Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ-ಸೋಮವಾರಪೇಟೆ : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಯ ಆಯ್ಕೆಪಟ್ಟಿ ಪ್ರಕಟ*
  • *ಮಡಿಕೇರಿ : ಜೂ.20 ರಂದು ನೇರ ಸಂದರ್ಶನ*
  • *ಪ್ರವಾಸಿಗರಿಗೆ ಕೊಡಗು ಜಿಲ್ಲೆಯ ಪ್ರವಾಸವನ್ನು ಸ್ಮರಣೀಯವಾಗಿಸಿ : ಶಶಿಧರ್*
  • *ಮರಾಠ-ಮರಾಟಿ ಸಮಾಜ ಸೇವಾ ಸಂಘದ 30ನೇ ವಾರ್ಷಿಕೋತ್ಸವ : ಸಭಾಭವನ ಕಾಮಗಾರಿ ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯ : ಎಂ.ಎಂ.ಪರಮೇಶ್ವರ್*
  • *ಮಡಿಕೇರಿಯಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಜಾಥಾ : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ : ಡಾ.ಜಿ.ಶೈಲಜಾ*
  • *ಮತದಾರರ ಪಟ್ಟಿಯಿಂದ ಅರ್ಹರು ಬಿಟ್ಟು ಹೋಗದಂತೆ ಎಚ್ಚರ ವಹಿಸಿ: ತಹಶೀಲ್ದಾರ್ ಶ್ರೀಧರ*
  • *ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾದ ಸಂಸದ ಯದುವೀರ್ ಒಡೆಯರ್ : ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹಾಗೂ ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ನಗರ ವನ ಯೋಜನೆ ಜಾರಿಗೆ ಮನವಿ*
  • *ಮೂರ್ನಾಡು : ಜೂ.16 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
  • *ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಡಾ.ಮಂತರ್ ಗೌಡ : ಕೊಡಗು ಅಭಿವೃದ್ಧಿ ಕುರಿತು ಚರ್ಚೆ*
  • *ಕಡಗದಾಳು ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ : ಪರಿಶೀಲನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ರಾಷ್ಟ್ರೀಯ ಗ್ರಾಹಕರ ದಿನಾಚರಣೆ : ಗ್ರಾಹಕರೇ ವಂಚನೆಗೆ ತುತ್ತಾಗಬೇಡಿ, ದೂರು ನೀಡಲು ಹಿಂಜರಿಯಬೇಡಿ : ಗೌರಮ್ಮಣ್ಣಿ ಕಿವಿಮಾತು
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ರಾಷ್ಟ್ರೀಯ ಗ್ರಾಹಕರ ದಿನಾಚರಣೆ : ಗ್ರಾಹಕರೇ ವಂಚನೆಗೆ ತುತ್ತಾಗಬೇಡಿ, ದೂರು ನೀಡಲು ಹಿಂಜರಿಯಬೇಡಿ : ಗೌರಮ್ಮಣ್ಣಿ ಕಿವಿಮಾತು

