲರ ಮನವಿ*
  • *ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*
  • *ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ವಿರಾಜಪೇಟೆಯಲ್ಲಿ ಕಾಲ್ಚೆಂಡು ಪಂದ್ಯಾವಳಿ : ಸ್ನೇಹಿತರ ಬಳಗಕ್ಕೆ ಚಾಂಪಿಯನ್ ಪಟ್ಟ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆಯಲ್ಲಿ ಕಾಲ್ಚೆಂಡು ಪಂದ್ಯಾವಳಿ : ಸ್ನೇಹಿತರ ಬಳಗಕ್ಕೆ ಚಾಂಪಿಯನ್ ಪಟ್ಟ

ಜನವರಿ 2, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಜ.2 : ಆಕ್ಸ್‌ಫರ್ಡ್ ಎಫ್.ಸಿ. ವಿರಾಜಪೇಟೆ ಕೊಡಗು ವತಿಯಿಂದ ನಗರದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ 3ವರ್ಷದ ಅಖಿಲ ಭಾರತ ಪುರುಷರ ಮುಕ್ತ ನೈನ್ಸ್ (09) ರಾಷ್ಟ್ರ ಮಟ್ಟದ ಕಾಲ್ಚೆಂಡು ಪಂದ್ಯಾವಳಿ ನಡೆಯಿತು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಕಾಲ್ಚೆಂಡು ಒದೆಯುವ ಮೂಲಕ ಫೈನಲ್ ಪಂದ್ಯಾವಳಿಗೆ ಚಾಲನೆ ನೀಡಿ, ಶುಭಹಾರೈಸಿದರು.

ಭಾರತೀಯ ಸೇನೆಯ ಸೇನಾಧಿಕಾರಿ ಜೆ.ಸಿ.ಓ ಎಂ.ಎಲ್.ಲೋಹಿತ್ ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಕಾಣಬಹುದು. ಕ್ರೀಡೆಯಲ್ಲಿ ಸಾಧನೆ ಮಾಡಿದ ಯುವ ತರುಣರಿಗೆ ಸೇನೆಯಲ್ಲಿ ವಿಫಲ ಅವಕಾಶಗಳಿವೆ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಾರೀರಿಕ ವ್ಯಾಯಾಮ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೃಡಕಾಯ ದೇಹ ಸಿರಿಯನ್ನು ಗಳಿಸಬಹುದಾಗಿದೆ. ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಿದರು.

ವಿರಾಜಪೇಟೆ ಆಕ್ಸ್‍ಫರ್ಡ್ ಎಫ್.ಸಿ.ಅಧ್ಯಕ್ಷ ರೆನ್ಸಾನ್ ಚಾಕೋ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಗಲ್ಸ್ ಸ್ವೀಚ್‍ಗೆರ್ಸ್‍ನ ಪ್ರಧಾನ ನಿರ್ದೇಶಕರಾದ ಮಧು ನಾಣಯ್ಯ, ಕೊಡಗು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಕೆ.ಡಿ.ಎಫ್.ಎ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿಗಳಾದ ಈಶ್ವರ್, ಅಂತರ್ ರಾಷ್ಟ್ರೀಯ ರಗ್ಬಿ ಪಟು ಮಾದಂಡ ತಿಮ್ಮಯ್ಯ, ಹಿಂದೂ ಮಲಯಾಳಿ ಅಸೋಸಿಯೇಷನ್ ಅಧ್ಯಕ್ಷ ವಿನೂಪ್ ಕುಮಾರ್ ಎ., ಪುರಸಭೆಯ ಸದಸ್ಯರಾದ ಅಗಸ್ಟೀನ್ ಬೆನ್ನಿ, ಜೂನಾ ಸುನೀತಾ, ಡಿ.ಪಿ.ರಾಜೇಶ್ ಪದ್ಮನಾಭ, ಯೂನಿಯನ್ ಬ್ಯಾಂಕ್ ವಿರಾಜಪೇಟೆ ಶಾಖೆಯ ಹಿರಿಯ ವ್ಯವಸ್ಥಾಪಕ ಜಿಜೋ ಪಿ.ಜೆ. ಮತ್ತು ಶ್ರೀ ನಂದಿ ಜ್ಯುಲ್ಲರಿ ಮಾಲೀಕ ಅನಿಲ್ ಚೌದರಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಪ್ರಧಾನಿಗಳ ತಾಯಿ, ಪೀಲೆ ಸೇರಿದಂತೆ ಮೃತಪಟ್ಟ ಕ್ರೀಡಾ ಕಲಿಗಳಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.

