Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆ ಪೀಠೋಪಕರಣ ತಯಾರಕರ ಹಾಗೂ ಕಾರ್ಮಿಕರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಸಿ.ವಿಜಯಕುಮಾರ್ ಆಯ್ಕೆ*
  • *ಕೊಡಗು ಪ್ರೆಸ್ ಕ್ಲಬ್ ಖಜಾಂಚಿಯಾಗಿ ಮನೋಜ್ ಆಯ್ಕೆ*
  • *ಮೂರ್ನಾಡು : ಜು.15 ಮತ್ತು 16 ರಂದು ವಿದ್ಯುತ್ ವ್ಯತ್ಯಯ*
  • *ಹೆಗ್ಗಳ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ನೋಟ್ ಬುಕ್ ವಿತರಣೆ*
  • *ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ರೂ.20,20,350 ಮೊತ್ತದ ವಿವಿಧ ಮಾದಕ ವಸ್ತುಗಳ ನಾಶ*
  • *ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ*
  • *ಸೋಮವಾರಪೇಟೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ : ವೈದ್ಯಾಧಿಕಾರಿಗಳಿಗೆ ಸನ್ಮಾನ*
  • *ಅರೆಯೂರಿನಲ್ಲಿ ಶ್ರೀ ಸೋಮೇಶ್ವರ ದೇವಾಲಯದ ನೂತನ ಗರ್ಭಗೃಹಕ್ಕೆ ಗರ್ಭನ್ಯಾಸ*
  • *ಮಾಜಿ ಸಚಿವರ ಕಾಫಿ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ*
  • *ಮಳೆಹಾನಿ : ಶಾಸಕ ಡಾ.ಮಂತರ್ ಗೌಡ ಭೇಟಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಯುಕೊ ಸಂಘಟನೆಯಿಂದ ಸಾಂಪ್ರದಾಯಿಕವಾಗಿ ಜರುಗಿದ ಬೇದ ಚಂಗ್ರಾಂದಿ ಆಚರಣೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಯುಕೊ ಸಂಘಟನೆಯಿಂದ ಸಾಂಪ್ರದಾಯಿಕವಾಗಿ ಜರುಗಿದ ಬೇದ ಚಂಗ್ರಾಂದಿ ಆಚರಣೆ

ಫೆಬ್ರವರಿ 16, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.16 :  ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕಿರುಗೂರು ಗ್ರಾಮದ ಚೆಪ್ಪುಡಿರ ಸುಜು ಕರುಕಬಯ್ಯನವರ ಗದ್ದೆಯಲ್ಲಿ ಯುಕೊ ಸಂಘಟನೆಯ ನಾಲ್ಕನೇ ವರ್ಷದ ಬೇದ ಚಂಗ್ರಾಂದಿಯ ಆಚರಣೆ ನಡೆಯಿತು.
ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಗದ್ದೆಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಿ, ಸಾಂಪ್ರದಾಯಿಕವಾಗಿ ಕೈಎಣ್ಣೆಯನ್ನು ಭೂಮಿಗೆ ಸುರಿದು, ಮರದ ಬಾಚಣಿಕೆಯನ್ನಿಟ್ಟು, ” ಭೂಮಿತಾಯಿ ನೀಡ ಉಟ್ಟಿಮಂಡೆ ಕಾಂಜದ್ ತಂಪಾಡ್ – ಕುಂಬ್ಯಾತ್ ಮಳೆ ಆಯಿತ್ ಕಂದ್ ಲೂ ಕೂಳಾಡ್ ” ಎಂದು ಹೇಳುವುದರ ಮೂಲಕ ಭೂಮಿತಾಯಿಯನ್ನು ಸ್ಮರಿಸಿದರು.

ನಂತರ ಸುಜು ಕರುಂಬಯ್ಯ ನವರ ಮನೆಯಲ್ಲಿ ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಒಂದು ಮಗುವಿನ ಸಮಗ್ರ ಬೆಳವಣಿಗೆಯ ಹಿಂದೆ ಒಬ್ಬ ತಾಯಿಯ ಪ್ರಭಾವ ಮಹತ್ವದ ಪಾತ್ರ ನಿರ್ವಹಿಸುವ ಹಾಗೆ ಒಂದು ಸಮುದಾಯದ ಸಮಗ್ರ ಬೆಳವಣಿಗೆಯಲ್ಲಿ ಭೂಮಿ ತಾಯಿಯ ಪ್ರಭಾವವೂ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಇದರ ಬಾಂಧವ್ಯದ ಸಂಕೇತವಾಗಿ ಕೊಡವರು ಬೇದ ಚಂಗ್ರಾಂದಿಯನ್ನು ಆಚರಣೆ ಮಾಡುತ್ತಾರೆ ಎಂದು  ಹೇಳಿದರು.