ಜನವರಿ 11, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.11 : ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ‘ಗ್ರಾಹಕರೇ ದೊರೆಗಳು’ ಎಂಬುದನ್ನು ಯಾರೂ ಸಹ ಮರೆಯಬಾರದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗೌರಮ್ಮಣ್ಣಿ  ಅವರು ಪ್ರತಿಪಾದಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ವಸ್ತು/ಪದಾರ್ಥಗಳನ್ನು ಕೊಳ್ಳುವುದು ಹೆಚ್ಚಾಗಿದೆ. ಗ್ರಾಹಕರಿಗೆ ಮೋಸ, ವಂಚನೆ ಉಂಟಾದಲ್ಲಿ ಗ್ರಾಹಕರ ಹಕ್ಕುಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಜಾಹೀರಾತು ನೋಡಿ ಪದಾರ್ಥ/ವಸ್ತುಗಳನ್ನು ಖರೀದಿ ಮಾಡಬಾರದು. ಅದರ ಗುಣಮಟ್ಟ ಪರಿಶೀಲಿಸಿ ಕೊಳ್ಳುವಂತಾಗಬೇಕು. ಜಾಹೀರಾತುಗೆ ಯಾರೂ ಸಹ ಮರಳು ಆಗಬಾರದು ಎಂದು ಅವರು ಹೇಳಿದರು.
ಯಾವ ಸ್ಥಳದಲ್ಲಿಯೇ ಪದಾರ್ಥ/ವಸ್ತುಗಳನ್ನು ಕೊಂಡಿದ್ದರೂ ಸಹ, ತಾವು ವಾಸಿಸುವ ಸ್ಥಳದಲ್ಲಿಯೇ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆಯಬಹುದು. ಗ್ರಾಹಕರು ಎಷ್ಟೇ ಜಾಗೃತರಾಗಿದ್ದರೂ ಸಹ ಮೈಮರೆಯುತ್ತಾರೆ. ಆದ್ದರಿಂದ ವಸ್ತುಗಳ ಬೆಲೆ ನಿಖರವಾಗಿ ನಮೂದು ಆಗಿರುವ ಬಗ್ಗೆ ಗಮನಿಸಬೇಕು. ಜೊತೆಗೆ ಬಳಕೆ ಅವಧಿ ಪರಿಶೀಲಿಸಬೇಕು. ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು ಎಂದು ಗೌರಮ್ಮಣ್ಣಿ ಅವರು ಸಲಹೆ ಮಾಡಿದರು.
ಕೊಡಗು ಜಿಲ್ಲೆಯ ಗ್ರಾಹಕರ ವೇದಿಕೆಗೆ ಇದುವರೆಗೆ 4,164 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 64 ಪ್ರಕರಣಗಳು ಮಾತ್ರ ಇತ್ಯರ್ಥಕ್ಕೆ ಬಾಕಿ ಇದೆ ಎಂದು ಅವರು ತಿಳಿಸಿದರು.
ಗ್ರಾಹಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗ್ರಾಹಕರ ವೇದಿಕೆ ಕಾರ್ಯ ನಿರ್ವಹಿಸುತ್ತಿದೆ. ಗ್ರಾಹಕರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಪರಿಹಾರ ಪಡೆಯಬಹುದಾಗಿದೆ. ಗ್ರಾಹಕರ ದೂರುಗಳಿಗೆ ಸಂಬಂಧಿಸಿದಂತೆ 5 ಲಕ್ಷ ರೂ. ವರೆಗೆ ಯಾವುದೇ ಶುಲ್ಕ ಭರಿಸುವ ಅಗತ್ಯವಿಲ್ಲ ಎಂದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ರೇಣುಕಾಂಭ ಅವರು ಮಾತನಾಡಿ ವೈದ್ಯ ವೃತ್ತಿಯನ್ನು ಹಣ, ಅಂತಸ್ತಿನಿಂದ ಅಳೆಯುವಂತದ್ದಲ್ಲ, ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ನೋವು ಬಂದಾಗ ವೈದ್ಯರ ಬಳಿ ಹೋಗುತ್ತೇವೆ. ಪ್ರತಿಯೊಬ್ಬರೂ ಗ್ರಾಹಕರಾಗಿರುತ್ತಾರೆ. ಆದ್ದರಿಂದ ಸಮಾಜಕ್ಕೆ ಪ್ರತಿಯೊಬ್ಬರೂ ಒಳಿತು ಮಾಡಬೇಕು ಎಂದರು.
