ಮಡಿಕೇರಿ ಫೆ.3 : ತಾಲ್ಲೂಕಿನ ಮರಗೋಡು ಗ್ರಾಮದ ನಿವಾಸಿ ಪಿ.ಜಿ.ರುಕ್ಮಿಣಿ (70) ಎಂಬುವವರು ಫೆ.1 ರಿಂದ ನಾಪತ್ತೆಯಾಗಿರುವ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎತ್ತರ 5 ಅಡಿ, ಕಪ್ಪು ಬಟ್ಟೆಯಲ್ಲಿ ಬಿಳಿ ಹೂಗಳಿರುವ ನೈಟಿ, ಕಾಲಿಗೆ ಗಂಬೂಟು ಹಾಕಿದ್ದಾರೆ. ಅರೆಗನ್ನಡ ಮತ್ತು ಕನ್ನಡ ಮಾತನಾಡುತ್ತಾರೆ. ಗೋಧಿ ಬಣ್ಣ, ತೆಳ್ಳಗಿನ ಶರೀರ, ಗೌಡ ಜನಾಂಗಕ್ಕೆ ಸೇರಿದವರಾಗಿದ್ದಾರೆ.
ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪೊಲೀಸ್ ಉಪನಿರೀಕ್ಷಕರು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ 08272-228777 ಅಥವಾ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ 08272- 229000 ನ್ನು ಸಂಪರ್ಕಿಸಬಹುದೆAದು ಪೊಲೀಸ್ ಪ್ರಕಟಣೆ ಕೋರಿದೆ.