ಕ್ರೀಡಾ ವರದಿ: ಪಂದ್ಯಾವಳಿಯಲ್ಲಿ ಒಟ್ಟು 20 ತಂಡಗಳು ಭಾಗವಹಿದ್ದವು, ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಕೇರಳ ರಾಜ್ಯದ ವೈನಾಡ್ ಮತ್ತು ಮಲಪುರಂ, ತಮಿಳುನಾಡಿನ ಚೆನೈ ತಂಡಗಳು ಪಂದ್ಯಾಟದಲ್ಲಿ ಭಾಗಿಗಳಾದವು. ದೇಶೀಯ, ವಿಭಾಗಿಯ ಮಟ್ಟದಲ್ಲಿ ಮತ್ತು ದೇಶದ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಭಾಗಿಗಳಾಗಿರುವುದು ವಿಶೇಷವಾಗಿತ್ತು.
ಮಹಿಳಾ ಪುಟ್ಬಾಲ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದೆ ಪ್ರಥಮ ಬಾರಿಗೆ ಮಹಿಳಾ ಫುಟ್ಬಾಲ್ ಪ್ರದರ್ಶನ ಪಂದ್ಯಾವಳಿ ನಡೆಯಿತು.
ಪಂದ್ಯಾವಳಿಯಲ್ಲಿ ಆಕ್ಸ್‍ಫರ್ಡ್ ಎಫ್.ಸಿ. ವಿರಾಜಪೇಟೆ ಮತ್ತು ವೈಷ್ಣವಿ ಎಫ್.ಸಿ. ಮರಗೋಡು ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಆಕ್ಸ್‍ಫರ್ಡ್ ಎಫ್.ಸಿ. ವಿರಾಜಪೇಟೆ ತಂಡವು 1-0 ಗೋಲುಗಳಿಂದ ವಿಜೇತವಾಯಿತು.
ಪುರುಷರ ವಿಭಾಗದಲ್ಲಿ ಪ್ರಥಮ ಸೆಮಿಫೈನಲ್ ಪಂದ್ಯಾವಳಿಯು ಸರ್ಕಾರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ತಂಡ ಮತ್ತು ಸ್ನೇಹಿತರ ಬಳಗ ಎಫ್.ಸಿ ವಿರಾಜಪೇಟೆ ತಂಡಗಳ ಮದ್ಯೆ ನಡೆದು ಸ್ನೇಹಿತರ ಬಳಗ ತಂಡವು 3-0 ಗೋಲುಗಳಿಂದ ಫೈನಲ್ ಪ್ರವೇಶ ಪಡೆಯಿತು. ದ್ವೀತಿಯ ಸೆಮಿಫೈನಲ್ ಪಂದ್ಯದಲ್ಲಿ ಪ್ರಗತಿ ಎಫ್.ಸಿ ವಿರಾಜಪೇಟೆ ಮತ್ತು ವಿಜಯನಗರ ಎಫ್.ಸಿ. ಮೈಸೂರು ತಂಡಗಳ ನಡುವೆ ನಡೆದು 1-0 ಗೋಲುಗಳಿಂದ ಮೈಸೂರು ತಂಡವನ್ನು ಮಣಿಸಿ ಫೈನಲ್‍ಗೆ ಆರ್ಹತೆ ಪಡೆಯಿತು.

ಪ್ರಗತಿ ಎಫ್.ಸಿ ವಿರಾಜಪೇಟೆ ಮತ್ತು ಸ್ನೇಹಿತರ ಬಳಗ ಎಫ್.ಸಿ ನಡುವೆ ನಡೆದ ಫೈನಲ್ ಪಂದ್ಯಾವಳಿಯು ರೋಚಕತೆಯಿಂದ ಕೂಡಿದ್ದು, ಪ್ರಥಮಾರ್ಧದವರೆಗೆ ಯಾವುದೇ ಗೋಲುಗಳಿಸಲು ಉಬಯ ತಂಡಗಳು ವಿಫಲವಾಯಿತು. ದ್ವಿತೀಯಾರ್ಧದಲ್ಲಿ ಬಲಿಷ್ಟವಾದ ಪ್ರಗತಿ ಎಫ್.ಸಿ ತಂಡ, ಸ್ನೇಹಿತರ ಬಳಗ ಉದನ್ಮೂಕ ಮುನ್ನಡೆ ಆಟಗಾರ ಪ್ರಥಮ ಗೋಲುಗಳಿಸಲು ಶಕ್ತರಾದರು. ಕೆಲವು ನಿಮಿಷಗಳ ನಂತರ ಮತ್ತೊಂದು ಗೋಲು ದಾಖಲಾಯಿತು. ಪ್ರಗತಿ ಎಫ್.ಸಿ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಸ್ನೇಹಿತರ ಬಳಗ ತಂಡವು ಅಖಿಲ ಭಾರತ ಕಾಲ್ಚೆಂಡು ಪಂದ್ಯಾವಳಿಯ ಚಾಂಪಿಯನ್ ಪಟ್ಟ ಅಲಂಕರಿಸಿತು.