ಯಾರೂ ಸಹ ವಂಚಿಸಬಾರದು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೋಸ ಹೋಗುವವರು ಇರುತ್ತಾರೆ. ಅದನ್ನು ತಪ್ಪಿಸಬೇಕು. ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಇರಬೇಕು. ಪದಾರ್ಥಗಳನ್ನು ಕೊಳ್ಳುವಾಗ ಎಚ್ಚರವಹಿಸಬೇಕು. ಅನ್ಯಾಯ ಸಹಿಸಿಕೊಳ್ಳಬಾರದು ಎಂದರು.
ವಕೀಲರಾದ ಎಂ.ಎ.ನಿರಂಜನ ಅವರು ಮಾತನಾಡಿ ಎಲ್ಲಾ ಹಂತದಲ್ಲಿಯೂ ಹಾಗೂ ಎಲ್ಲಾ ಕ್ಷೇತ್ರದಲ್ಲಿಯೂ ಗ್ರಾಹಕರ ಸ್ನೇಹಿಯಾಗಿರಬೇಕು. ನಮ್ಮ ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ಮತ್ತೊಬ್ಬರ ಗ್ರಾಹಕ ಹಕ್ಕು ಸಂರಕ್ಷಣೆ ಮಾಡಬಹುದಾಗಿದೆ ಎಂದರು.
ಗ್ರಾಹಕರ ವೇದಿಕೆಯಲ್ಲಿ ಗ್ರಾಹಕರಿಗೆ ನ್ಯಾಯ ಒದಗಿಸಲಾಗುತ್ತದೆ. ಉಚಿತ ಸೇವೆ ಅಥವಾ ಪಡೆಯುವ ಪದಾರ್ಥಗಳಿಗೆ ಗ್ರಾಹಕರ ಹಕ್ಕು ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಜಾಗೃತಿಯಿಂದ ಕೆಲಸ ಮಾಡಿದರೆ ಗ್ರಾಹಕರಿಗೆ ಮೋಸ, ವಂಚನೆ ಕಡಿಮೆಯಾಗುತ್ತದೆ. ಯಾವುದೇ ಪದಾರ್ಥ/ ವಸ್ತು ಕೊಳ್ಳುವಾಗ ವಾರಂಟಿ ಮತ್ತು ಗ್ಯಾರಂಟಿಯನ್ನು ಗಮನಿಸಬೇಕು. ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗೆ ಎರಡು ವರ್ಷದವರೆಗೆ ದೂರು ಸಲ್ಲಿಸಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ತಿಳಿದು, ತಿಳಿಯದೆಯೋ ಮೋಸ ವಂಚನೆಗೆ ತುತ್ತಾಗುತ್ತೇವೆ. ಮೋಸ ವಂಚನೆಗೆ ತುತ್ತಾದಲ್ಲಿ, ಗ್ರಾಹಕರ ವೇದಿಕೆಗೆ ದೂರು ನೀಡಿ ಪರಿಹಾರ ಪಡೆಯುವಂತಾಗಬೇಕು ಎಂದರು.
ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಎ.ಎ.ಚಂಗಪ್ಪ ಅವರು ಮಾತನಾಡಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವು ಜಿಲ್ಲೆಯ 51 ಪ್ರೌಢಶಾಲೆಗಳಲ್ಲಿ ಗ್ರಾಹಕರ ಕ್ಲಬ್‌ಗಳನ್ನು ಆರಂಭಿಸಿ, ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೆಶಕರಾದ ಕುಮುದಾ ಶರತ್ ಅವರು ಮಾತನಾಡಿ ಇಲಾಖೆಯು ಆಹಾರ ಭದ್ರತೆ ಒದಗಿಸುವುದು ಅತೀ ಮುಖ್ಯವಾಗಿದೆ. ಜೊತೆಗೆ ಪೆಟ್ರೋಲಿಯಂ ಉತ್ಪನ್ನಗಳ ಬಗ್ಗೆ ಗಮನಿಸುವುದು. ಗ್ರಾಹಕರಿಗೆ ಮೋಸ ವಂಚನೆ ಉಂಟಾಗದAತೆ ಜಾಗೃತಿ ಮೂಡಿಸುವುದು ಪ್ರಮುಖ ಕಾರ್ಯವಾಗಿದೆ ಎಂದು ಅವರು ಹೇಳಿದರು.
ಕೊಡಗು ವೈದೈಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ, ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ತೂಕ, ಅಳತೆ ಮತ್ತು ಕಾನೂನು ಮಾಪನ ಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕರಾದ ಡಿ.ಆರ್.ಲಿಂಗರಾಜು ಇತರರು ಇದ್ದರು. ವೀಣಾ ಪ್ರಾರ್ಥಿಸಿದರು. ಬಿರೇಶ್ ನಿರೂಪಿಸಿ, ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ-ಸೋಮವಾರಪೇಟೆ : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಯ ಆಯ್ಕೆಪಟ್ಟಿ ಪ್ರಕಟ*