ಅನಾದಿಕಾಲದಿಂದಲೂ ಕೊಡವರು ತಮ್ಮದೇ ಆದ ಸ್ವಂತ ಶಕ್ತಿಯಿಂದ, ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಪಾಲಿಸುತ್ತ ನಂಬಿಕೆಗಳನ್ನು ಉಳಿಸಿಕೊಳ್ಳುವುದರ ಮೂಲಕ ತಮ್ಮ ಏಳಿಗೆಯನ್ನು ಕಂಡುಕೊಂಡ ಅಪರೂಪದ ಜನಾಂಗವಾಗಿದೆ. ಇತಿಹಾಸದಿಂದಲೇ ಯಾವುದೇ ರಾಜರಿಂದಾಗಲಿ, ರಾಜಕೀಯದಿಂದಾಗಲಿ ಕೊಡವರಿಗೆ ಅನುಕೂಲಗಳಾದ ಉದಾಹರಣೆಗಳೇ ಇಲ್ಲ. ಈಗಲೂ ಸಹ ಯಾವುದೇ ರಾಜಕೀಯ ಪಕ್ಷ ಅಥವಾ ಮುಖಂಡರುಗಳಿಂದ ಕೊಡವರಿಗೆ ಒಳಿತಾಗುತ್ತದೆ ಎಂಬುವುದು ಕೇವಲ ಭ್ರಮೆ. ಆದ್ದರಿಂದ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವತ್ತ ನಾವೇ ಗಮನ ಹರಿಸುವುದರ ಮೂಲಕ ನಮ್ಮನ್ನು ನಾವು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಪಾಡಿಕೊಳ್ಳಲು ಕರೆ ನೀಡಿದರು.

ಪ್ರಪಂಚದಾದ್ಯಂತ ಹರಡಿರುವ ಕೊಡವರು ಕನಿಷ್ಠ ಹಬ್ಬ ಹರಿದಿನಗಳು, ಕಾರೋಣಂಗ್ ಕೊಡ್ಪ ಕಾರ್ಯಕ್ರಮಗಳಿಗಾದರೂ ತಮ್ಮ ನೆಲೆಗೆ ಮರಳುವಂತಾಗಬೇಕು. ಆ ಮೂಲಕ ತಾವು ಹುಟ್ಟಿದ ಮಣ್ಣಿನ ಬಾಂಧವ್ಯ ಉಳಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಾವು ಭೌತಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಏಳಿಗೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕೊಡವರನ್ನು ಹೊರತು ಪಡಿಸಿದಂತೆ ಎಲ್ಲಾ ಸಮುದಾಯಗಳ ಜನಾಂಗೀಯ ಹಾಗೂ ಧಾರ್ಮಿಕ ನಿರ್ಧಾರ ಗಳು ಆಯಾ ಜನಾಂಗೀಯ ಹಾಗೂ ಧಾರ್ಮಿಕ ಮುಖಂಡರಿಂದಲೇ ಆಗುತ್ತಿದೆ. ದುರದೃಷ್ಟವಶಾತ್ ಕೊಡವ ಸಮುದಾಯದ ಜನಾಂಗೀಯ ಹಾಗೂ ಧಾರ್ಮಿಕ ನಿರ್ಧಾರಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಅಧಿಕವಾಗಿದ್ದು, ಇದುವೇ ಸಮುದಾಯಕ್ಕೆ ಮಾರಕವಾಗುತ್ತಿದೆ ಎಂದು  ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮೊದಲಿಗೆ ತಪ್ಪಡಕ ಕಟ್ಟಿ ಪ್ರಾರ್ಥಿಸಲಾಯಿತು. ಚೆಪ್ಪುಡಿರ ಸುಜು ಕರುಂಬಯ್ಯ ಸ್ವಾಗತಿಸಿದರು.
ಸಭೆಯಲ್ಲಿ ಚೆಪ್ಪುಡಿರ ಪ್ರತಿಮ ಕರುಂಬಯ್ಯ, ಪನ್ನಗಾ ಕರುಂಬಯ್ಯ, ಕಿರಣ್ ಸುಬ್ಬಯ್ಯ, ರೆಣು ಸುಬ್ಬಯ್ಯ, ಆಪಟ್ಟಿರ ಜಾನಕಿ ಚಂಗಪ್ಪ, ಚಕ್ಕೇರ ರಂಜಿತ್, ಸುಮ ರಂಜಿತ್, ಕೃಷಿಕಾ ರಂಜಿತ್, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಸುಮಿ ರಾಬಿನ್, ದೀನ ಉತ್ತಪ್ಪ, ತನ್ವಿ ಉತ್ತಪ್ಪ, ನೆಲ್ಲಮಕ್ಕಡ ಮಾದಯ್ಯ, ಮಚ್ಚಾಮಾಡ ಅರುಣ್ ಸೋಮಯ್ಯ, ಪ್ರೀಯಾ ಅರುಣ್, ಅಜಿನಿಕಂಡ ಸೂರಜ್ ತಿಮ್ಮಯ್ಯ, ಬೊಳಿಯಂಗಡ ಬೋಪಣ್ಣ, ವೇದಾಂತ್ ಸೋಮಯ್ಯ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ದಿಲನ್ ದೇವಯ್ಯ ಪೂಣಚ್ಚ, ಮುಕ್ಕಾಟಿರ ದಿವಿನ್ ತಿಮ್ಮಯ್ಯ, ನಾಯಕಂಡ ರವಿ ಉತ್ತಪ್ಪ, ಪುಷ್ಪ ಉತ್ತಪ್ಪ, ಪಾಲಚಂಡ ಸದಾ ಪೂವಯ್ಯ, ಕಲಾ ಪೂವಯ್ಯ,ಕಾಂಡೇರ ಲಕ್ಷ್ಮಿ ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿರಾಜಪೇಟೆ ಪೀಠೋಪಕರಣ ತಯಾರಕರ ಹಾಗೂ ಕಾರ್ಮಿಕರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಸಿ.ವಿಜಯಕುಮಾರ್ ಆಯ್ಕೆ*