ವಿಜೇತ ತಂಡಕ್ಕೆ 1 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ, ಪರಾಜಿತ ತಂಡಕ್ಕೆ 75 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.
ಪಂದ್ಯಾವಳಿಯ ಅತ್ಯುತ್ತಮ ತಂಡ ವಿಜಯನಗರ ಮೈಸೂರು, ಉತ್ತಮ ಆಟಗಾರ, ಉತ್ತಮ ಮುನ್ನಡೆ ಆಟಗಾರ, ಉತ್ತಮ ಗೋಲು, ಭರವಸೆಯ ಆಟಗಾರ, ಅತ್ಯಧಿಕ ಗೋಲು, ಉತ್ತಮ ಮಹಿಳಾ ಆಟಗಾರ್ಥಿ ಪ್ರಶಸ್ತಿ, ಪಂದ್ಯ ಪುರುಶೋತ್ತಮ ವ್ಯಯುಕ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ದರ್ಶನ್, ಧೀರಜ್, ಸಂತೋಷ್ ಮತ್ತು ಇಮ್ರಾನ್ ಖಾನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಆಕ್ಸ್‍ಫರ್ಡ್ ಎಫ್.ಸಿ. ವಿರಾಜಪೇಟೆ ಕೊಡಗು ಸಂಸ್ಥೆಯ ಸರ್ವ ಸದಸ್ಯರು ಸೇರಿದಂತೆ ವಿವಿಧ ತಂಡಗಳ ಆಟಗಾರರು, ಮಾಲೀಕರು, ನಗರ ಮತ್ತು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದರು.

ವರದಿ : ಕಿಶೋರ್ ಕುಮಾರ್ ಶೆಟ್ಟಿ 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಉಪಚುನಾವಣೆ ಉಸ್ತುವಾರಿಯಾಗಿ ಬಿ.ಎಸ್.ಆನಂದ್ ನೇಮಕ*

ಮಾರ್ಚ್ 27, 2026

*ನಿಧನ ಸುದ್ದಿ*

ಮಾರ್ಚ್ 26, 2026

*ಸೋಮವಾರಪೇಟೆ : ಕಲಾವಿದೆ ವರ್ಷಗೆ ಸನ್ಮಾನ*

ಮಾರ್ಚ್ 26, 2026

*ನಿಧನ ಸುದ್ದಿ*

ಮಾರ್ಚ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ ಮಾ.26 NEWS DESK : ಹಿರಿಕರ ಗ್ರಾಮ ನಿವಾಸಿ ಹೆಚ್.ಡಿ.ಲತ(58) ನಿಧನರಾಗಿದ್ದಾರೆ. ಮೃತರು ಪತಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.…

*ಸೋಮವಾರಪೇಟೆ : ಕಲಾವಿದೆ ವರ್ಷಗೆ ಸನ್ಮಾನ*

ಮಾರ್ಚ್ 26, 2026

*ಗಣಗೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ : ಬೆಳೆಗಾರರಲ್ಲಿ ಆತಂಕ* 

ಮಾರ್ಚ್ 26, 2026

*ಕಣಿವೆ ಬ್ರಹ್ಮ ಶ್ರೀ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ : ಸೀತಾ ಕಲ್ಯಾಣೋತ್ಸವ*

ಮಾರ್ಚ್ 26, 2026

*ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ : ಹೆಲ್ತಿ ಹ್ಯಾಬಿಟ್ ಹ್ಯಾಪಿ ಲೈಫ್ ಕಾಯಾ೯ಗಾರ : ತಂತ್ರಜ್ಞಾನದ ಹೆಚ್ಚಿನ ಬಳಕೆ ಮನಸ್ಸಿನ ಕ್ರಿಯಾಶೀಲತೆಯ ನಾಶಕ್ಕೆ ಕಾರಣವಾಗಬಹುದು : ಡಾ.ಶುಭಾ ಕೆ.ಜಿ ಎಚ್ಚರಿಕೆ*

ಮಾರ್ಚ್ 26, 2026

*ಶ್ರೀಕೋದಂಡ ರಾಮೋತ್ಸವ ಸಮಿತಿಯಿಂದ ಶ್ರೀ ರಾಮೋತ್ಸವ ಭವ್ಯ ಮೆರವಣಿಗೆ*

ಮಾರ್ಚ್ 26, 2026

*ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮೇಳ : ಯಶಸ್ಸಿಗೆ  ಪ್ರಾಂಶುಪಾಲರ ಮನವಿ*

ಮಾರ್ಚ್ 26, 2026

*ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*

ಮಾರ್ಚ್ 26, 2026

*ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ*

ಮಾರ್ಚ್ 26, 2026

*ರೋಟರಿ ಮಡಿಕೇರಿಯಿಂದ ದಹನ ಯಂತ್ರ ವಿತರಣೆ*

ಮಾರ್ಚ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.