ಜೂನ್ 16, 2026

*ಮಡಿಕೇರಿ : ಜೂ.20 ರಂದು ನೇರ ಸಂದರ್ಶನ*

ಜೂನ್ 16, 2026

*ಪ್ರವಾಸಿಗರಿಗೆ ಕೊಡಗು ಜಿಲ್ಲೆಯ ಪ್ರವಾಸವನ್ನು ಸ್ಮರಣೀಯವಾಗಿಸಿ : ಶಶಿಧರ್*

ಜೂನ್ 16, 2026

*ಮಡಿಕೇರಿ : ಜೂ.20 ರಂದು ನೇರ ಸಂದರ್ಶನ*

ಜೂನ್ 16, 2026 ಇತ್ತೀಚಿನ ಸುದ್ದಿಗಳು ಉದ್ಯೋಗ ಭಾಗ್ಯ ಕೊಡಗು ಜಿಲ್ಲೆ

ಮಡಿಕೇರಿ ಜೂ.16 NEWS DESK : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ, ಕೊಡಗು ಜಿಲ್ಲೆ, ಇವರ ವತಿಯಿಂದ ಜೂನ್,…

*ಪ್ರವಾಸಿಗರಿಗೆ ಕೊಡಗು ಜಿಲ್ಲೆಯ ಪ್ರವಾಸವನ್ನು ಸ್ಮರಣೀಯವಾಗಿಸಿ : ಶಶಿಧರ್*

ಜೂನ್ 16, 2026

*ಮರಾಠ-ಮರಾಟಿ ಸಮಾಜ ಸೇವಾ ಸಂಘದ 30ನೇ ವಾರ್ಷಿಕೋತ್ಸವ : ಸಭಾಭವನ ಕಾಮಗಾರಿ ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯ : ಎಂ.ಎಂ.ಪರಮೇಶ್ವರ್*

ಜೂನ್ 16, 2026

*ಮಡಿಕೇರಿಯಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಜಾಥಾ : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ : ಡಾ.ಜಿ.ಶೈಲಜಾ*

ಜೂನ್ 16, 2026

*ಮತದಾರರ ಪಟ್ಟಿಯಿಂದ ಅರ್ಹರು ಬಿಟ್ಟು ಹೋಗದಂತೆ ಎಚ್ಚರ ವಹಿಸಿ: ತಹಶೀಲ್ದಾರ್ ಶ್ರೀಧರ*

ಜೂನ್ 16, 2026

*ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾದ ಸಂಸದ ಯದುವೀರ್ ಒಡೆಯರ್ : ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹಾಗೂ ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ನಗರ ವನ ಯೋಜನೆ ಜಾರಿಗೆ ಮನವಿ*

ಜೂನ್ 16, 2026

*ಮೂರ್ನಾಡು : ಜೂ.16 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಜೂನ್ 15, 2026

*ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಡಾ.ಮಂತರ್ ಗೌಡ : ಕೊಡಗು ಅಭಿವೃದ್ಧಿ ಕುರಿತು ಚರ್ಚೆ*

ಜೂನ್ 15, 2026

*ಕಡಗದಾಳು ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ : ಪರಿಶೀಲನೆ*

ಜೂನ್ 15, 2026

*ವಿ.ಬಾಡಗ ಗ್ರಾಮದಲ್ಲಿ ಕ್ರೀಡಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ನಿರ್ಮಾಣ : ರೂ.45 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ : ಶಾಸಕ ಎ.ಎಸ್.ಪೊನ್ನಣ್ಣ*

ಜೂನ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.