ಜುಲೈ 14, 2026

*ಕೊಡಗು ಪ್ರೆಸ್ ಕ್ಲಬ್ ಖಜಾಂಚಿಯಾಗಿ ಮನೋಜ್ ಆಯ್ಕೆ*

ಜುಲೈ 14, 2026

*ಮೂರ್ನಾಡು : ಜು.15 ಮತ್ತು 16 ರಂದು ವಿದ್ಯುತ್ ವ್ಯತ್ಯಯ*

ಜುಲೈ 14, 2026

*ಕೊಡಗು ಪ್ರೆಸ್ ಕ್ಲಬ್ ಖಜಾಂಚಿಯಾಗಿ ಮನೋಜ್ ಆಯ್ಕೆ*

ಜುಲೈ 14, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜು.14 NEWS DESK : ಕೊಡಗು ಪ್ರೆಸ್ ಕ್ಲಬ್‌ನ ಖಜಾಂಚಿಯಾಗಿ ಆರ್.ಆರ್.ಮನೋಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಡಗು…

*ಮೂರ್ನಾಡು : ಜು.15 ಮತ್ತು 16 ರಂದು ವಿದ್ಯುತ್ ವ್ಯತ್ಯಯ*

ಜುಲೈ 14, 2026

*ಹೆಗ್ಗಳ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ನೋಟ್ ಬುಕ್ ವಿತರಣೆ*

ಜುಲೈ 14, 2026

*ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ರೂ.20,20,350 ಮೊತ್ತದ ವಿವಿಧ ಮಾದಕ ವಸ್ತುಗಳ ನಾಶ*

ಜುಲೈ 14, 2026

*ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ*

ಜುಲೈ 14, 2026

*ಸೋಮವಾರಪೇಟೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ : ವೈದ್ಯಾಧಿಕಾರಿಗಳಿಗೆ ಸನ್ಮಾನ*

ಜುಲೈ 14, 2026

*ಅರೆಯೂರಿನಲ್ಲಿ ಶ್ರೀ ಸೋಮೇಶ್ವರ ದೇವಾಲಯದ ನೂತನ ಗರ್ಭಗೃಹಕ್ಕೆ ಗರ್ಭನ್ಯಾಸ*

ಜುಲೈ 14, 2026

*ಮಾಜಿ ಸಚಿವರ ಕಾಫಿ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ*

ಜುಲೈ 14, 2026

*ಮಳೆಹಾನಿ : ಶಾಸಕ ಡಾ.ಮಂತರ್ ಗೌಡ ಭೇಟಿ*

ಜುಲೈ 14, 2026

*ಕೊಡಗು : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ಗಣತಿ ನಮೂನೆ ವಿತರಣೆಯಲ್ಲಿ ಶೇ.99 ರಷ್ಟು ಸಾಧನೆ*

ಜುಲೈ 14, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.